ಕೊವಿಡ್ ಮೂರನೇ ಅಲೆ ನಂತರ ಏನಾಗುತ್ತದೆ ಎಂದು ಹೇಳುವುದು ಅಸಾಧ್ಯ; ಡಿಜಿಟಲ್ ಕಲಿಕೆ ಮುಂದುವರಿಯಲಿದೆ: ಪಿಣರಾಯಿ ವಿಜಯನ್

| Updated By: ರಶ್ಮಿ ಕಲ್ಲಕಟ್ಟ

Updated on: Jun 08, 2021 | 12:46 PM

Kerala Assembly Session: ಅನೇಕ ಸ್ಥಳಗಳಲ್ಲಿ ಸಂಪರ್ಕ ಸಮಸ್ಯೆಗಳಿವೆ. ಈ ಉದ್ದೇಶಕ್ಕಾಗಿ ಎಲ್ಲಾ ಅಂತರ್ಜಾಲ ಸೇವಾ ಪೂರೈಕೆದಾರರ ಸಭೆಯನ್ನು ಕರೆಯಲಾಗಿದೆ. ಕೆಎಸ್‌ಇಬಿ ಮತ್ತು ಕೇಬಲ್ ನೆಟ್‌ವರ್ಕ್ ಸಹಾಯದಿಂದ ಸಂಪರ್ಕವನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೊವಿಡ್ ಮೂರನೇ ಅಲೆ ನಂತರ ಏನಾಗುತ್ತದೆ ಎಂದು ಹೇಳುವುದು ಅಸಾಧ್ಯ; ಡಿಜಿಟಲ್ ಕಲಿಕೆ ಮುಂದುವರಿಯಲಿದೆ: ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್
Follow us on

ತಿರುವನಂತಪುರಂ: ಡಿಜಿಟಲ್ ಕಲಿಕೆ ಮುಂದವರಿಯಬಹುದು. ಕೊವಿಡ್ ಮೂರನೇ ಅಲೆ ಮುಗಿದ ನಂತರ ಏನಾಗುತ್ತದೆ ಎಂಬುದು ತಿಳಿದಿಲ್ಲ. ವಿವಿಧ ಮೂಲಗಳಿಂದ ಹಣ ಒಟ್ಟುಗೂಡಿಸಿ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುವುದು. ಉಚಿತ ಇಂಟರ್ನೆಟ್ ಒದಗಿಸಲು ಮತ್ತು ಸಂಪರ್ಕವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ವಿಧಾನಸಭೆಯಲ್ಲಿ ಮಾತನಾಡಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಶಿಕ್ಷಣದಲ್ಲಿ ಡಿಜಿಟಲ್ ಭಿನ್ನತೆ ಇರುವುದಿಲ್ಲ. ಅಗತ್ಯ ನಿಬಂಧನೆಯನ್ನು ಸರ್ಕಾರ ಮಾಡಲಿದೆ. ಕೆಲವು ಮಕ್ಕಳಿಗೆ ಡಿಜಿಟಲ್ ಕಲಿಕೆಗೆ ಬೇಕಾದ ಉಪಕರಣಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಮೊದಲ ಅಲೆ ಬಂದಾಗ, ಎರಡನೇ ಅಲೆ ಬಗ್ಗೆ ಯೋಚಿಸಲಾಗಿಲ್ಲ. ಈಗ ಮೂರನೇ ಅಲೆ ಬಗ್ಗೆ ಮಾತನಾಡೋಣ. ಕೊವಿಡ್ ಸ್ವಲ್ಪ ಸಮಯದವರೆಗೆ ನಮ್ಮೊಂದಿಗೆ ಇರಲಿದೆ ಎಂದು ಇದು ಸೂಚಿಸುತ್ತದೆ. ಆದ್ದರಿಂದ, ಆನ್‌ಲೈನ್ ಶಿಕ್ಷಣವು ತ್ವರಿತವಾಗಿ ಕೊನೆಗೊಳ್ಳುತ್ತದೆ ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬರಿಗೂ ಪಠ್ಯಪುಸ್ತಕದಂತಹ ಡಿಜಿಟಲ್ ಸಾಧನ ಬೇಕು. ಅದಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.

ಅನೇಕ ಸ್ಥಳಗಳಲ್ಲಿ ಸಂಪರ್ಕ ಸಮಸ್ಯೆಗಳಿವೆ. ಈ ಉದ್ದೇಶಕ್ಕಾಗಿ ಎಲ್ಲಾ ಅಂತರ್ಜಾಲ ಸೇವಾ ಪೂರೈಕೆದಾರರ ಸಭೆಯನ್ನು ಕರೆಯಲಾಗಿದೆ. ಕೆಎಸ್‌ಇಬಿ ಮತ್ತು ಕೇಬಲ್ ನೆಟ್‌ವರ್ಕ್ ಸಹಾಯದಿಂದ ಸಂಪರ್ಕವನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕತ್ತರಿಸಿದ್ದು 101 ಮರಗಳನ್ನು, ಸಾಗಾಣೆ ಮಾಡಿದ ₹10 ಕೋಟಿ ಮೌಲ್ಯದ ಮರಗಳನ್ನು ವಶ ಪಡಿಸಲಾಗಿದೆ- ಅರಣ್ಯ ಸಚಿವ

ಸರ್ಕಾರದ ಗುರಿ ಅರಣ್ಯ ಸಂರಕ್ಷಣೆ ಎಂಬುದರಲ್ಲಿ ಯಾರಿಗೂ ಸಂದೇಹ ಬೇಡ ಎಂದು ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಹೇಳಿದ್ದಾರೆ . ಈ ಸರ್ಕಾರ ಯಾರನ್ನೂ ರಕ್ಷಿಸಲು ಪ್ರಯತ್ನಿಸುವುದಿಲ್ಲ ಅಥವಾ ಅರಣ್ಯನಾಶಕ್ಕೆ ಯಾವುದೇ ಸಹಾಯವನ್ನು ನೀಡುವುದಿಲ್ಲ. ಮರದ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವೇ ದಿನಗಳಲ್ಲಿ ತೃಪ್ತಿಕರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮರ ಕತ್ತರಿಸಿದ ವಿಷಯದ ಕುರಿತು ವಿಧಾನಸಭೆಯಲ್ಲಿ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಿದ್ದರವರು . ತನಿಖೆ ಪೂರ್ಣಗೊಂಡ ಕೂಡಲೇ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಶಶೀಂದ್ರನ್ ವಿಧಾನಸಭೆಯಲ್ಲಿ ಹೇಳಿದ್ದಾರೆ.

ವಯನಾಡ್ ಜಿಲ್ಲೆಯ ಮೂಟ್ಟಿಲ್ ಸೌತ್ ವಿಲೇಜ್​ನಲ್ಲಿ ಅಕ್ರಮವಾಗಿ ಮರಗಳನ್ನು ಕತ್ತರಿಸಿ ಸಾಗಣೆ ಮಾಡಿದ ಪ್ರಕರಣವನ್ನು ಸರ್ಕಾರ ಗಂಭೀರಾಗಿ ತೆಗೆದುಕೊಂಡಿದೆ . ಇವುಗಳಲ್ಲಿ ಯಾವುದೂ ಅರಣ್ಯಕ್ಕೆ ಸೇರಿಲ್ಲ. 11.03-2020ರ ಸುತ್ತೋಲೆ ಮತ್ತು ಕಂದಾಯ ಇಲಾಖೆಯಿಂದ 24-10-2020ರ ದಿನಾಂಕದ ಸರ್ಕಾರಿ ಆದೇಶವನ್ನು ತಪ್ಪಾಗಿ ಅರ್ಥೈಸುವ ಮೂಲಕ ಮರ ಕಡಿಯಲಾಗಿದೆ . ಇವುಗಳನ್ನು ಕಂದಾಯ ಇಲಾಖೆ 2.2.2021 ರಂದು ರದ್ದುಪಡಿಸಿದೆ ಎಂದು ಸಚಿವರು ಹೇಳಿದರು.

ವಿವರವಾದ ತನಿಖೆಯಲ್ಲಿ 101 ಮರಗಳನ್ನು ವಿವಿಧ ಭಾಗಗಳಿಂದ ಕತ್ತರಿಸಲಾಗಿದೆ ಎಂದು ಶಶೀಂದ್ರನ್ ಹೇಳಿದ್ದಾರೆ. ಸುಮಾರು 10 ಕೋಟಿ ರೂ.ಗಳ ಮೌಲ್ಯದ 202.180 ಕ್ಯುಬಿಕ್ ಮೀಟರ್ ಭೂಮಿಯನ್ನು ತೆರವುಗೊಳಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ 41 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.

ಕತ್ತರಿಸಿದ ಮರದ ಸಾಗಣೆಗೆ ಮೆಪ್ಪಾಡಿ ವಲಯ ಕಚೇರಿಗೆ 14 ಅರ್ಜಿಗಳು ಬಂದವು. ಮೂಟ್ಟಿಲ್ ಸೌತ್ ವಿಲೇಜ್ ವಾಳವಟ್ಟ ಸ್ಥಳೀಯರಾದ ರೋಜಿ ಅಗಸ್ಟೀನ್ ಮತ್ತು ಆಂಟೋ ಅಗಸ್ಟೀನ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಅನುಮತಿ ನಿರಾಕರಿಸಲಾಗಿದೆ. 3.2.2020 ರಂದು ಪೆರುಂಬವೂರಿಗೆ ಮರದ ಕಳ್ಳಸಾಗಣೆ ಮಾಡಿರುವುದು ಕಂಡುಬಂದಿದೆ. ಸುಳಿವು ನೀಡಿದ ನಂತರ, ಮೆಪ್ಪಾಡಿ ವಲಯ ಅರಣ್ಯ ಅಧಿಕಾರಿ ಮತ್ತು ಅವರ ತಂಡ 8.2.21 ರಂದು ಪೆರುಂಬವೂರಿಗೆ ತೆರಳಿ ಎಲ್ಲಾ ಮರಗಳನ್ನು ವಶಪಡಿಸಿಕೊಂಡಿದೆ. ಇಂತಹ ಸಕಾಲಿಕ ಕ್ರಮದಿಂದಾಗಿ ಕೋಟಿ ಮೌಲ್ಯದ ಮರಗಳನ್ನು ವಶಪಡಿಸಿಕೊಂಡ ಪ್ರಕರಣವನ್ನು ದಾಖಲಿಸಲಾಗಿದೆ.
ಕೇರಳ ಅರಣ್ಯ ಕಾಯ್ದೆ 1961 ರ ಅಡಿಯಲ್ಲಿ ಮರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕುವ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಅದೇ ಸಮಯದಲ್ಲಿ, ಭೂಮಿಯಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ನಿಯಮ 95 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪೂರ್ಣಗೊಂಡ ಕೂಡಲೇ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ಇದನ್ನೂ ಓದಿ: ಕೇರಳದ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಲು ಕಾಸರಗೋಡು ನ್ಯಾಯಾಲಯ ಅನುಮತಿ

ಇದನ್ನೂ ಓದಿ:  ಕೇರಳ ಬಿಜೆಪಿ ಘಟಕ ವಿರುದ್ಧ ಹವಾಲಾ ಆರೋಪ: ಸ್ವತಂತ್ರ ಸಮಿತಿಯಿಂದ ವರದಿ ಕೇಳಿದ ಬಿಜೆಪಿ