ನಕಲಿ‌ ಕಲಾಕೃತಿ ಮಾರಾಟ ಮಾಡಿ 10 ಕೋಟಿ ವಂಚನೆ; ಕೇರಳ‌ ಮೂಲದ ಯೂಟ್ಯೂಬರ್ ಮಾವುಂಗಲ್ ಬಂಧನ

| Updated By: shruti hegde

Updated on: Sep 29, 2021 | 7:33 AM

ಟಿಪ್ಪು ಸುಲ್ತಾನ ಸಿಂಹಾಸನ, ಔರಂಗಜೇಬನ ಉಂಗುರ ಸೇರಿದಂತೆ ಇತರ ಅಪರೂಪದ ಕಲಾಕೃತಿಗಳು ತನ್ನ ಬಳಿ ಇದೆ ಎಂದು ಯೂಟ್ಯೂಬರ್ ಹೇಳಿಕೊಂಡಿದ್ದರು. ಇದರಿಂದ ಜನರಿಗೆ ಮೋಸ ಮಾಡಿ ಹಣವನ್ನು ವಂಚಿಸಿದ್ದಾರೆ.

ನಕಲಿ‌ ಕಲಾಕೃತಿ ಮಾರಾಟ ಮಾಡಿ 10 ಕೋಟಿ ವಂಚನೆ; ಕೇರಳ‌ ಮೂಲದ ಯೂಟ್ಯೂಬರ್ ಮಾವುಂಗಲ್ ಬಂಧನ
ಮೋನ್ಸನ್ ಮಾವುಂಗಲ್ (Photo: ANI)
Follow us on

ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ 52 ವರ್ಷದ ಯೂಟ್ಯೂಬರ್ ಮೋನ್ಸನ್ ಮಾವುಂಗಲ್​ರನ್ನು ಬಂಧಿಸಲಾಗಿದೆ. ಕೇರಳ ಮೂಲದ ಯೂಟ್ಯೂಬರ್ ಮಾವುಂಕಲ್, ಕಳೆದ ಹಲವು ವರ್ಷಗಳಿಂದ ಕಲಾಕೃತಿಗಳ ಮತ್ತು ಪುರಾತನ ವಸ್ತುಗಳ ಸಂಗ್ರಹಿಸುತ್ತಿದ್ದಂತೆ ನಟಿಸುತ್ತ ಜನರಿಗೆ 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಪ್ಪು ಸುಲ್ತಾನ ಸಿಂಹಾಸನ, ಔರಂಗಜೇಬನ ಉಂಗುರ ಸೇರಿದಂತೆ ಇತರ ಅಪರೂಪದ ಕಲಾಕೃತಿಗಳು ತನ್ನ ಬಳಿ ಇದೆ ಎಂದು ಯೂಟ್ಯೂಬರ್ ಹೇಳಿಕೊಂಡಿದ್ದರು. ಇದರಿಂದ ಜನರಿಗೆ ಮೋಸ ಮಾಡಿ ಹಣವನ್ನು ವಂಚಿಸಿದ್ದರು.

ಗಲ್ಫ್ ದೇಶಗಳಲ್ಲಿ ತಾವು ಮಾರಿದ ಕಲಾಕೃತಿಗಳಿಗೆ ನೀಡಿದ ಹಣ ಬ್ಯಾಂಕ್​ನಲ್ಲಿದೆ, ವಿದೇಶಿ ಬ್ಯಾಂಕ್ ಖಾತೆಯಲ್ಲಿ ಸಿಲುಕೊಂಡಿವೆ ಎಂದು ಜನರನ್ನು ನಂಬಿಸಿದ್ದರು. ಕೊಚ್ಚಿಯಲ್ಲಿರುವ ಯೂಟ್ಯೂಬರ್ ಬಾಡಿಗೆ ಮನೆಯಲ್ಲಿ ಅವರ ಬಳಿಯಿದ್ದ ಬಹುತೇಕ ಕಲಾಕೃತಿಗಳು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ನಕಲಿ ಉತ್ಪನ್ನಗಳು ಎಂಬ ವಿಷಯ ಬೆಳಕಿಗೆ ಬಂದಿದೆ.

ಯಾಕೂಬ್ ಪುರಯಿಲ್, ಅನೂಪ್ ವಿ ಅಹ್ಮದ್, ಸಲೀಂ ಎಡತಿಲ್, ಎಮ್ ಟಿ ಶಮೀರ್, ಸಿದ್ಧಿಕ್ ಪುರಯಿಲ್ ಮತ್ತು ಶನಿಮೋನ್ ಅವರಿಂದ 2017ರಿಂದ ಇಲ್ಲಿಯವರೆಗೆ ಯೂಟ್ಯೂಬರ್ 10 ಕೋಟಿ ರೂಪಾಯಿ ಮೋಸ ಮಾಡಿದ್ದಾರೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ಕಳೆದ ಕೆಲವು ವರ್ಷಗಳಲ್ಲಿ ಮೋನ್ಸನ್ ಮಾವುಂಗಲ್ ರಾಜಕೀಯ, ಸಿನಿಮಾ ಕ್ಷೇತ್ರ ಹೀಗೆ ಅನೇಕ ಜನರ ಸಂಪರ್ಕ ಹೊಂದಿದ್ದರು. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಯೂಟ್ಯೂಬರ್ ಜನರ ಬಳಿ ಹೋಗಲು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರನ್ನು ಬಳಸಿಕೊಳ್ಳುತ್ತಿದ್ದರು.

ಕೆಪಿಸಿಸಿ ನಾಯಕ ಎಂಪಿ ಕೆ ಸುಧಾಕರನ್ ಅವರ ಆಶ್ವಾಸನೆಯ ಮೇರೆಗೆ ಯೂಟ್ಯೂಬರ್ ಮೋನ್ಸನ್​ಗೆ 25 ಲಕ್ಷ ನೀಡಲಾಗಿದೆ ಎಂದು ದೂರುದಾರರು ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ಕೆ ಸುಧಾಕರನ್​, ನನಗೆ ಮೋನ್ಸನ್ ಗೊತ್ತು, ಆದರೆ ಹಣಕಾಸಿನ ವ್ಯವಹಾರದಲ್ಲಿ ನಾನು ಭಾಗಿಯಾಗಿಲ್ಲ. ಪ್ರಕರಣದ ಅರ್ಜಿದಾರರಿಗೆಗೆ ನನಗೆ ಯಾವುದೇ ಸಂಬಂಧವಿಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿಂದೆ ನನ್ನ ವಿರುದ್ಧ ಪಿತೂರಿ ನಡೆಸುವ ಸಂಚಿದೆ ಎಂದು ಅವರು ಮಾತನಾಡಿದ್ದಾರೆ.

ಇದನ್ನೂ ಓದಿ:

ಕೇರಳದಲ್ಲಿ ಬೀಗಲ್ ತಳಿಯ ನಾಯಿಗಳಿಗೆ ಸಾಂಪ್ರದಾಯಿಕ ಮದುವೆ; ವಿವಾಹದಲ್ಲಿ ಭರ್ಜರಿ ಊಟ, ಫೋಟೋ ಶೂಟ್​ ವ್ಯವಸ್ಥೆ!

ಕೇರಳ ಸರ್ಕಾರದ ಉದ್ದೇಶಿತ ಆನ್​​ಲೈನ್ ರಮ್ಮಿ ನಿಷೇಧವನ್ನು ರದ್ದುಗೊಳಿಸಿದ ಹೈಕೋರ್ಟ್

(Kerala youtuber arrested for fake artefacts)

Published On - 2:24 pm, Tue, 28 September 21