AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ಸೂರ್ಯವಂಶಿ ಬಗ್ಗೆ ಯಾರು ಏನು ಹೇಳಿದ್ರು?

IPL 2025 RR vs GT: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 47ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 209 ರನ್​ ಕಲೆಹಾಕಿತು. ಈ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ (Vaibhav Suryavanshi) 38 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 101 ರನ್ ಬಾರಿಸಿದ್ದರು.

ವೈಭವ್ ಸೂರ್ಯವಂಶಿ ಬಗ್ಗೆ ಯಾರು ಏನು ಹೇಳಿದ್ರು?
Vaibhav Suryavanshi
ಝಾಹಿರ್ ಯೂಸುಫ್
|

Updated on: Apr 29, 2025 | 11:55 AM

Share

IPL 2025: ಟಿ20 ಕ್ರಿಕೆಟ್​ನಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಕೇವಲ 35 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಶತಕ ಸಿಡಿಸುವ ಮೂಲಕ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಿಯಾನ್ ಪರಾಗ್ ಗುಜರಾತ್ ಟೈಟಾನ್ಸ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 209 ರನ್ ಕಲೆಹಾಕಿತು.

210 ರನ್​ಗಳ ಕಠಿಣ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯುವ ಎಡಗೈ ದಾಂಡಿಗರಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಸ್ಪೋಟಕ ಆರಂಭ ಒದಗಿಸಿದರು. ಇಬ್ಬರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪವರ್​ಪ್ಲೇನಲ್ಲಿ 87 ರನ್​ಗಳು ಮೂಡಿಬಂತು. ಅಲ್ಲದೆ ಮೊದಲ ವಿಕೆಟ್​ಗೆ 166 ರನ್​ಗಳ ಜೊತೆಯಾಟವಾಡಿದ ಬಳಿಕ ವೈಭವ್ ಸೂರ್ಯವಂಶಿ (101) ಔಟಾದರು.

ಇದನ್ನೂ ಓದಿ
Image
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
Image
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
Image
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Image
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಮತ್ತೊಂದೆಡೆ ರ್ರೀಸ್ ಕಚ್ಚಿ ಆಡಿದ ಯಶಸ್ವಿ ಜೈಸ್ವಾಲ್ ಅಜೇಯ 70 ರನ್ ಬಾರಿಸುವ ಮೂಲಕ 15.5 ಓವರ್​ಗಳಲ್ಲಿ ತಂಡವನ್ನು ಗೆಲುವಿ ದಡ ಸೇರಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ವೈಭವ್ ಸೂರ್ಯವಂಶಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಇದೀಗ ವೈಭವ್ ಸೂರ್ಯವಂಶಿ ಅವರ ವೈಭವಯುತ ಬ್ಯಾಟಿಂಗ್ ಬಗ್ಗೆ ಮಾಜಿ ಹಾಗೂ ಹಾಲಿ ಆಟಗಾರರು ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಅದರಂತೆ ಯುವ ದಾಂಡಿಗನ ಭರ್ಜರಿ ಪ್ರದರ್ಶನಕ್ಕೆ ಯಾರು ಏನು ಹೇಳಿದ್ದಾರೆ ಎಂದು ನೋಡುವುದಾದರೆ….

ವೈಭವ್ ಅವರ ನಿರ್ಭೀತ ಬ್ಯಾಟಿಂಗ್, ವೇಗ, ಆರಂಭಿಕ ಲೆಂತ್ ಆಯ್ಕೆ ಮತ್ತು ಚೆಂಡಿನ ವಿರುದ್ಧ ತೋರಿದ ಶಕ್ತಿ, ಎಲ್ಲವೂ  ಅದ್ಭುತ ಇನ್ನಿಂಗ್ಸ್‌ನ ಹಿಂದಿನ ಪಾಕವಿಧಾನವಾಗಿತ್ತು. ಅಂತಿಮ ಫಲಿತಾಂಶ: 38 ಎಸೆತಗಳಲ್ಲಿ 101 ರನ್‌ಗಳು. ಚೆನ್ನಾಗಿ ಆಡಿದರು ಎಂದು ಸಚಿನ್ ತೆಂಡೂಲ್ಕರ್ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಯುವ ದಾಂಡಿಗನಿಂದ ನಡೆದ ಕಗ್ಗೊಲೆಯ ಇನ್ನಿಂಗ್ಸ್‌ ಅನ್ನು ಕಣ್ಣಾರೆ ಕಂಡೆ. ನಂಬಲಾಸಾಧ್ಯ ಆಟ ಎಂದು ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವೈಭವ್ ಸೂರ್ಯವಂಶಿ, ಎಂತಹ ಅದ್ಭುತ ಪ್ರತಿಭೆ.. ಕೇವಲ 14 ವರ್ಷ ವಯಸ್ಸಿನಲ್ಲಿ ಶತಕ ಗಳಿಸುವುದು ನಂಬಲಸಾಧ್ಯ. ಮಿಂಚುತ್ತಲೇ ಇರು ಸಹೋದರ ಎಂದು ಮೊಹಮ್ಮದ್ ಶಮಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

14 ವರ್ಷದ ವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಐಪಿಎಲ್ ಶತಕ ಬಾರಿಸಿದ್ದಾರೆ. ಇದು ಗಮನಾರ್ಹ ಸಾಧನೆ ಎಂದು ವೆಸ್ಟ್ ಇಂಡೀಸ್​ನ ದಿಗ್ಗಜ ಇಯಾನ್ ಬಿಷಪ್ ಯುವ ದಾಂಡಿಗನನ್ನು ಕೊಂಡಾಡಿದ್ದಾರೆ.

ಈ ಹುಡುಗ ಐಪಿಎಲ್ ಅನ್ನು ಮಕ್ಕಳಾಟ ಮಾಡಿಬಿಟ್ಟ. ಹದಿಹರೆಯದ ವೈಭವ್ ಸೂರ್ಯವಂಶಿ ಅವರಿಂದ ನಂಬಲಾಗದ ಸ್ಟ್ರೋಕ್ ಆಟ ಎಂದು ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ನನ್ನ ಅತಿ ವೇಗದ ದಾಖಲೆಯನ್ನು ಮುರಿದ ಯುವ ವೈಭವ್ ಸೂರ್ಯವಂಶಿಗೆ ಅಭಿನಂದನೆಗಳು. ಐಪಿಎಲ್​ನಲ್ಲಿ ಭಾರತೀಯರಿಂದ ಶತಕ ನೋಡುವುದು ವಿಶೇಷ ಅನುಭವ. ರಾಜಸ್ಥಾನ್ ರಾಯಲ್ಸ್​ನಲ್ಲಿರುವಾಗ ನಾನು ಮಾಡಿದಂತೆಯೇ, ಇದೀಗ ವೈಭವ್ ಶತಕ ಸಿಡಿಸಿದ್ದಾನೆ. ಈ ಫ್ರಾಂಚೈಸಿಯಲ್ಲಿ ನಿಜವಾಗಿಯೂ ಏನೋ ಮಾಂತ್ರಿಕತೆಯಿದೆ. ಚಾಂಪಿಯನ್, ಬಹಳ ದೂರ ಸಾಗಬೇಕಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಯೂಸುಫ್ ಪಠಾಣ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇನ್ನು ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ವೀಕ್ಷಿಸಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕ್ಲಾಸ್ ಇನಿಂಗ್ಸ್ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IPL 2025: ಎಡಗೈ ದಾಂಡಿಗರ ಸಿಡಿಲಬ್ಬರಕ್ಕೆ RCB ದಾಖಲೆ ಧೂಳೀಪಟ

ಒಟ್ಟಿನಲ್ಲಿ ಚೊಚ್ಚಲ ಐಪಿಎಲ್​ನಲ್ಲಿ ಸ್ಪೋಟಕ ಸೆಂಚುರಿ ಸಿಡಿಸುವ ಮೂಲಕ ವೈಭವ್ ಸೂರ್ಯವಂಶಿ ಹೊಸ ಸಂಚಲನ ಸೃಷ್ಟಿಸಿದ್ದು. ಈ ಸಂಚಲನದೊಂದಿಗೆ ಅವರು ಐಪಿಎಲ್​ನಲ್ಲಿ ಮುಗಿಲೆತ್ತರಕ್ಕೇರುವ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.