ಪಾಕಿಸ್ತಾನದ 5 ಲಕ್ಷ ಯುವತಿಯರು ಭಾರತದವರನ್ನು ಮದುವೆಯಾಗಿದ್ದಾರೆ, ಆದರೆ ಭಾರತದ ಪೌರತ್ವ ಪಡೆದಿಲ್ಲ
ಪಾಕಿಸ್ತಾನದ ಭಯೋತ್ಪಾದನೆಯ ಮತ್ತೊಂದು ಮುಖದ ಅನಾವರಣವಾಗಿದೆ ಎಂದು ಬಿಎಜಪಿ ಸಂಸದ ನಿಶಿಕಾಂತ್ ದುಬೆ ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನ(Pakistan)ದ 5 ಲಕ್ಷ ಮಹಿಳೆಯರು ಭಾರತದವರನ್ನು ಮದುವೆಯಾಗಿದ್ದಾರೆ. ಆದರೆ ಇಲ್ಲಿಯವರೆಗೂ ಭಾರತದ ಪೌರತ್ವ ಪಡೆದಿಲ್ಲ. ದೇಶದ ಒಳಗಿರುವ ಶತ್ರುಗಳ ಜತೆ ಹೋರಾಡುವುದು ಹೇಗೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಸಂಬಂಧಿತ ಭಯೋತ್ಪಾದನೆಯ ಹೊಸ ಮುಖ ಈಗ ಹೊರಹೊಮ್ಮಿದೆ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

ನವದೆಹಲಿ, ಏಪ್ರಿಲ್ 29: ಪಾಕಿಸ್ತಾನ(Pakistan)ದ 5 ಲಕ್ಷ ಯುವತಿಯರು ಭಾರತದವರನ್ನು ಮದುವೆಯಾಗಿದ್ದಾರೆ. ಆದರೆ ಇಲ್ಲಿಯವರೆಗೂ ಭಾರತದ ಪೌರತ್ವ ಪಡೆದಿಲ್ಲ. ದೇಶದ ಒಳಗಿರುವ ಶತ್ರುಗಳ ಜತೆ ಹೋರಾಡುವುದು ಹೇಗೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಸಂಬಂಧಿತ ಭಯೋತ್ಪಾದನೆಯ ಹೊಸ ಮುಖ ಈಗ ಹೊರಹೊಮ್ಮಿದೆ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಮದುವೆಯಾದ ನಂತರ ಭಾರತಕ್ಕೆ ಬರುವ ಪಾಕಿಸ್ತಾನಿ ಹುಡುಗಿಯರ ವಿಷಯವನ್ನು ನಿಶಿಕಾಂತ್ ದುಬೆ ಹೇಳಿದ್ದಾರೆ. ಆದರೆ ಅವರಿಗೆ ಇನ್ನೂ ಭಾರತೀಯ ಪೌರತ್ವ ಸಿಕ್ಕಿಲ್ಲ. ಪಾಕಿಸ್ತಾನಿ ಭಯೋತ್ಪಾದನೆಯ ಹೊಸ ಮುಖ ಈಗ ಹೊರಹೊಮ್ಮಿದೆ. 5 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ಹುಡುಗಿಯರು ಮದುವೆಯಾದ ನಂತರ ಭಾರತದಲ್ಲಿ ವಾಸಿಸುತ್ತಿದ್ದಾರೆ, ಆದರೆ ಇಲ್ಲಿಯವರೆಗೆ ಅವರಿಗೆ ಭಾರತೀಯ ಪೌರತ್ವ ಸಿಕ್ಕಿಲ್ಲ. ಒಳಗೆ ಪ್ರವೇಶಿಸಿರುವ ಈ ಶತ್ರುಗಳ ವಿರುದ್ಧ ನಾವು ಹೇಗೆ ಹೋರಾಡುವುದು? ಎಂದಿದ್ದಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತು. ಏಪ್ರಿಲ್ 27 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ದೀರ್ಘಾವಧಿಯ, ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳನ್ನು ಹೊರತುಪಡಿಸಿ ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ಎಲ್ಲಾ ವರ್ಗದ ವೀಸಾಗಳನ್ನು ರದ್ದುಗೊಳಿಸಿತು.
ಮತ್ತಷ್ಟು ಓದಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ
ಅಲ್ಪಾವಧಿಯ ವೀಸಾ ಹೊಂದಿರುವವರಿಗೆ ಭಾನುವಾರ ಗಡುವು ಮುಗಿದ ನಂತರ ಕಳೆದ ಮೂರು ದಿನಗಳಲ್ಲಿ ಒಟ್ಟು 537 ಪಾಕಿಸ್ತಾನಿ ಪ್ರಜೆಗಳು ಅತ್ತಾರಿ ಗಡಿಯ ಮೂಲಕ ಭಾರತವನ್ನು ತೊರೆದಿದ್ದಾರೆ ಎಂದು ಅತ್ತಾರಿ ಗಡಿಯ ಪ್ರೋಟೋಕಾಲ್ ಅಧಿಕಾರಿ ಅರುಣ್ ಪಾಲ್ ಭಾನುವಾರ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ 850 ಭಾರತೀಯ ಪ್ರಜೆಗಳು ಭಾರತಕ್ಕೆ ಮರಳಿದ್ದಾರೆ ಎಂದು ಹೇಳಿದರು. ಭಾನುವಾರ ಒಂದೇ ದಿನ 237 ಪಾಕಿಸ್ತಾನಿ ನಾಗರಿಕರು ತಮ್ಮ ದೇಶಕ್ಕೆ ಮರಳಿದರೆ, 116 ಭಾರತೀಯ ನಾಗರಿಕರು ಮರಳಿದ್ದಾರೆ ಎಂದು ಅವರು ಹೇಳಿದರು. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಮೈದಾನದಲ್ಲಿ ಭಯೋತ್ಪಾದಕ ದಾಳಿ ನಡೆಯಿತು. 2019 ರ ಪುಲ್ವಾಮಾ ದಾಳಿಯ ನಂತರ ಈ ಪ್ರದೇಶದಲ್ಲಿ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಇದು ಒಂದಾಗಿದೆ.
ನಿಶಿಕಾಂತ್ ಪೋಸ್ಟ್
पाकिस्तानी आतंकवाद का एक नया चेहरा अब सामने आया,लगभग 5 लाख से उपर पाकिस्तानी लड़की भारत में शादी कर हिंदुस्तान में रह रही है,आजतक उनको भारत की नागरिकता नहीं मिली है ।अंदर घुसे इन दुश्मनों से लड़ना कैसे?
— Dr Nishikant Dubey (@nishikant_dubey) April 28, 2025
ಏಪ್ರಿಲ್ 23 ರಿಂದ ಪಹಲ್ಗಾಮ್ ಭಯೋತ್ಪಾದಕ ದಾಳಿ ಸ್ಥಳದಲ್ಲಿ ನಿಯೋಜಿಸಲಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡಗಳು ಸಾಕ್ಷ್ಯಗಳಿಗಾಗಿ ಹುಡುಕಾಟವನ್ನು ತೀವ್ರಗೊಳಿಸಿವೆ. ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಐಜಿ, ಡಿಐಜಿ ಮತ್ತು ಎಸ್‌ಪಿ ನೇತೃತ್ವದ ತಂಡಗಳು ಏಪ್ರಿಲ್ 22 ರ ದಾಳಿಯನ್ನು ಕಂಡ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸುತ್ತಿವೆ.
ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರ ಭಾರತೀಯ ಸೇನೆಯು ಹೆಚ್ಚಿನ ಕಟ್ಟೆಚ್ಚರದಲ್ಲಿದೆ ಮತ್ತು ಭಯೋತ್ಪಾದಕರನ್ನು ತಟಸ್ಥಗೊಳಿಸಲು ಹಲವಾರು ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಹಾಗೆಯೇ ಜಮ್ಮು ಕಾಶ್ಮೀರ ಸರ್ಕಾರವು 48 ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








