Kerala Assembly Elections 2021: ಕೇರಳ ಕಾಂಗ್ರೆಸ್-ಎಂ ಅಭ್ಯರ್ಥಿಯಾಗಿ ಪಿರವಂನಿಂದ ಸ್ಪರ್ಧಿಸಲಿರುವ ಸಿಂಧುಮೋಳ್​ನ್ನು ಪಕ್ಷದಿಂದ ಉಚ್ಚಾಟಿಸಿದ ಸಿಪಿಎಂ

Kerala Assembly Elections: ಸಿಪಿಎಂ ಉಳವೂರ್ ಬ್ರಾಂಚ್ ಕಮಿಟಿ ಸದಸ್ಯೆ ಮತ್ತು ಉಳವೂರ್ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆಯಾಗಿರುವ, ವೃತ್ತಿಯಲ್ಲಿ ವೈದ್ಯೆಯಾಗಿರುವ ಸಿಂಧುಮೋಳ್ ಅವರನ್ನು ಕೇರಳ ಕಾಂಗ್ರೆಸ್ (ಎಂ) ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು.

Kerala Assembly Elections 2021: ಕೇರಳ ಕಾಂಗ್ರೆಸ್-ಎಂ ಅಭ್ಯರ್ಥಿಯಾಗಿ ಪಿರವಂನಿಂದ ಸ್ಪರ್ಧಿಸಲಿರುವ ಸಿಂಧುಮೋಳ್​ನ್ನು ಪಕ್ಷದಿಂದ ಉಚ್ಚಾಟಿಸಿದ ಸಿಪಿಎಂ
ಸಿಂಧುಮೋಳ್ ಜೇಕಬ್ (ಕೃಪೆ: ಫೇಸ್​ಬುಕ್)
Follow us
ರಶ್ಮಿ ಕಲ್ಲಕಟ್ಟ
|

Updated on:Mar 11, 2021 | 4:36 PM

ಕೋಟ್ಟಯಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕೋಟ್ಟಯಂ ಜಿಲ್ಲೆಯ ಪಿರಂವಂ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಸಿಂಧುಮೋಳ್ ಜೇಕಬ್ ಅವರನ್ನು ಸಿಪಿಎಂ ಉಳವೂರ್ ಸ್ಥಳೀಯ ಸಮಿತಿ ಉಚ್ಚಾಟಿಸಿದೆ . ಈ ಬೆಳವಣಿಗೆಯ ಬೆನ್ನಲ್ಲೇ ಉಳವೂರ್ ಸ್ಥಳೀಯ ಸಮಿತಿಯ ಕ್ರಮವನ್ನು ಜಿಲ್ಲಾ ಕಾರ್ಯದರ್ಶಿ ವಿ.ಎನ್.ವಾಸವನ್ ಪ್ರಶ್ನಿಸಿದ್ದಾರೆ. ಯಾವುದೇ ಸದಸ್ಯರನ್ನು ಉಚ್ಚಾಟಿಸಲು ಸ್ಥಳೀಯ ಸಮಿತಿಗೆ ಅಧಿಕಾರವಿಲ್ಲ. ಈ ಕ್ರಮದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ವಾಸವನ್ ಹೇಳಿದ್ದಾರೆ.

ಜನಪ್ರತಿನಿಧಿಯಾಗಿ ಚುನಾವಣೆ ಸ್ಪರ್ಧಿಸಲು ಯೋಗ್ಯ ವ್ಯಕ್ತಿಯಾಗಿದ್ದಾರೆ ಸಿಂಧುಮೋಳ್ ಜೇಕಬ್. ಪಂಚಾಯತ್, ಬ್ಲಾಕ್ ಮಟ್ಟದಲ್ಲಿ ಅವರಿಗೆ ಕೆಲಸ ಮಾಡಿ ಅನುಭವವಿದೆ. ಅವರಿಗೆ ವಹಿಸಿದ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಾರೆ. ಇನ್ನುಳಿದ ವಿಷಯಗಳನ್ನು ಚುನಾವಣೆಯ ನಂತರ ಚರ್ಚೆ ಮಾಡಬಹುದು. ಪಕ್ಷದ ನಿಯಮಗಳ ಪ್ರಕಾರ ಪಕ್ಷದಿಂದ ಒಬ್ಬರನ್ನು ಉಚ್ಚಾಟಿಸುವ ಹಕ್ಕು ಇರುವುದು ಜಿಲ್ಲಾ ಸಮಿತಿಗೆ. ಆ ರೀತಿಯ ಕ್ರಮಗಳನ್ನು ನಾವು ಕೈಗೊಂಡಿಲ್ಲ. ಅವರು ಪಕ್ಷದಿಂದ ಹೊರಹೋಗುವ ಸಂದರ್ಭ ಬಂದರೆ ಆ ಬಗ್ಗೆ ಅಮೇಲೆ ಚರ್ಚಿಸೋಣ. ಸಿಂಧುಮೋಳ್ ಇಲ್ಲಿಯವರೆಗೆ ಎಲ್​ಡಿಎಫ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇನ್ನೊಂದು ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸುವುದಾದರೆ ಸಿಪಿಎಂ ಸದಸ್ಯತ್ವದಿಂದ ಹೊರಹೋಗಬೇಕು. ಬ್ರಾಂಚ್ ಕಮಿಟಿ ಸದಸ್ಯತ್ವವನ್ನು ಸಿಂಧು ಅವರು ನವೀಕರಿಸದೇ ಇದ್ದರೆ ಅವರಿಗೆ ಪಕ್ಷ ಬಿಟ್ಟು ಹೋಗಲು ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ ಜಿಲ್ಲಾ ಕಾರ್ಯದರ್ಶಿ.

ಸಿಪಿಎಂ ಉಳವೂರ್ ಬ್ರಾಂಚ್ ಕಮಿಟಿ ಸದಸ್ಯೆ ಮತ್ತು ಉಳವೂರ್ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆಯಾಗಿರುವ, ವೃತ್ತಿಯಲ್ಲಿ ವೈದ್ಯೆಯಾಗಿರುವ ಸಿಂಧುಮೋಳ್ ಅವರನ್ನು ಕೇರಳ ಕಾಂಗ್ರೆಸ್ (ಎಂ) ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಪಕ್ಷ ವಿರೋಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಉಳವೂರ್ ಸ್ಥಳೀಯ ಸಮಿತಿ ಸಿಂಧುಮೋಳ್ ಅವರನ್ನು ಉಚ್ಚಾಟಿಸಿರುವುದಾಗಿ ಹೇಳಿತ್ತು. ಆದರೆ ನಾನು ಸ್ಪರ್ಧಿಸುತ್ತಿರುವುದು ಪಕ್ಷಕ್ಕೆ ತಿಳಿದಿತ್ತು ಎಂದು ಸಿಂಧುಮೋಳ್ ಪ್ರತಿಕ್ರಿಯಿಸಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಸಿಂಧುಮೋಳ್ ಪ್ರತಿಕ್ರಿಯೆ ಸಿಪಿಎಂ ರಾಜ್ಯ ನಾಯಕತ್ವದ ಅನುಮತಿ ಪಡೆದ ನಂತರವೇ ಕೇರಳ ಕಾಂಗ್ರೆಸ್ (ಎಂ)ನಿಂದ ಸ್ಪರ್ಧಿಸುತ್ತಿರುವುದಾಗಿ ನಿರ್ಧಾರ ಪ್ರಕಟಿಸಿದ್ದು ಎಂದು ಎಲ್​ಡಿಎಫ್ ಅಭ್ಯರ್ಥಿ ಡಾ.ಸಿಂಧುಮೋಳ್ ಜೇಕಬ್ ಹೇಳಿದ್ದಾರೆ. ಇನ್ನು ಕೇರಳ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಿ  ಎರಡು ಎಲೆ ಚಿಹ್ನೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಸಿಂಧುಮೋಳ್ ಹೇಳಿದ್ದಾರೆ. ಸಿಪಿಎಂ ಉಳವೂರ್ ಬ್ರಾಂಚ್ ಕಮಿಟಿಯಿಂದ ಉಚ್ಚಾಟಿಸಿದ್ದು ಪ್ರಾದೇಶಿಕ ನಾಯಕತ್ವದ ನಿಯಮದ ಪ್ರಕಾರವಾಗಿದೆ.

ಪಿರವಂ ಮತ್ತು ಕಡುತುರುತ್ತಿಯಲ್ಲಿ ನನ್ನ ಹೆಸರು ಚರ್ಚೆಗೆ ಬಂದಿದ್ದಕೂ ಅಭ್ಯರ್ಥಿಯಾಗುತ್ತೇನೆ ಎಂಬುದು ತಿಳಿದಿರಲಿಲ್ಲ. ಸಿಪಿಎಂಗೆ ಒಪ್ಪಿಗೆಯಾದರೆ ಎಲ್​ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದಕ್ಕೆ ಸಮಸ್ಯೆ ಇರಲ್ಲ ಎಂಬುದು ನನ್ನ ನಿಲುವು ಆಗಿತ್ತು. ಹಿಂದಿನ ದಿನ ಜೋಸ್ ಕೆ ಮಾಣಿ ಕರೆ ಮಾಡಿದಾಗಲೇ ನಾನು ಅಭ್ಯರ್ಥಿಯಾಗಿದ್ದೇನೆ ಎಂಬ ವಿಷಯ ನನ್ನ ಅರಿವಿಗೆ ಬಂದಿದ್ದು. ಎರಡು ಎಲೆ ಚಿಹ್ನೆಯಲ್ಲೇ ನಾನು ಸ್ಪರ್ಧಿಸುತ್ತೇನೆ. ಪಿರವಂನಲ್ಲಿ ನಾನು ಎಲ್​ಡಿಎಫ್ ಮೈತ್ರಿಕೂಟದ ಅಭ್ಯರ್ಥಿಯಾಗಿರುತ್ತೇನೆ ಎಂದಿದ್ದಾರೆ ಸಿಂಧು.

ಜೋಸ್.ಕೆ. ಮಾಣಿ ನೇತೃತ್ವದ ಕೇರಳ ಕಾಂಗ್ರೆಸ್ (ಎಂ) ಎಲ್ ಡಿಎಫ್ ಮೈತ್ರಿಕೂಟದಲ್ಲಿರುವ ಪಕ್ಷವಾಗಿದ್ದು, ಸಿಂಧುಮೋಳ್ ಕೇರಳ ಕಾಂಗ್ರೆಸ್ (ಎಂ) ಪಕ್ಷದಿಂದ ಕಣಕ್ಕಿಳಿಯುವುದಾದರೆ ಸಿಪಿಎಂ ತೊರೆಯಲೇಬೇಕಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ಪಕ್ಷ ತೊರೆದ ಕೇರಳದ ಹಿರಿಯ ನಾಯಕ ಪಿ.ಸಿ.ಚಾಕೊ

Kerala Assembly Elections 2021: ಕೇರಳ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಎಂ, ಯುವ ನಾಯಕರಿಗೆ ಮಣೆ

Published On - 4:34 pm, Thu, 11 March 21

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ