33 ಲಕ್ಷದ ವಿಮೆ, ಅಕ್ರಮ ಸಂಬಂಧ: ಮಗನ ಕೊಂದು ಹೆದ್ದಾರಿಯಲ್ಲಿ ಶವ ಎಸೆದ ತಾಯಿ
ತಾಯಿಯೇ ಮಗನ ಕೊಲೆ(Murder) ಮಾಡಿ ಹೆದ್ದಾರಿಯಲ್ಲಿ ಶವ ಎಸೆದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದಕ್ಕೆ ಕಾರಣ 33 ಲಕ್ಷದ ವಿಮೆ ಹಾಗೂ ಆಕೆಗಿರುವ ಅಕ್ರಮ ಸಂಬಂಧ. ಆ ಮಹಿಳೆ ತನ್ನ ಪ್ರಿಯಕರನಿಂದ ತನ್ನ ಮಗನನ್ನು ಕೊಲೆ ಮಾಡಿಸಿ, ಘಟನೆಯನ್ನು ಅಪಘಾತದಂತೆ ಬಿಂಬಿಸಿ, ಶವವನ್ನು ಹೆದ್ದಾರಿಯಲ್ಲಿ ಎಸೆದಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದಾಗ, ಸತ್ಯ ಬೆಳಕಿಗೆ ಬಂದಿದೆ. ಈ ಘಟನೆ ಕಾನ್ಪುರ ದೇಹತ್‌ನ ಅಂಗದ್‌ಪುರ್ ಬರೌರ್ ಗ್ರಾಮದಲ್ಲಿ ನಡೆದಿದೆ.

ಕಾನ್ಪುರ, ಅಕ್ಟೋಬರ್ 30: ತಾಯಿಯೇ ಮಗನ ಕೊಲೆ(Murder) ಮಾಡಿ ಹೆದ್ದಾರಿಯಲ್ಲಿ ಶವ ಎಸೆದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದಕ್ಕೆ ಕಾರಣ 33 ಲಕ್ಷದ ವಿಮೆ ಹಾಗೂ ಆಕೆಗಿರುವ ಅಕ್ರಮ ಸಂಬಂಧ. ಆ ಮಹಿಳೆ ತನ್ನ ಪ್ರಿಯಕರನಿಂದ ತನ್ನ ಮಗನನ್ನು ಕೊಲೆ ಮಾಡಿಸಿ, ಘಟನೆಯನ್ನು ಅಪಘಾತದಂತೆ ಬಿಂಬಿಸಿ, ಶವವನ್ನು ಹೆದ್ದಾರಿಯಲ್ಲಿ ಎಸೆದಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದಾಗ, ಸತ್ಯ ಬೆಳಕಿಗೆ ಬಂದಿದೆ. ಈ ಘಟನೆ ಕಾನ್ಪುರ ದೇಹತ್‌ನ ಅಂಗದ್‌ಪುರ್ ಬರೌರ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ 23 ವರ್ಷದ ಪ್ರದೀಪ್ ಶರ್ಮಾ ಅವರ ಶವ ಅಕ್ಟೋಬರ್ 27 ರಂದು ಔರೈಯಾ-ಕಾನ್ಪುರ್ ಹೆದ್ದಾರಿಯ ಬದಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ, ಈ ಪ್ರಕರಣವು ರಸ್ತೆ ಅಪಘಾತದಂತೆ ಕಂಡುಬಂದರೂ, ಮರಣೋತ್ತರ ಪರೀಕ್ಷೆಯ ವರದಿ ಮತ್ತು ತನಿಖೆಯ ನಂತರ, ಪೊಲೀಸರು ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು.
ಪೊಲೀಸರು ತನಿಖೆ ಆರಂಭಿಸಿದಾಗ, ಆಘಾತಕಾರಿ ವಿಷಯಗಳು ಬಹಿರಂಗಗೊಂಡವು. ಪ್ರದೀಪ್ ಅವರ ಅಜ್ಜ ಜಗದೀಶ್ ನಾರಾಯಣ್, ರಿಷಿ ಕಟಿಯಾರ್ ಅಲಿಯಾಸ್ ರೇಶು ಮತ್ತು ಅವರ ಸಹೋದರ ಮಾಯಾಂಕ್ ಅಲಿಯಾಸ್ ಮನೀಶ್ ವಿರುದ್ಧ ಅಪಹರಣ ಮತ್ತು ಕೊಲೆ ಆರೋಪ ಹೊರಿಸಿ ದೂರು ದಾಖಲಿಸಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರಿಗಾಗಿ ಹುಡುಕಾಟ ಆರಂಭಿಸಿದರು. ಮಂಗಳವಾರ ರಾತ್ರಿ, ನಿಗೋಹಿಯ ದೂರ್ವಶ ಆಶ್ರಮದ ಬಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದಾರೆ. ಇದರಲ್ಲಿ ರಿಷಿಯ ಕಾಲಿಗೆ ಗುಂಡು ಹಾರಿಸಲಾಯಿತು ಮತ್ತು ಇಬ್ಬರೂ ಸಹೋದರರನ್ನು ಬಂಧಿಸಲಾಯಿತು.
ಮತ್ತಷ್ಟು ಓದಿ: ತನ್ನ ತಾಯಿಗೆ ಬೈದಿದ್ದಕ್ಕೆ ವ್ಯಕ್ತಿ ಹತ್ಯೆ: ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಆಟೋ ಡ್ರೈವರ್
ವಿಚಾರಣೆಯ ಸಮಯದಲ್ಲಿ ಅವರು ಹೇಳಿದ ಕಥೆ ಪೊಲೀಸರನ್ನೂ ಬೆರಗುಗೊಳಿಸಿತು. ಪ್ರದೀಪ್‌ನ ತಾಯಿ ಮಮತಾಗೆ ಮನೀಷ್ ಜೊತೆ ಅಕ್ರಮ ಸಂಬಂಧವಿತ್ತು. ಪ್ರದೀಪ್ ಈ ಸಂಬಂಧವನ್ನು ಪತ್ತೆ ಹಚ್ಚಿದ್ದ ಅದನ್ನು ವಿರೋಧಿಸಿದ್ದ. ಇದು ಅವನ ತಾಯಿಯನ್ನು ಕೆರಳಿಸಿತ್ತು. ಪ್ರದೀಪ್ ಹೆಸರಿನಲ್ಲಿ 4, 6, 8 ಮತ್ತು 1.5 ಲಕ್ಷ ಮೌಲ್ಯದ ನಾಲ್ಕು ವಿಮಾ ಪಾಲಿಸಿಗಳಿದ್ದವು. ವಿಮಾ ಹಣದ ದುರಾಸೆಯಿಂದ ಪ್ರೇರಿತಳಾದ ತಾಯಿ, ತನ್ನ ಗೆಳೆಯ ಮನೀಷ್ ಜೊತೆ ಸೇರಿ ತನ್ನ ಮಗನನ್ನು ಕೊಲ್ಲಲು ಯೋಜನೆ ರೂಪಿಸಿದ್ದಳು.
ಅಕ್ಟೋಬರ್ 27 ರಂದು, ಇಬ್ಬರು ಸಹೋದರರು ಪ್ರದೀಪ್ ಅವರನ್ನು ತಮ್ಮ ಕಾರಿನಲ್ಲಿ ಮುಂಗಿಸಾಪುರಕ್ಕೆ ಕರೆದೊಯ್ದರು. ದಾರಿಯಲ್ಲಿ ಕತ್ತು ಹಿಸುಕಿ ಕೊಂದು, ಅಪಘಾತದಂತೆ ಕಾಣುವಂತೆ ಶವವನ್ನು ಔರೈಯಾ-ಕಾನ್ಪುರ್ ಹೆದ್ದಾರಿಯಲ್ಲಿ ಎಸೆದು ಪರಾರಿಯಾಗಿದ್ದರು. ರಿಷಿ ಕಟಿಯಾರ್ ವಿರುದ್ಧ ಝಾನ್ಸಿ ಮತ್ತು ಬರೌರ್‌ನಲ್ಲಿ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಎಎಸ್ಪಿ ರಾಜೇಶ್ ಪಾಂಡೆ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




