ಮದ್ಯಪ್ರಿಯರಿಗೆ ಗುಡ್​ ನ್ಯೂಸ್​, 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಮದ್ಯ

ಕರ್ನಾಟಕ ಸೇರಿದಂತೆ ಈ ಆರು ರಾಜ್ಯಗಳಲ್ಲಿ ಶೀಘ್ರವೇ ಸ್ವಿಗ್ಗಿ, ಬಿಗ್​ ಬಾಸ್ಕೆಟ್ ಹಾಗೂ ಜೊಮ್ಯಾಟೊ ಮೂಲಕ ಮದ್ಯ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮದ್ಯಪ್ರಿಯರಿಗೆ ಗುಡ್​ ನ್ಯೂಸ್​, 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಮದ್ಯ
ಸ್ವಿಗ್ಗಿ, ಜೊಮ್ಯಾಟೊ
Follow us
|

Updated on:Jul 16, 2024 | 10:43 AM

ಮದ್ಯ ಪ್ರಿಯರಿಗೊಂದು ಶುಭ ಸುದ್ದಿ ಇದೆ, ನೀವು ಆನ್​ಲೈನ್​ನಲ್ಲಿ ಆಹಾರವನ್ನು ಆರ್ಡರ್​ ಮಾಡಿ ಮನೆಗೆ ತರಿಸುವಂತೆಯೇ ಇನ್ನುಮುಂದೆ ನಿಮ್ಮ ಮನೆಗೆ ಬಾಗಿಲಿಗೆ ಮದ್ಯವೂ ಸರಬರಾಜಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕರ್ನಾಟಕ, ದೆಹಲಿ, ಹರ್ಯಾಣ, ಪಂಜಾಬ್, ತಮಿಳುನಾಡು, ಗೋವಾ ಹಾಗೂ ಕೇರಳದಲ್ಲಿ ಇದನ್ನು ಮೊದಲು ಜಾರಿಗೆ ತರಲಾಗುತ್ತಿದೆ. ಸ್ವಿಗ್ಗಿ, ಬಿಗ್​ಬಾಸ್ಕೆಟ್, ಜೊಮ್ಯಾಟೊ ಮೂಲಕ ಮದ್ಯ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

2020ರಲ್ಲೇ ಈ ರೀತಿಯ ಪ್ರಸ್ತಾವನೆ ಇತ್ತು, ಮೊದಲ ಬಾರಿಗೆ ಜಾರ್ಖಂಡ್​ನಲ್ಲಿ ಪ್ರಾರಂಭಿಸಲಾಗಿತ್ತು, ಇತರೆ ರಾಜ್ಯಗಳ ಜತೆಯೂ ಮಾತುಕತೆ ನಡೆದಿತ್ತು. ಲಿಕ್ಕರ್ ಆರ್ಡರ್ ಮಾಡಲು ಗ್ರಾಹಕರು ವಯಸ್ಸಿನ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.

10 ನಿಮಿಷಗಳಲ್ಲೇ ಮದ್ಯ ನಿಮ್ಮ ಮನೆಯಲ್ಲಿ ವಾಸ್ತವವಾಗಿ, ಈ ರಾಜ್ಯಗಳು ಪ್ರಾಯೋಗಿಕ ಕಾರ್ಯಕ್ರಮದ ಅಡಿಯಲ್ಲಿ ಸ್ವಿಗ್ಗಿ, ಜೊಮ್ಯಾಟೊ ಹಾಗೂ ಬಿಗ್​ ಬಾಸ್ಕೆಟ್​ನಂತಹ ಇ-ಕಾಮರ್ಸ್​ ಪ್ಲಾಟ್​ಫಾರ್ಮ್​ಗಳ ಮೂಲಕ ಹೋಂ ಡೆಲಿವರಿ ಮಾಡಲು ಆಲೋಚಿಸಿದೆ.

ಮತ್ತಷ್ಟು ಓದಿ: ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಮದ್ಯ ಸೇವಿಸಿ ಸಮುದ್ರಕ್ಕಿಳಿದ ಜನ, ವ್ಹೀಲಿಂಗ್ ಮಾಡಿದ ಐವರ ಬಂಧನ

ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಈ ರಾಜ್ಯಗಳಲ್ಲಿ ಶೀಘ್ರವೇ ಮದ್ಯ ಪ್ರಿಯರಿಗೆ ಈ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಆನ್​ಲೈನ್​ನಲ್ಲಿ ಮದ್ಯ ಕೊಳ್ಳುವವರು ತಮ್ಮ ವಯಸ್ಸನ್ನು ನಮೂದಿಸಲೇಬೇಕು. ಹೊಸ ನಿಯಮಗಳಡಿಯಲ್ಲಿ ದೇಶೀಯ ಮತ್ತು ವಿದೇಶಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಸಾಧ್ಯವಾಗುತ್ತದೆ.

ಇದಕ್ಕಾಗಿ ಮೊಬೈಲ್ ಅಪ್ಲಿಕೇಷನ್ ಅಥವಾ ಆನ್​ಲೈನ್ ವೆಬ್​ ಪೋರ್ಟಲ್ ತೆರೆಯಲಾಗುತ್ತದೆ. ಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮದ್ಯವನ್ನು ಮನೆಗೆ ತಲುಪಿಸಲು ಅನುಮತಿ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಅಸ್ಸಾಂನಲ್ಲಿ ಕೋವಿಡ್ -19 ಲಾಕ್‌ಡೌನ್‌ಗಳ ಸಮಯದಲ್ಲಿ ಮದ್ಯ ವಿತರಣೆಯನ್ನು ತಾತ್ಕಾಲಿಕವಾಗಿ ಅನುಮತಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:39 am, Tue, 16 July 24