Kartavya Path: ದೆಹಲಿಯಲ್ಲಿ ಇಂದು ಸಂಜೆ ಪ್ರಧಾನಿ ಮೋದಿಯಿಂದ ಕರ್ತವ್ಯ ಪಥ ಉದ್ಘಾಟನೆ; ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ
ದೆಹಲಿಯ ಅತ್ಯಂತ ಜನಪ್ರಿಯ ಸಾರ್ವಜನಿಕ ಸ್ಥಳಗಳಲ್ಲಿ ರಾಜಪಥವೂ ಒಂದು. ಪುನರಾಭಿವೃದ್ಧಿ ಮಾಡಲಾದ ಈ ಸ್ಥಳಕ್ಕೆ ಕರ್ತವ್ಯಪಥ ಎಂದು ಹೆಸರಿಡಲಾಗಿದೆ.
ನವದೆಹಲಿ: ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಹೊಸದಾಗಿ ನಾಮಕರಣಗೊಂಡ ಕರ್ತವ್ಯ ಪಥವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಗುರುವಾರ) ಉದ್ಘಾಟಿಸಲಿದ್ದಾರೆ. ಇದುವರೆಗೂ ರಾಜಪಥ (Rajpath) ಎಂದು ಕರೆಸಿಕೊಳ್ಳುತ್ತಿದ್ದ ಈ ಸ್ಥಳ ಇನ್ನುಮುಂದೆ ಕರ್ತವ್ಯ ಪಥ (Kartavya Path) ಎಂದು ಕರೆಸಿಕೊಳ್ಳಲಿದೆ. ಇಂದು ಸಂಜೆ 7 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಈ ಸ್ಥಳದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಅವರ ಪುತ್ಥಳಿಯನ್ನು ಅನಾವರಣಗೊಳಿಸಿ, ಗೌರವ ಸಲ್ಲಿಸಲಿದ್ದಾರೆ. ಈ ಪ್ರತಿಮೆಯನ್ನು 28 ಅಡಿ ಎತ್ತರದ, ಏಕಶಿಲೆಯ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ. ಇದು ಸುಮಾರು 65 ಮೆಟ್ರಿಕ್ ಟನ್ ತೂಕವಿದೆ.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿಯವರನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಸ್ವಾಗತಿಸಲಿದ್ದಾರೆ. ವೇದಿಕೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಟೈಮ್ ಲ್ಯಾಪ್ಸ್ ಆಡಿಯೊ ದೃಶ್ಯವನ್ನು ಪ್ಲೇ ಮಾಡಲಾಗುತ್ತದೆ. ರಾತ್ರಿ 8 ಗಂಟೆಗೆ ‘ಕರ್ತವ್ಯ ಪಥ- ಮೊದಲು ಮತ್ತು ನಂತರ’ ಎಂಬ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಲಾಗುವುದು. ರಾತ್ರಿ 8:05ರ ಸುಮಾರಿಗೆ ಪ್ರಧಾನಿ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
#WATCH | Delhi: Visuals from the redeveloped Kartavya Path that will soon be opened for public use pic.twitter.com/YUoNXFToRL
— ANI (@ANI) September 7, 2022
ದೆಹಲಿಯ ಅತ್ಯಂತ ಜನಪ್ರಿಯ ಸಾರ್ವಜನಿಕ ಸ್ಥಳಗಳಲ್ಲಿ ರಾಜಪಥವೂ ಒಂದು. ಪುನರಾಭಿವೃದ್ಧಿ ಮಾಡಲಾದ ಈ ಸ್ಥಳಕ್ಕೆ ಕರ್ತವ್ಯಪಥ ಎಂದು ಹೆಸರಿಡಲಾಗಿದೆ. ಇದು ಸುಮಾರು 1.1 ಲಕ್ಷ ಚದರ ಮೀಟರ್‌ಗಳ ಸುತ್ತಲೂ ಹಸಿರು ಹೊಂದಿರುವ ಕೆಂಪು ಗ್ರಾನೈಟ್ ನಡಿಗೆ ಮಾರ್ಗಗಳನ್ನು ಹೊಂದಿದೆ. ಕರ್ತವ್ಯ ಪಥದ ಉದ್ದಕ್ಕೂ 133ಕ್ಕೂ ಹೆಚ್ಚು ಲೈಟ್ ಕಂಬಗಳು, 4,087 ಮರಗಳು, 114 ಆಧುನಿಕ ಚಿಹ್ನೆಗಳು ಮತ್ತು ಮೆಟ್ಟಿಲುಗಳ ತೋಟಗಳಿವೆ.
ಇದನ್ನೂ ಓದಿ: ದೆಹಲಿಯ ರಾಜ್ಪಥ್, ಸೆಂಟ್ರಲ್ ವಿಸ್ಟಾ ಪ್ರದೇಶವನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ
ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಪೂರ್ಣಗೊಂಡ ಮೊದಲ ಯೋಜನೆ ಇದಾಗಿದೆ. ಅಧಿಕೃತ ದಾಖಲೆಯ ಪ್ರಕಾರ, ಉದ್ಯಾನಗಳಲ್ಲಿ ಮತ್ತು ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ನಡುವಿನ ಕರ್ತವ್ಯ ಪಥದಲ್ಲಿ ಸೇರಿದಂತೆ 900ಕ್ಕೂ ಹೆಚ್ಚು ಲೈಟ್ ಕಂಬಗಳಿವೆ. 422 ಕೆಂಪು ಗ್ರಾನೈಟ್ ಬೆಂಚುಗಳನ್ನು ಹೊಂದಿರುವ ಸಂಪೂರ್ಣ ಪ್ರದೇಶದಲ್ಲಿ 4 ಪಾದಚಾರಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಿದರೆ 8 ಸೌಕರ್ಯ ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ.
PM Narendra Modi to inaugurate ‘Kartavya Path’ and unveil the statue of Netaji Subhash Chandra Bose at India Gate in Delhi on 8th September.
(File photo) pic.twitter.com/89c1n8OiKE
— ANI (@ANI) September 7, 2022
ಕರ್ತವ್ಯ ಪಥದ ಉದ್ದಕ್ಕೂ 1,10,457 ಚ. ಮೀ.ಗಳಷ್ಟು ಉದ್ದಕ್ಕೆ ಹರಡಿರುವ ಹೊಸ ಕೆಂಪು ಗ್ರಾನೈಟ್ ವಾಕ್‌ವೇಗಳನ್ನು ರಚಿಸಲಾಗಿದೆ. ಕರ್ತವ್ಯ ಪಥದಲ್ಲಿ 987 ಕಾಂಕ್ರೀಟ್ ಕಂಬಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: Central Vista Avenue: ಇಂದು ಪ್ರಧಾನಿ ಮೋದಿಯಿಂದ ಸೆಂಟ್ರಲ್ ವಿಸ್ಟಾ ಅವೆನ್ಯೂ ಲೋಕಾರ್ಪಣೆ
ಈ ಹಿಂದೆ ರಾಜಪಥದಲ್ಲಿ ಸಾರ್ವಜನಿಕ ಶೌಚಾಲಯಗಳು, ಕುಡಿಯುವ ನೀರು, ರಸ್ತೆ ಪೀಠೋಪಕರಣಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳದಂತಹ ಮೂಲಭೂತ ಸೌಕರ್ಯಗಳು ಲಭ್ಯವಿರಲಿಲ್ಲ. ಈ ಪ್ರದೇಶದಲ್ಲಿ ಅಸಮರ್ಪಕ ಫಲಕಗಳು, ನೀರಿನ ವೈಶಿಷ್ಟ್ಯಗಳ ಕಳಪೆ ನಿರ್ವಹಣೆ ಮತ್ತು ಅಡ್ಡಾದಿಡ್ಡಿ ಪಾರ್ಕಿಂಗ್, ಅವ್ಯವಸ್ಥೆಯನ್ನು ಹೆಚ್ಚಿಸಿತ್ತು. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ರಾಜಪಥವನ್ನು ಕರ್ತವ್ಯ ಪಥವನ್ನಾಗಿ ಬದಲಾಯಿಸಿ, ಹೊಸ ವಿನ್ಯಾಸ ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 am, Thu, 8 September 22