AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾಸ್ವಾಮಿ ರೀತಿ ಕಲಬುರಗಿಯಲ್ಲೂ ಕಿಡ್ನಾಪ್ ಮಾಡಿ ಹತ್ಯೆ: ವ್ಯಕ್ತಿ ಕೊಲೆ ಹಿಂದೆ ಹಳೇ ಲವರ್ ಗ್ಯಾಂಗ್

ಕಳೆದ ಒಂದು ವರ್ಷದ ಹಿಂದೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕುಸ್ವಾಮಿಯನ್ನು ಕಿಡ್ನಾಪ್ ಮಾಡಿ ಬಳಿಕ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್​ ನಲ್ಲಿ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಬಳಿಕ ಹತ್ಯೆ ಮಾಡಿತ್ತು. ಈ ಘಟನೆ ಮಾಸುವ ಮುನ್ನವೇ ಇದೇ ಮಾದರಿಯಲ್ಲಿ ಕಲಬುರಗಿಯಲ್ಲೊಂದು ನಡೆದಿದ್ದು, ಹುಡುಗಿ ವಿಚಾರಕ್ಕೆ ವ್ಯಕ್ತಿಯೋರ್ವನನ್ನು ಅಪಹರಿಸಿ ಬಳಿಕ ಭೀಕರವಾಗಿ ಕೊಲೆ ಮಾಡಲಾಗಿದೆ.

ರೇಣುಕಾಸ್ವಾಮಿ ರೀತಿ ಕಲಬುರಗಿಯಲ್ಲೂ ಕಿಡ್ನಾಪ್ ಮಾಡಿ ಹತ್ಯೆ: ವ್ಯಕ್ತಿ ಕೊಲೆ ಹಿಂದೆ ಹಳೇ ಲವರ್ ಗ್ಯಾಂಗ್
Kalaburagi Raghavendra Murder
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Jul 07, 2025 | 4:30 PM

Share

ಕಲಬುರಗಿ, (ಜುಲೈ 07): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಂತೆ (Renukaswamy Murder Case)  ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದ್ದು, ಇದೀಗ ಕಲಬುರಗಿಯಲ್ಲೂ (Kalaburagi) ಸಹ ನಡೆದಿರುವುದು ಬೆಳಕಿಗೆ ಬಂದಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ನಟ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬಳಿಕ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಕೊಲೆ ಮಾಡಿತ್ತು. ಅದೇ ಮಾದರಿಯಲ್ಲಿ ಕಲಬುರಗಿಯಲ್ಲಿ ಕಿರುಕುಳ ನೀಡುತ್ತಿದ್ದಾನೆಂದು ರಾಘವೇಂದ್ರ ನಾಯಕ್ (39) ಎನ್ನುವಾತನನ್ನು  ಹಳೇ ಲವರ್ ಅಶ್ವಿನಿ ಆ್ಯಂಡ್ ಗ್ಯಾಂಗ್ ಮಾರ್ಚ್ 12ರಂದು ಕಿಡ್ನಾಪ್ ಮಾಡಿ ಬಳಿಕ ಹತ್ಯೆ ಮಾಡಿರುವ ಆಘಾತಕಾರಿ ಕೃತ್ಯವೊಂದು ಆ ಪ್ರಕರಣವನ್ನು ಮತ್ತೆ ನೆನಪಿಸಿದೆ.

ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಆ್ಯಂಡ್ ಗ್ಯಾಂಗ್​ ಕಲಬುರಗಿ ನಗರದ ರಾಘವೇಂದ್ರ ನಾಯಕ್ (39) ಎನ್ನುವಾತನ್ನು ಅಪಹರಿಸಿ ಕೀರ್ತಿ ನಗರದಲ್ಲಿರುವ ಸ್ಮಶನಕ್ಕೆ ಕರೆದೊಯ್ದಿದ್ದು, ಬಳಿಕ ರಾಘವೇಂದ್ರನ ಖಾಸಗಿ ಅಂಗಕ್ಕೆ ಹಲ್ಲೆ ಮಾಡಿ ಬಳಿಕ ಬರ್ಬರವಾಗಿ ಕೊಲೆ ಮಾಡಿದೆ. ಈ ಸಂಬಂಧ ಕಿಡ್ನ್ಯಾಪ್ ತನೀಖೆ ಮಾಡುತ್ತಿದ್ದ ಪೊಲೀಸರಿಗೆ ಬೆಚ್ಚಿ ಬಿಳಿಸೋ ಈ ಅಂಶ ಬಯಲಿಗೆ ಬಂದಿದೆ.

ಇದನ್ನೂ ಓದಿ: ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗ ತುಳಿದು ಹಲ್ಲೆ: ರೇಣುಕಾಸ್ವಾಮಿ ರೀತಿ ಮಾಡುತ್ತೇವೆ ಎಂದ ಆರೋಪಿಗಳು

ಮಾಜಿ ಲವರ್ ಆ್ಯಂಡ್ ಗ್ಯಾಂಗ್​ನಿಂದ ಕೃತ್ಯ

ಅಶ್ವಿನಿ ಅಲಿಯಾಸ್ ತನು, ಗುರುರಾಜ್  ಎನ್ನುವಾತನ ಜೊತೆ ಸಲುಗೆ ಬೆಳೆಸಿದ್ದಳು. ಅದಕ್ಕೂ ಮುಂಚೆ ಅಶ್ವಿನಿ ಹಾಗೂ ರಾಘವೇಂದ್ರ ನಡುವೆ ಅಕ್ರಮ ಸಂಬಂಧ ಇತ್ತು. ಬಳಿಕ ಅದೇನಾಯ್ತೋ ಏನೋ ಇಬ್ಬರು ದೂರುವಾಗಿದ್ದು, ಬಳಿಕ ಅಶ್ವಿನಿ, ಗುರುರಾಜ್ ಎನ್ನುವಾತನನ್ನು ಪ್ರೀತಿಸಲಾರಂಭಿಸಿದ್ದಾಳೆ. ಇದು ರಾಘವೇಂದ್ರನ ಆಕ್ರೋಶಕ್ಕೆ ಕಾರಣವಾಗಿದ್ದು, ಮಾಜಿ ಪ್ರೇಯಿಸಿ ಅಶ್ವಿನಿ ಹಿಂದೆ ಬಿದ್ದು ಕಿರುಕುಳ ನೀಡಿದ್ದಾನೆ. ಬಳಿಕ ಅಶ್ವಿನಿ ಈ ವಿಚಾರವನ್ನು ತನ್ನ ಪ್ರಿಯಕರ ಗುರುರಾಜ್​ ಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಗುರುರಾಜ್, ರಾಘವೇಂದ್ರಗೆ ಬುದ್ದಿ ಕಲಿಸಬೇಕೆಂದು ಸ್ಕೆಚ್ ಹಾಕಿದ್ದ. ಅದರಂತೆ ಮಾರ್ಚ್ 12ರಂದು ಅಶ್ವಿನಿ, ಪ್ರಿಯಕರ ಗುರುರಾಜ್ ಆ್ಯಂಡ್ ಗ್ಯಾಂಗ್, ರಾಘವೇಂದ್ರನನ್ನ ಕಿಡ್ನಾಪ್ ಮಾಡಿಕೊಂಡು ಕೀರ್ತಿ ನಗರದ ಸ್ಮಶನಕ್ಕೆ ಕರೆದೊಯ್ದು ಹಲ್ಲೆ ಮಾಡಿದೆ.

ಕೀರ್ತಿ ನಗರದ ಸ್ಮಶಾನಕ್ಕೆ ಆಗಮಿಸಿದ್ದ ಅಶ್ವಿನಿ ಸಹ ರಾಘವೇಂದ್ರ ಮೇಲೆ ಹಲ್ಲೆ ಮಾಡಿ ಕೋಪ ತೀರಿಸಿಕೊಂಡಿದ್ದಾಳೆ. ಇಷ್ಟಕ್ಕೆ ಬಿಡದ ಅಶ್ವಿನಿ ಆ್ಯಂಡ್ ಗ್ಯಾಂಗ್ ರಾಘವೇಂದ್ರನ ಖಾಸಗಿ ಅಂಗಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದೆ. ಬಳಿಕ ರಾಘವೇಂದ್ರ ಮೃತದೇಹವನ್ನು ಕಾರಿನಲ್ಲೇ ರಾಯಚೂರಿನ ಶಕ್ತಿ ನಗರಕ್ಕೆ ಸಾಗಿಸಿ ಬಳಿಕ ನದಿಗೆ ಬಿಸಾಡಿ ಎಸ್ಕೇಪ್ ಆಗಿತ್ತು.

ಇನ್ನೊಂದೆಡೆ ಮಾರ್ಚ್ 12ರಿಂದ ರಾಘವೇಂದ್ರ ಕಾಣೆಯಾಗಿರುವ ಬಗ್ಗೆ ಆತನ ಹೆಂಡ್ತಿ  ಕಲಬುರಗಿ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದಳು. ಈ ದೂರು ಆಧರಿಸಿ ತನಿಖೆಗಿಳಿದ ಕಲಬುರಗಿ ಸ್ಟೇಷನ್ ಬಜಾರ್ ಠಾಣೆ ಪೊಲೀಸರಿಗೆ, ಅಶ್ವಿನಿ ಗ್ಯಾಂಗ್ ಕೃತ್ಯ ಬಟಾಯಬಲಾಗಿದ್ದು, ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಗೆ ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ

ಇನ್ನು ಈ ಪ್ರಕರಣ ಸಂಬಂಧ ಕಲಬುರಗಿಯಲ್ಲಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಪ್ರತಿಕ್ರಿಯಿಸಿದ್ದು, ಕಿಡ್ನ್ಯಾಪ್ ಕೇಸ್ ತನಿಖೆ ನಡೆಸಿದಾಗ ಕೊಲೆ ಎನ್ನುವುದು ಗೊತ್ತಾಗಿದೆ. ಮಾಚ್೯ 12 ರಾಘವೇಂದ್ರ ಕಾಣೆಯಾಗಿದ್ದ. ಈ ಬಗ್ಗೆ ಆತನ ಪತ್ನಿ ದೂರು ನೀಡಿದ್ದಳು. ಕಿಡ್ನ್ಯಾಪ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದೆವು. ಈ ವೇಳೆ ಮೂವರು ಸೇರಿ ಕೊಲೆ ಮಾಡಿದ್ದು ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.

ಅಶ್ವಿನಿ ಎನ್ನೋ ಮಹಿಳೆ ಜೊತೆಗೆ ರಾಘವೇಂದ್ರ ಅಕ್ರಮ ಸಂಬಂಧ ಹೊಂದಿದ್ದ. ಆದ್ರೆ, ಇತ್ತಿಚಗೆ ಅಶ್ವಿನಿ ರಾಘವೇಂದನಿಂದ ದೂರವಾಗಿದ್ದಳು. ಅಲ್ಲದೇ ಗುರುರಾಜ್ ಎನ್ನುವನ ಜೊತೆ ಸಲುಗೆ ಹೊಂದಿದ್ದಳು. ಇದರಿಂದ ರಾಘವೇಂದ್ರ ಕೇರಳಿದ್ದು, ಪದೇ ಪದೇ ಅಶ್ವಿನಿಯನ್ನ ಪೀಡಿಸುತ್ತಿದ್ದ. ಬಳಿಕ ಈ ವಿಷಯವನ್ನ ಅಶ್ವಿನಿ ಗುರುರಾಜ್ ಗೆ ತಿಳಿಸಿದ್ದಳು. ನಂತರ ಇಬ್ಬರು ಫ್ಲ್ಯಾನ್ ಮಾಡಿ‌ ರಾಘವೇಂದ್ರನನ್ನು ಅಪಹರಿಸಿ ಮರ್ಡರ್ ಮಾಡಿದ್ದಾರೆ. ಮಾಚ್೯ 12ರಂದು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದರು. ಬಳಿಕ ಶವವನ್ನ ರಾಯಚೂರಿನ ಶಕ್ತಿನಗರದ ಬಳಿಯಿರುವ ನದಿಗೆ ಹಾಕಿದ್ದರು. ಸದ್ಯ ತನೀಖೆ ವೇಳೆ ಕೊಲೆ ಮಾಡಿದ್ದಾಗಿ ಗೊತ್ತಾಗಿದೆ. ಅಶ್ವಿನಿ, ಗುರುರಾಜ್, ಲಕ್ಷೀಕಾಂತ ಎನ್ನುವ ಮೂವರನ್ನ ಬಂಧಿಸಿದ್ದೆವೆ ಎಂದು ಸ್ಪಷ್ಟಪಡಿಸಿದ್ದಾರೆ.

ದರ್ಶನ್ ಗ್ಯಾಂಗ್ ಹೋಲುವ ಪ್ರಕರಣ

ಹೌದು…ಈ ಪ್ರಕರಣಕ್ಕೂ ರೇಣುಕಾಸ್ವಾಮಿ ಪ್ರಕರಣ ಒಂದೇ ರೀತಿಯಲ್ಲಿದೆ.  ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆಂದು ನಟ ದರ್ಶನ್ ಆ್ಯಂಡ್ ಚಿತ್ರದುರ್ಗ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬಳಿಕ ಬೆಂಗಳೂರಿನಲ್ಲಿರುವ ಪಟ್ಟಣಗೆರೆ ಶೆಡ್​​ಗೆ ತರೆತಂದು ಚಿತ್ರಹಿಂಸೆ ನೀಡಿದೆ. ಬಳಿಕ ಕೊಲೆ ಮಾಡಿ ಸುಮ್ಮನಹಳ್ಳಿ ಬಳಿಕ ಮೋರೆಗೆ ಎಸೆದು ಪರಾರಿಯಾಗಿತ್ತು.  ಇದೇ ಮಾದರಿಯಲ್ಲಿ ​​ ಕಲಬುರಗಿಯಲ್ಲೂ ನಡೆದಿದೆ. ರಾಘವೇಂದ್ರ ತನ್ನ ಹಳೇ ಲವರ್​ಗೆ ಕಿರುಕುಳ ನೀಡಿದ್ದಾನೆಂದು ಆಕೆ ಪ್ರಿಯಕರ ಆ್ಯಂಡ್ ಕಿಡ್ನಾಪ್ ಮಾಡಿ  ಸ್ಮಶಾನಕ್ಕೆ ಕರೆದೊಯ್ದು ಹಲ್ಲೆ ಮಾಡಿ ಹತ್ಯೆಗೈದಿದ್ದು, ಬಳಿಕ ಮೃತದೇಹವನ್ನು ರಾಯಚೂರಿನ ಶಕ್ತಿ ನಗರಕ್ಕೆ ಸಾಗಿ ನದಿಗೆ ಎಸೆದಿತ್ತು. ಸದ್ಯ ಈ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Published On - 3:09 pm, Mon, 7 July 25

ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು