ಜಾರ್ಖಂಡ್: ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿಹಾಕಿ ಕುಂಭ ಮೇಳಕ್ಕೆ ಹೋದ ಮಗ
ಅಸ್ವಸ್ಥರಾಗಿದ್ದ ತಾಯಿಯನ್ನು ಮನೆಯಲ್ಲಿ ಕೂಡಿಹಾಕಿ ಮಗನೊಬ್ಬ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಮೂರು ದಿನಗಳ ಕಾಲ ಆ ವೃದ್ಧೆ ಅನ್ನ, ನೀರಿಲ್ಲದೆ ಸಂಕಟಪಟ್ಟಿದ್ದಾರೆ, ಹಸಿವು ಹಾಗೂ ಸಂಕಟದ ಕೂಗು ಅಕ್ಕಪಕ್ಕದ ಮನೆಯವರಿಗೆ ಕೇಳಿಸಿತ್ತು. ಅವು ಮನೆಯ ಬಾಗಿಲು ಒಡೆದು ಒಳಗೆ ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಹಸಿವಿನಿಂದ ಕಂಗೆಟ್ಟಿದ್ದ ಮಹಿಳೆ ಪ್ಲಾಸ್ಟಿಕ್ ತಿನ್ನಲು ಪ್ರಯತ್ನಿಸುತ್ತಿದ್ದರು. ಕೂಡಲೇ ಜನರು ಅವರಿಗೆ ಆಹಾರ ತಂದುಕೊಟ್ಟರು.

ಜಾರ್ಖಂಡ್, ಫೆಬ್ರವರಿ 20: ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಗನೊಬ್ಬ ಮಹಾಕುಂಭ ಮೇಳಕ್ಕೆ ಹೋದ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಜಾರ್ಖಂಡದ ರಾಮಗಢದ ಮನೆಯೊಂದರಲ್ಲಿ ಬಂಧಿಯಾಗಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮಹಿಳೆಯನ್ನು ಆಕೆಯ ಮಗ ಮನೆಯೊಳಗೆ ಬಂಧಿಯಾಗಿಸಿ, ನಂತರ ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಪ್ರಯಾಗ್ರಾಜ್ಗೆ ಹೋಗಿದ್ದ.
ಮೂರು ದಿನಗಳ ಕಾಲ ಆ ವೃದ್ಧೆ ಅನ್ನ, ನೀರಿಲ್ಲದೆ ಸಂಕಟಪಟ್ಟಿದ್ದಾರೆ, ಹಸಿವು ಹಾಗೂ ಸಂಕಟದ ಕೂಗು ಅಕ್ಕಪಕ್ಕದ ಮನೆಯವರಿಗೆ ಕೇಳಿಸಿತ್ತು. ಅವು ಮನೆಯ ಬಾಗಿಲು ಒಡೆದು ಒಳಗೆ ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಹಸಿವಿನಿಂದ ಕಂಗೆಟ್ಟಿದ್ದ ಮಹಿಳೆ ಪ್ಲಾಸ್ಟಿಕ್ ತಿನ್ನಲು ಪ್ರಯತ್ನಿಸುತ್ತಿದ್ದರು. ಕೂಡಲೇ ಜನರು ಅವರಿಗೆ ಆಹಾರ ತಂದುಕೊಟ್ಟರು.
ಆ ಮಹಿಳೆ ಮಗನನ್ನು ಅಖಿಲೇಶ್ ಪ್ರಜಾಪತಿ ಎಂದು ಗುರುತಿಸಲಾಗಿದೆ. ಸೋಮವಾರ ತನ್ನ ಕುಟುಂಬದವರೊಂದಿಗೆ ಕುಂಭಮೇಳಕ್ಕೆ ಹೊರಟಿದ್ದ, ತಾಯಿ ಸಂಜು ದೇವಿಯನ್ನು ಮನೆಯೊಳಗೆ ಕೂಡಿ ಹಾಕಿದ್ದ. ಆಕೆ ಹತಾಶಳಾಗಿದ್ದಳು, ಆಕೆಯ ಕೂಗು ಕೇಳಿ ಸ್ಥಳೀಯರು ಅನಿವಾರ್ಯವಾಗಿ ಬಾಗಿಲು ಒಡೆಯಬೇಕಾಯಿತು. ಬಳಿಕ ಆಕೆಯ ಮಗಳು ಚಾಂದಿನಿ ದೇವಿಗೆ ಮಾಹಿತಿ ನೀಡಲಾಗಿದೆ.
ಮತ್ತಷ್ಟು ಓದಿ: Mahakumbh Mela: ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮಿಂದು ಪಾಪ ತೊಳೆದುಕೊಳ್ಳಲಿದ್ದಾರೆ 9 ಸಾವಿರ ಕೈದಿಗಳು
ಚಾಂದನಿ ದೇವಿ, ಅವರ ಚಿಕ್ಕಪ್ಪ ಮಾನಸ ಮಹತೋ ಅವರೊಂದಿಗೆ ಸ್ಥಳಕ್ಕೆ ಧಾವಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು, ನಂತರ ಅವರು ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಪೊಲೀಸರು ಮಗನನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅಖಿಲೇಶ್ ಪ್ರಜಾಪತಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡರು, ಸೋಮವಾರ ಬೆಳಿಗ್ಗೆ 11 ಗಂಟೆಗೆ ನಾನು ಮತ್ತು ನನ್ನ ಕುಟುಂಬವು ನನ್ನ ತಾಯಿಗೆ ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಿದ ನಂತರ ಮನೆಯಿಂದ ಹೊರಟಿದ್ದೆವು ಎಂದು ಹೇಳಿದರು.
ಕುಂಭಮೇಳಕ್ಕೆ ಹೋಗಿ ಬನ್ನಿ ಎಂದು ಅವರೇ ಕಳುಹಿಸಿದ್ದರು. ಅವರು ಅಸ್ವಸ್ಥರಾಗಿದ್ದ ಕಾರಣ ಅಲ್ಲಿಗೆ ಕರೆದುಕೊಂಡು ಹೋಗಿಲ್ಲ ಎಂದು ಅವರು ಹೇಳಿದರು. ಪ್ರಯಾಗ್‌ರಾಜ್‌ನಲ್ಲಿ ವೃದ್ಧ ಮಹಿಳೆಯ ಮಗ, ಸೊಸೆ ಮತ್ತು ಮಕ್ಕಳು ಹೊರಗೆ ಹೋಗುವಾಗ ಅವರನ್ನು ಮನೆಯೊಳಗೆ ಬಂಧಿಸಿಡಲಾಗಿದೆ ಎಂಬ ಮಾಹಿತಿ ಬಂದಿರುವುದನ್ನು ರಾಮಗಢ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್ ಇಂಡಿಯಾ ಟುಡೇಗೆ ದೃಢಪಡಿಸಿದ್ದಾರೆ.
ಔಪಚಾರಿಕ ದೂರು ದಾಖಲಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇನ್ಸ್‌ಪೆಕ್ಟರ್ ಕುಮಾರ್ ತಿಳಿಸಿದ್ದಾರೆ. ಇನ್ನುಮುಂದೆ ತಾಯಿಯ ಜವಾಬ್ದಾರಿಯನ್ನು ತಾನೇ ನೋಡಿಕೊಳ್ಳುವುದಾಗಿ ಮಗಳು ಚಾಂದಿನಿ ಹೇಳಿದ್ದಾಳೆ. ಅಲ್ಲಿಗೆ ಹೋಗುವಾಗ ಅಮ್ಮನನ್ನು ತನ್ನ ಬಳಿಯೇ ಬಿಟ್ಟು ಹೋಗಬಹುದಿತ್ತು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




