AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

ಈ ವರ್ಷ ಕೇರಳದಲ್ಲಿ 67 ಮೆದುಳು ತಿನ್ನುವ ಅಮೀಬಾ ಪ್ರಕರಣಗಳು ಪತ್ತೆಯಾಗಿವೆ. ಮೆದುಳು ತಿನ್ನುವ ಅಮೀಬಾದಿಂದಾಗಿ 17 ಸಾವುಗಳು ಸಂಭವಿಸಿವೆ ಎಂದು ದೃಢಪಟ್ಟಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ತುರ್ತು ನೀರಿನ ಸುರಕ್ಷತೆ ಮತ್ತು ತಡೆಗಟ್ಟುವ ಕ್ರಮಗಳನ್ನು ಸೂಚಿಸಿದ್ದಾರೆ. ಕೇರಳ ಆರೋಗ್ಯ ಇಲಾಖೆಯು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಕುರಿತ ಅಂಕಿಅಂಶಗಳನ್ನು ಪರಿಷ್ಕರಿಸಿದೆ.

ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು
Virus
ಸುಷ್ಮಾ ಚಕ್ರೆ
|

Updated on: Sep 15, 2025 | 9:14 PM

Share

ನವದೆಹಲಿ, ಸೆಪ್ಟೆಂಬರ್ 15: ಕೇರಳದಲ್ಲಿ ಅತ್ಯಂತ ಅಪರೂಪದ ಆದರೆ ಮಾರಕವಾದ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ನ (brain eating amoeba) ಹೊಸ ಪ್ರಕರಣ ವರದಿಯಾಗಿದ್ದು, ತಿರುವನಂತಪುರಂನಲ್ಲಿ 17 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಎಚ್‌ಎಸ್) ಈ ವರ್ಷ ಇಲ್ಲಿಯವರೆಗೆ 17 ಜನರು ಸಾವನ್ನಪ್ಪಿದ್ದಾರೆ. ಒಟ್ಟು 67 ಜನರು ಅಪರೂಪದ ಮೆದುಳು ತಿನ್ನುವ ಅಮೀಬಾದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಿದೆ. ಆರೋಗ್ಯ ಇಲಾಖೆಯು ಕೇವಲ 2 ದೃಢಪಡಿಸಿದ ಸಾವುಗಳು ಸಂಭವಿಸಿವೆ ಎಂದು ಹೇಳಿತ್ತು, ಇನ್ನೂ 14 ಪ್ರಕರಣಗಳು ಪರಿಶೀಲನೆಯಲ್ಲಿವೆ.

ಸೆಪ್ಟೆಂಬರ್ 12ರಂದು ಎರಡು ಹೊಸ ಪ್ರಕರಣಗಳು ವರದಿಯಾಗಿದ್ದು, ಈ ತಿಂಗಳ ಸಂಖ್ಯೆ 19 ಪ್ರಕರಣಗಳು ಮತ್ತು 7 ಸಾವುಗಳಿಗೆ ಏರಿದೆ. ಆರೋಗ್ಯ ಇಲಾಖೆಯು ಅಕ್ಕುಳಮ್ ಪ್ರವಾಸಿ ಗ್ರಾಮದಲ್ಲಿ ಈಜುಕೊಳವನ್ನು ಮುಚ್ಚಿ ಪರೀಕ್ಷೆಗಾಗಿ ನೀರಿನ ಮಾದರಿಗಳನ್ನು ಸಂಗ್ರಹಿಸಿದೆ. ಈ ಬಾಲಕ ಹಿಂದಿನ ದಿನ ಸ್ನೇಹಿತರೊಂದಿಗೆ ಈಜುಕೊಳಕ್ಕೆ ಭೇಟಿ ನೀಡಿದ್ದ ಮತ್ತು ಅಲ್ಲಿ ಸ್ನಾನ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 14ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಅಡಿಯಲ್ಲಿ ಬಿಡುಗಡೆಯಾದ ನವೀಕರಿಸಿದ ಮಾಹಿತಿಯ ಪ್ರಕಾರ, ಈ ವರ್ಷ ಕೇರಳದಲ್ಲಿ 67 ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳು ದಾಖಲಾಗಿದ್ದು, 17 ಸಾವುಗಳು ಸಂಭವಿಸಿವೆ.

ಇದನ್ನೂ ಓದಿ: ಯಾವುದೇ ಲಕ್ಷಣಗಳು ಕಂಡು ಬರದೆಯೇ ಜೀವಕ್ಕೆ ಅಪಾಯ ತರುತ್ತೆ ಈ ರೋಗಗಳು

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಅನ್ನು ಎದುರಿಸಲು ಕಟ್ಟುನಿಟ್ಟಿನ ತಡೆಗಟ್ಟುವ ಕ್ರಮಗಳ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಸಾರ್ವಜನಿಕರು ನೀರಿನ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಿದ್ದಾರೆ. “ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ವಿರುದ್ಧ ನಾವು ಬಲವಾದ ರಕ್ಷಣೆಯನ್ನು ರಚಿಸಬೇಕಾಗಿದೆ. ಹಸು-ಎಮ್ಮೆಗಳು ಸ್ನಾನ ಮಾಡುವ ಜಲಮೂಲಗಳು ಸೇರಿದಂತೆ ನಿಂತ ಅಥವಾ ಕಲುಷಿತ ನೀರಿನಲ್ಲಿ ನಮ್ಮ ಮುಖವನ್ನು ತೊಳೆಯಬಾರದು ಅಥವಾ ಸ್ನಾನ ಮಾಡಬಾರದು ” ಎಂದು ಅವರು ಹೇಳಿದ್ದಾರೆ.

ಬಾವಿಗಳನ್ನು ವೈಜ್ಞಾನಿಕವಾಗಿ ಕ್ಲೋರಿನೀಕರಿಸಬೇಕು ಮತ್ತು ನೀರಿನ ಥೀಮ್ ಪಾರ್ಕ್‌ಗಳಲ್ಲಿನ ಈಜುಕೊಳಗಳನ್ನು ಸಹ ಸರಿಯಾಗಿ ಕ್ಲೋರಿನೀಕರಿಸಬೇಕು. ನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿ ಇಡಬೇಕು ಎಂದು ಸಚಿವರು ಹೇಳಿದ್ದಾರೆ. “ಮನೆಗಳಲ್ಲಿ ನೀರಿನ ಸಂಗ್ರಹಣಾ ಸೌಲಭ್ಯಗಳನ್ನು ಸ್ವಚ್ಛವಾಗಿಡಬೇಕು. ಅಮೀಬಾ ನಿಮ್ಮ ಮೂಗಿನ ಮೂಲಕ ನಿಮ್ಮ ಮೆದುಳನ್ನು ಪ್ರವೇಶಿಸುತ್ತದೆ, ಆದ್ದರಿಂದ ನೀರು ನಿಮ್ಮ ಮೂಗಿಗೆ ಪ್ರವೇಶಿಸದಂತೆ ನೋಡಿಕೊಳ್ಳಿ” ಎಂದು ಅವರು ಸಲಹೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ