AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಪಕ್ಷದ ಅಂತಿಮ ಧ್ವನಿ ಎಂದು ಭಾವಿಸುವುದಿಲ್ಲ: ಬಿಜೆಪಿಯ ಛೀಮಾರಿಗೆ ಕಂಗನಾ ರಣಾವತ್ ಪ್ರತಿಕ್ರಿಯೆ

ತಾನು "ಬಹಳ ದೂರ ಸಾಗಬೇಕಾಗಿದೆ". ನನ್ನ ಹೇಳಿಕೆಗಳು ಪಕ್ಷದ ಉದ್ದೇಶ ಅಥವಾ ನೀತಿಗಳಿಗೆ ಅಜಾಗರೂಕತೆಯಿಂದ ಹಾನಿಯನ್ನುಂಟುಮಾಡಿದ್ದರೆ ಅದಕ್ಕೆ ವಿಷಾದಿಸುತ್ತೇನೆ. ನಾನು ಪಕ್ಷದ ಉದ್ದೇಶ, ಅದರ ಸ್ಥಾನ ಅಥವಾ ನೀತಿಯನ್ನು ಪ್ರಾಮಾಣಿಕವಾಗಿ ನೋಯಿಸಿದ್ದರೆ, ನನಗೆ ಅದರಿಂದ ಹೆಚ್ಚು ನೋವಾಗುತ್ತದೆ ಎಂದು ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.

ನಾನು ಪಕ್ಷದ ಅಂತಿಮ ಧ್ವನಿ ಎಂದು ಭಾವಿಸುವುದಿಲ್ಲ: ಬಿಜೆಪಿಯ ಛೀಮಾರಿಗೆ ಕಂಗನಾ ರಣಾವತ್ ಪ್ರತಿಕ್ರಿಯೆ
ಕಂಗನಾ ರಣಾವತ್
ರಶ್ಮಿ ಕಲ್ಲಕಟ್ಟ
|

Updated on:Aug 28, 2024 | 5:00 PM

Share

ದೆಹಲಿ ಆಗಸ್ಟ್ 28: ಬಿಜೆಪಿ ಸಂಸದೆ ಮತ್ತು ಖ್ಯಾತ ಚಿತ್ರನಟಿ ಕಂಗನಾ ರಣಾವತ್ (Kangana Ranaut) ಅವರು ರೈತರ ಪ್ರತಿಭಟನೆಯ ಕುರಿತು ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಬಿಜೆಪಿ (BJP) ಛೀಮಾರಿ ಹಾಕಿದ ನಂತರ ಅವರು ಈ ಬಗ್ಗೆ ಮಾತನಾಡಿದ್ದಾರೆ. ಪಕ್ಷದ ನಾಯಕತ್ವದಿಂದ ನನಗೆ ಛೀಮಾರಿ ಹಾಕಲಾಯಿತು. ಅದು ನನಗೆ ಒಳ್ಳೆಯದು. ನಾನು ಪಕ್ಷದ ಅಂತಿಮ ಧ್ವನಿ ಎಂದು ನಾನು ಭಾವಿಸುವುದಿಲ್ಲ. ಅದನ್ನು ನಂಬಲು ನಾನೇನು ಹುಚ್ಚಿ ಅಥವಾ ಮೂರ್ಖಳಲ್ಲ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕಂಗನಾ ಹೇಳಿದ್ದಾರೆ.

ತಾನು “ಬಹಳ ದೂರ ಸಾಗಬೇಕಾಗಿದೆ”. ನನ್ನ ಹೇಳಿಕೆಗಳು ಪಕ್ಷದ ಉದ್ದೇಶ ಅಥವಾ ನೀತಿಗಳಿಗೆ ಅಜಾಗರೂಕತೆಯಿಂದ ಹಾನಿಯನ್ನುಂಟುಮಾಡಿದ್ದರೆ ಅದಕ್ಕೆ ವಿಷಾದಿಸುತ್ತೇನೆ. ನಾನು ಪಕ್ಷದ ಉದ್ದೇಶ, ಅದರ ಸ್ಥಾನ ಅಥವಾ ನೀತಿಯನ್ನು ಪ್ರಾಮಾಣಿಕವಾಗಿ ನೋಯಿಸಿದ್ದರೆ, ನನಗೆ ಅದರಿಂದ ಹೆಚ್ಚು ನೋವಾಗುತ್ತದೆ” ಎಂದಿದ್ದಾರೆ ಕಂಗನಾ.

ರೈತರ ಪ್ರತಿಭಟನೆ ಬಗ್ಗೆ ಕಂಗನಾ ರಣಾವತ್ ಹೇಳಿದ್ದೇನು?

ಭಾರತದ ಪ್ರಬಲ ನಾಯಕತ್ವ ಇಲ್ಲದಿದ್ದರೆ ರೈತರ ಪ್ರತಿಭಟನೆಯ ಸಂದರ್ಭದಲ್ಲಿ “ಬಾಂಗ್ಲಾದೇಶದಂತಹ ಪರಿಸ್ಥಿತಿ” ಭುಗಿಲೇಳುತ್ತಿತ್ತು ಎಂದಿದ್ದರು ಕಂಗನಾ. ಆಂದೋಲನದ ಸಮಯದಲ್ಲಿ “ದೇಹಗಳು ನೇತಾಡುತ್ತಿವೆ ಮತ್ತು ಅತ್ಯಾಚಾರಗಳು ನಡೆಯುತ್ತಿವೆ ಎಂದು ಆರೋಪಿಸಿದ ಕಂಗನಾ, ಚೀನಾ ಮತ್ತು ಯುಎಸ್‌ನಂತಹ ವಿದೇಶಿ ಶಕ್ತಿಗಳು ಚಳುವಳಿಯಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದ್ದರು. ಕಂಗನಾ ರಣಾವತ್ ಅವರ ಹೇಳಿಕೆಗಳನ್ನು ಖಂಡಿಸಿದ ಬಿಜೆಪಿ ಮತ್ತು ಪಕ್ಷದ ನೀತಿ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಅವರಿಗೆ ಅನುಮತಿ ಅಥವಾ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.

ರೈತರ ಆಂದೋಲನದ ಸಂದರ್ಭದಲ್ಲಿ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ. ಕಂಗನಾ ರಣಾವತ್ ಹೇಳಿಕೆಗೆ ಬಿಜೆಪಿ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸುತ್ತದೆ ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.

“ಭವಿಷ್ಯದಲ್ಲಿ ಈ ರೀತಿಯ ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ಕಂಗನಾ ರಣಾವತ್ ಅವರಿಗೆ ನಿರ್ದೇಶನ ನೀಡಿದೆ”. ರೈತರ ಪ್ರತಿಭಟನೆಯಿಂದ ತೀವ್ರವಾಗಿ ಪ್ರಭಾವಿತವಾಗಿರುವ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಸಾರ್ವಜನಿಕ ಛೀಮಾರಿ ಬಂದಿದೆ.

ಇದನ್ನೂ ಓದಿ: Kangana Ranaut: ಪಕ್ಷದ ನೀತಿ ಬಗ್ಗೆ ಮಾತನಾಡಲು ಕಂಗನಾ ರಣಾವತ್‌ಗೆ ಅಧಿಕಾರವಿಲ್ಲ; ಬಿಜೆಪಿ ಎಚ್ಚರಿಕೆ

ಈ ನಡುವೆ ಕಂಗನಾ, ತಮ್ಮ ಮಾತಿನ ಬಗ್ಗೆ ಹೆಚ್ಚು ಜಾಗರೂಕರಾಗಿರಲು ಮತ್ತು ಪಕ್ಷದ ನೀತಿಗಳೊಂದಿಗೆ ಹೆಚ್ಚು ನಿಕಟವಾಗಿ ಹೊಂದಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. “ನನ್ನ ಮಾತಿನಲ್ಲಿ ಹೆಚ್ಚು ಜಾಗರೂಕರಾಗಿರಲು ಮತ್ತು ಪಕ್ಷದ ನೀತಿಗಳಿಗೆ ಹೊಂದಿಕೆಯಾಗಲು ನಾನು ನೋಡುತ್ತಿದ್ದೇನೆ. ಏಕೆಂದರೆ ಬಿಜೆಪಿಗೆ ಹಮ್ ರಹೇ ಯಾ ನಾ ರಹೇ, ಭಾರತ್ ರೆಹನಾ ಚಾಹಿಯೇ (ನಾವು ಇದ್ದರೂ ಇಲ್ಲದಿದ್ದರೂ ಭಾರತ ಉಳಿಯಬೇಕು)” ಎಂದು ಕಂಗನಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:49 pm, Wed, 28 August 24