AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಕೊರೊನಾ ಲಸಿಕೆ ಕೊವಿಶೀಲ್ಡ್​, ಸೆರಮ್​ ಸಂಸ್ಥೆ ಜೊತೆ ಮಾತುಕತೆ ನಡೆಸಿದ ಕೇಂದ್ರ

ಇದೀಗ ಕೇಂದ್ರ ಸರ್ಕಾರ ಈ ಲಸಿಕಾ ತಯಾರಿಕಾ ಸಂಸ್ಥೆ ಸೆರಮ್​ ಜೊತೆ ಮಾತುಕತೆ ನಡೆಸಿದ್ದು, ಕೊವಿಶೀಲ್ಡ್​ ಲಸಿಕೆಯನ್ನು ಪ್ರತಿ ಡೋಸ್​ಗೆ ₹157.50 ನೀಡಿ ಖರೀದಿಸಲು ನಿರ್ಧರಿಸಿದೆ. ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗೆ ಪ್ರತಿ ಡೋಸ್​ಗೆ ₹157.50ರಂತೆ ನೀಡಿ ಒಟ್ಟು ಹತ್ತು ಕೋಟಿ ಡೋಸ್​ ಕೊವಿಶೀಲ್ಡ್​ ಲಸಿಕೆ ಖರೀದಿಸಲು ತೀರ್ಮಾನಿಸಲಾಗಿದೆ.

ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಕೊರೊನಾ ಲಸಿಕೆ ಕೊವಿಶೀಲ್ಡ್​, ಸೆರಮ್​ ಸಂಸ್ಥೆ ಜೊತೆ ಮಾತುಕತೆ ನಡೆಸಿದ ಕೇಂದ್ರ
ಸೆರಮ್ ಇನ್ಸ್‌ಟಿಟ್ಯೂಟ್‌ನ ಕೊವಿಶೀಲ್ಡ್ ಲಸಿಕೆ
Skanda
|

Updated on:Mar 11, 2021 | 5:01 PM

Share

ದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಮೂರನೇ ಹಂತದತ್ತ ಸಾಗುತ್ತಿದೆ. ಜನವರಿಯಿಂದ ಆರಂಭವಾಗಿರುವ ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತೀಯ ಮೂಲದ ಲಸಿಕೆಗಳನ್ನೇ ವಿತರಿಸಲಾಗುತ್ತಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್​ ಮತ್ತು ಆಕ್ಸ್​ಫರ್ಡ್​ ಹಾಗೂ ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ, ಪುಣೆಯ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ತಯಾರಾದ ಕೊವಿಶೀಲ್ಡ್​ ಲಸಿಕೆಯನ್ನು ದೇಶದೆಲ್ಲೆಡೆ ವಿತರಿಸಲಾಗಿದೆ. ಇದೀಗ ಕೇಂದ್ರ ಸರ್ಕಾರ ಈ ಲಸಿಕಾ ತಯಾರಿಕಾ ಸಂಸ್ಥೆ ಸೆರಮ್​ ಜೊತೆ ಮಾತುಕತೆ ನಡೆಸಿದ್ದು, ಕೊವಿಶೀಲ್ಡ್​ ಲಸಿಕೆಯ ಪ್ರತಿ ಡೋಸ್​ಗೆ ₹157.50 ನೀಡಿ ಖರೀದಿಸಲು ನಿರ್ಧರಿಸಿದೆ.

ಮೊದಲ ಹಂತದಲ್ಲಿ ಪ್ರತಿ ಡೋಸ್​ಗೆ ₹210ನೀಡಿ ಖರೀದಿಸಲಾಗಿದ್ದ ಕೊವಿಶೀಲ್ಡ್​ ಲಸಿಕೆಗೆ ಇದೀಗ ₹150 ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಶೇಕಡಾ 5ರಷ್ಟು ಜಿಎಸ್​ಟಿ ನಂತರ ಲಸಿಕೆಯ ಬೆಲೆ ₹157.50 ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಕಾರಣದಿಂದಾಗಿ ಕೊವಿಶೀಲ್ಡ್​ ಕೊರೊನಾ ಲಸಿಕೆ ಬೆಲೆ ಮೊದಲಿಗಿಂತಲೂ ಮತ್ತಷ್ಟು ಅಗ್ಗವಾಗಿದ್ದು, ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಕೊವಿಡ್​ 19 ಲಸಿಕೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ವಿತರಿಸಲಾಗುತ್ತಿದ್ದು, ಇದೀಗ ಕೇಂದ್ರ ಸರ್ಕಾರವು ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗೆ ಪ್ರತಿ ಡೋಸ್​ಗೆ ₹157.50ರಂತೆ ನೀಡಿ ಒಟ್ಟು ಹತ್ತು ಕೋಟಿ ಡೋಸ್​ ಕೊವಿಶೀಲ್ಡ್​ ಲಸಿಕೆ ಖರೀದಿಸಲು ನಿರ್ಧರಿಸಿದೆ.

ಇನ್ನೊಂದೆಡೆ, ಭಾರತೀಯ ಸಂಸ್ಥೆ ಭಾರತ್​ ಬಯೋಟೆಕ್​ ತಯಾರಿಸಿದ ಕೊವ್ಯಾಕ್ಸಿನ್​ ಲಸಿಕೆಗೆ ಅಂತಿಮವಾಗಿ ವೈದ್ಯಕೀಯ ಪ್ರಯೋಗ ಹಂತದಲ್ಲಿರುವ ಲಸಿಕೆ ಎಂಬ ಪಟ್ಟದಿಂದ ಮುಕ್ತಿ ಸಿಕ್ಕಿದೆ. ಕೊವ್ಯಾಕ್ಸಿನ್​ ಲಸಿಕೆ ವಿತರಣೆಗೆ ಸರ್ಕಾರ ಅನುಮತಿ ಸೂಚಿಸಿದ ಸಂದರ್ಭದಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಹಲವರು ಕಟುವಾಗಿ ಟೀಕಿಸಿದ್ದರು ಹಾಗೂ ಲಸಿಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು. ವೈದ್ಯಕೀಯ ಪ್ರಯೋಗ ಹಂತದಲ್ಲಿರುವ ಲಸಿಕೆಯನ್ನು ಜನರಿಗೆ ನೀಡಿದ ನಂತರ ಏನಾದರೂ ಹೆಚ್ಚೂಕಡಿಮೆ ಆದರೆ ಯಾರು ಗತಿ ಎಂಬ ಆತಂಕ ಅನೇಕರನ್ನು ಕಾಡಿತ್ತು. ಆದರೂ ಸರ್ಕಾರ, ಸಂಸ್ಥೆ ಮತ್ತು ಕೆಲ ತಜ್ಞರು ಲಸಿಕೆಯ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ಬೇಡ ಎಂದು ಪದೇ ಪದೇ ಧೈರ್ಯ ತುಂಬುತ್ತಲೇ ಬಂದಿದ್ದರು.

ಇದೀಗ, ಕೊವ್ಯಾಕ್ಸಿನ್​ ಲಸಿಕೆಯನ್ನು ವೈದ್ಯಕೀಯ ಪ್ರಯೋಗ ಹಂತದಿಂದ ತೆಗೆಯಲು ಮಾಡಿದ್ದ ವಿಷಯ ತಜ್ಞರ ಸಮಿತಿ ಶಿಫಾರಸನ್ನು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನ (DCGI) ಒಪ್ಪಿಕೊಂಡಿದೆ. ಈ ಬಗ್ಗೆ ಭಾರತ್ ಬಯೋಟೆಕ್​ ಸಂಸ್ಥೆಗೆ ಮಾಹಿತಿಯನ್ನೂ ನೀಡಲಾಗಿದ್ದು, ಕೊವ್ಯಾಕ್ಸಿನ್ ಲಸಿಕೆ ವೈದ್ಯಕೀಯ ಪ್ರಯೋಗದ ಹಂತದಲ್ಲಿದೆ ಎನ್ನುವುದನ್ನು ತೆಗೆಯಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ ನಂತರ ಏನು ಮಾಡಬಹುದು.. ಏನು ಮಾಡಬಾರದು?

ನರೇಂದ್ರ ಮೋದಿ ತಾಯಿಗೆ ಕೊರೊನಾ ಲಸಿಕೆ; ಅರ್ಹರೆಲ್ಲರೂ ಲಸಿಕೆ ಪಡೆಯಿರಿ ಎಂದು ಕರೆ ನೀಡಿದ ಪ್ರಧಾನಿ

Published On - 4:58 pm, Thu, 11 March 21