K. Chandrashekar Rao: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಬೇಡಿಕೆ ಇಟ್ಟ ಸಿಎಂ ಕೆ. ಚಂದ್ರಶೇಖರ ರಾವ್ ನಡೆದು ಬಂದ ದಾರಿ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಜೀವನ, ಅವರು ನಡೆದು ಬಂದ ದಾರಿ, ರಾಜಕೀಯ, ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಕುರಿತು ಇಲ್ಲಿದೆ ಮಾಹಿತಿ

K. Chandrashekar Rao: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಬೇಡಿಕೆ ಇಟ್ಟ ಸಿಎಂ ಕೆ. ಚಂದ್ರಶೇಖರ ರಾವ್ ನಡೆದು ಬಂದ ದಾರಿ
ಕೆ ಚಂದ್ರಶೇಖರ್​ ರಾವ್​​
Follow us
TV9 Web
| Updated By: ವಿವೇಕ ಬಿರಾದಾರ

Updated on: Feb 17, 2023 | 7:25 AM

ತೆಲೆಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (K. Chandrashekar Rao) ಅವರ ಜನ್ಮದಿನ. ಚಂದ್ರಶೇಖರ್​ ರಾವ್​ ಅವರು 17 ಫೆಬ್ರವರಿ 1954 ರಂದು ಇಂದಿನ ತೆಲಂಗಾಣದ ಸಿದ್ದಿಪೇಟ್ ಬಳಿಯ ಚಿಂತಮಡಕ ಗ್ರಾಮದಲ್ಲಿ ಜನಿಸಿದರು. ತಂದೆ ರಾಘವ ರಾವ್ ಮತ್ತು ತಾಯಿ ವೆಂಕಟಮ್ಮ. ಚಂದ್ರಶೇಖರ ರಾವ್​​ ಅವರಿಗೆ 9 ಜನ ಸಹೋದರಿಯರು ಮತ್ತು ಒಬ್ಬರು ಅಣ್ಣ ಇದ್ದಾರೆ. ಅವರು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ತೆಲುಗು ಸಾಹಿತ್ಯದಲ್ಲಿ ಎಂಎ ಪದವಿ ಪಡೆದರು. ಚಂದ್ರಶೇಖರ್ ರಾವ್​ ಅವರು ತಮ್ಮ ರಾಜಕೀಯ ಜೀವನನ್ನು ಕಾಂಗ್ರೆಸ್​ ಪಕ್ಷದಿಂದ ಆರಂಭಿಸಿದರು. ಮುಂದೆ ಇವರು ಕಾಂಗ್ರೆಸ್​ ತೊರೆದು 1983ರಲ್ಲಿ ತೆಲಗು ದೇಶಂ ಪಕ್ಷಕ್ಕೆ ಸೇರಿದರು. 1985ರಲ್ಲಿ ಮೊದಲ ಬಾರಿಗೆ ಸಿದ್ದಿಪೇಟ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಮತ್ತು ಎನ್​. ಟಿ. ರಾಮ್​ ರಾವ್​ ಸಂಪುಟದಲ್ಲಿ ಸಚಿವರಾದರು. ಮುಂದೆ 2000 ರಿಂದ 2001ರ ವೆರೆಗೆ ಆಂದ್ರಪ್ರದೇಶ (ಇಬ್ಬಾಗಕ್ಕೂ ಮೊದಲು) ನ ವಿಧಾನಸಭೆಯ ಉಪಸಭಾಪತಿಯಾಗಿದ್ದರು.

ತೆಲಂಗಾಣ ಪ್ರದೇಶದ ಜನರು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಮತ್ತು ಪ್ರತ್ಯೇಕ ರಾಜ್ಯವೊಂದೇ ಪರಿಹಾರ ಎಂದು ಅವರು ಪ್ರತಿಪಾದಿಸಿದರು. ಈ ಹಿನ್ನೆಲೆ ಅವರು 2001ರಲ್ಲಿ ತೆಲೆಂಗಾಣ ರಾಷ್ಟ್ರ ಸಮೀತಿಯನ್ನು ಸ್ಥಾಪಿಸಿದರು. ಇದನ್ನು ಮುಂದೆ ಭಾರತೀಯ ರಾಷ್ಟ್ರ ಸಮೀತಿ ಎಂದು ಮರು ನಾಮಕರಣ ಮಾಡಿದರು.

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಕೂಗು

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ 2009 ರಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಇವರು ಸತ್ಯಾಗ್ರಾಹ ಪ್ರಾರಂಭಿಸಿದ 11 ದಿವಸಗಳ ನಂತರ ಸಂಸತ್ತನಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಅನುಮತಿ ದೊರೆಯಿತು. ಆಗ ಕೇಂದ್ರ ಸರ್ಕಾರ ಆಂದ್ರ ಪ್ರದೇಶ ಮತ್ತು ತೆಲಂಗಾಣವನ್ನು ಇಬ್ಬಾಗ ಮಾಡಿ, ಎರಡು ಪ್ರತ್ಯೇಕ ರಾಜ್ಯ ಮಾಡಿತು.

2014 ರಲ್ಲಿ ತೆಲೆಂಗಾಣದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ತೆಲೆಂಗಾಣ ರಾಷ್ಟ್ರೀಯ ಸಮೀತಿ ಪಕ್ಷದಿಂದ, ಗಾಜ್ವೆಲ್​​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ತೆಲೆಂಗಾಣ ಪಕ್ಷ 119 ವಿಧಾನಸಭಾ ಕ್ಷೇತ್ರಗಳಲ್ಲಿ 69ರಲ್ಲಿ ವಿಜಯಸಾಧಿಸಿದರೇ, 17 ಲೋಕಸಭಾ ಕ್ಷೇತ್ರಗಳಲ್ಲಿ 11ದರಲ್ಲಿ ಜಯಸಾಧಿಸಿದೆ. ಜಂದ್ರಶೇಖರ ರಾವ್​ ಅವರು ಜೂನ್​ 2 2014 ರಂದು ತೆಲೆಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2022 ಅಕ್ಟೋಬರ್​ 5ರಂದು ತೆಲೆಂಗಾಣ ರಾಷ್ಟ್ರ ಸಮೀತಿಯನ್ನು, ಭಾರತೀಯ ರಾಷ್ಟ್ರ ಸಮೀತಿ ಎಂದು ಮರುನಾಮಕರಣ ಮಾಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?