Suicide: ಹೋಟೆಲ್​ನ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರೂಪದರ್ಶಿ

ಆತ್ಮಹತ್ಯೆಗೂ ಮುನ್ನ ರೂಪದರ್ಶಿ ತನ್ನ ತಂದೆಗೆ ಫೋನ್ ಮಾಡಿ ಕೊನೆಯ ಬಾರಿ ನಿಮ್ಮ ಮುಖವನ್ನು ನೋಡಬೇಕೆನಿಸುತ್ತಿದೆ. ನಾನು ಈ ಪ್ರಪಂಚದಿಂದ ದೂರ ಹೋಗುತ್ತಿದ್ದೇನೆ ಎಂದು ಹೇಳಿದ್ದರು.

Suicide: ಹೋಟೆಲ್​ನ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರೂಪದರ್ಶಿ
ಆತ್ಮಹತ್ಯೆ ತಡೆಯಿರಿ
Edited By:

Updated on: Jan 31, 2022 | 3:46 PM

ಜೈಪುರ: ರಾಜಸ್ಥಾನದ ಜೋಧ್‌ಪುರ ಜಿಲ್ಲೆಯಲ್ಲಿ 19 ವರ್ಷದ ರೂಪದರ್ಶಿಯೊಬ್ಬರು ಹೋಟೆಲ್‌ನ ರೂಮಿನಿಂದ ಹಾರಿ ಜೀವನ ಅಂತ್ಯಗೊಳಿಸಲು ಯತ್ನಿಸಿದ ದಾರುಣ ಘಟನೆ ನಡೆದಿದೆ. 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ (Suicide) ಮಾಡಿಕೊಳ್ಳುವ ಮುನ್ನ ಆಕೆ ತನ್ನ ತಂದೆಗೆ ಫೋನ್ ಮಾಡಿದ್ದರು. 19 ವರ್ಷದ ಗುಂಗುನ್ ಉಪಾಧ್ಯಾಯ ಎಂಬ ಮಾಡೆಲ್ ಶನಿವಾರ ಉದಯಪುರದಿಂದ ಜೋಧ್​ಪುರಕ್ಕೆ ಮರಳಿದ್ದರು. ಈ ವೇಳೆ ತಮ್ಮ ಹೋಟೆಲ್ ರೂಮಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲಿರುವ ವಿಷಯವನ್ನು ಆಕೆಯ ತಂದೆ ಜೋಧ್​ಪುರದ ಪೊಲೀಸರಿಗೆ ತಿಳಿಸಿದ್ದರು. ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ಹೋಟೆಲ್​ಗೆ ತಲುಪುವಷ್ಟರಲ್ಲಿ ಆಕೆ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.

ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ಆಕೆ ಜೋಧ್‌ಪುರದ ಹೋಟೆಲ್ ಲಾರ್ಡ್ಸ್ ಇನ್‌ನಲ್ಲಿ ಉಳಿದುಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಆಕೆ ತನ್ನ ತಂದೆಗೆ ಫೋನ್ ಮಾಡಿ ಕೊನೆಯ ಬಾರಿ ನಿಮ್ಮ ಮುಖವನ್ನು ನೋಡಬೇಕೆನಿಸುತ್ತಿದೆ. ನಾನು ಈ ಪ್ರಪಂಚದಿಂದ ದೂರ ಹೋಗುತ್ತಿದ್ದೇನೆ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಕೂಡಲೇ ಪೊಲೀಸರನ್ನು ಸಂಪರ್ಕಿಸಿದ್ದರು. ಅಧಿಕಾರಿಗಳು ಆಕೆ ಜೋಧ್‌ಪುರದ ಹೋಟೆಲ್‌ನಲ್ಲಿರುವುದನ್ನು ತಿಳಿದು ಅಲ್ಲಿಗೆ ಬಂದಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ತಲುಪುವ ಮೊದಲೇ ರೂಪದರ್ಶಿ ಹೋಟೆಲ್‌ನ ಆರನೇ ಮಹಡಿಯಿಂದ ಜಿಗಿದಿದ್ದರು. ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

6ನೇ ಮಹಡಿಯಿಂದ ಬಿದ್ದ ಪರಿಣಾಮ ಗುಂಗುನ್‌ಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆಯ ಕಾಲುಗಳು ಮತ್ತು ಎದೆಗೆ ಪೆಟ್ಟಾಗಿ ಸಾಕಷ್ಟು ರಕ್ತಸ್ರಾವವಾಗಿದೆ. ಅಪಾರ ಪ್ರಮಾಣದ ರಕ್ತದ ನಷ್ಟದಿಂದಾಗಿ ವೈದ್ಯರು ಆಕೆಗೆ ರಕ್ತ ನೀಡುವ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ: Crime News: ಅಮ್ಮನಿಗೆ ಔಷಧ ತರಲು ಹೋದ ಬಾಲಕಿ ಮೇಲೆ ಪಕ್ಕದ ಮನೆಯವನಿಂದ ಅತ್ಯಾಚಾರ

Murder: ಮರುಮದುವೆಯಾಗಲು ಮುಂದಾದ 80 ವರ್ಷದ ತಂದೆಯನ್ನು ಕೊಚ್ಚಿ ಕೊಂದ ಮಗ!