4 ವಾರಗಳ ನಂತರ ಕೊವಿಶೀಲ್ಡ್​ 2ನೇ ಡೋಸ್ ಪಡೆಯಲು ಅವಕಾಶ ಕೊಡಿ: ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್​ ಆದೇಶ

‘ಸರ್ಕಾರವು ಒದಗಿಸುವ ಉಚಿತ ಲಸಿಕೆ ಪಡೆಯುವವರಿಗೆ ಪರಿಪೂರ್ಣ ಸುರಕ್ಷೆ ಮತ್ತು ಅತ್ಯುತ್ತಮ ಸುರಕ್ಷೆಯ ನಡುವೆ ಆಯ್ಕೆ ಇರಬೇಕೆ ಎಂಬ ಪ್ರಶ್ನೆಯನ್ನು ನಾನು ಪರಿಗಣಿಸಿಲ್ಲ’ ಎಂದು ಕೇರಳ ಹೈಕೋರ್ಟ್​ ಸ್ಪಷ್ಡಪಡಿಸಿದೆ.

4 ವಾರಗಳ ನಂತರ ಕೊವಿಶೀಲ್ಡ್​ 2ನೇ ಡೋಸ್ ಪಡೆಯಲು ಅವಕಾಶ ಕೊಡಿ: ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್​ ಆದೇಶ
ಕೇರಳ ಹೈಕೋರ್ಟ್ ಮತ್ತು ಕೊವಿಶೀಲ್ಡ್ ಲಸಿಕೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 06, 2021 | 7:03 PM

ಕೊಚ್ಚಿ: ಕೇರಳದಲ್ಲಿ ಕೊವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 12 ವಾರಗಳಿಗೆ ಬದಲು, ನಾಲ್ಕು ವಾರಗಳ ಅಂತರದಲ್ಲಿ ಕೊವಿಶೀಲ್ಡ್ ಲಸಿಕೆಯ 2ನೇ ಡೋಸ್ ಪಡೆದುಕೊಳ್ಳಲು ಜನರಿಗೆ ಅವಕಾಶ ಕೊಡಬೇಕು. ಈ ಸಂಬಂಧ ಕೊವಿನ್ ಆ್ಯಪ್​ನಲ್ಲಿ ಅಗತ್ಯ ಬದಲಾವಣೆ ಮಾಡಬೇಕು. ಕಡಿಮೆ ಅಂತರದಲ್ಲಿ 2ನೇ ಡೋಸ್ ಪಡೆದುಕೊಳ್ಳಲು ಇಚ್ಛಿಸುವವರಿಗೆ ಅವಕಾಶ ಸಿಗಬೇಕು ಎಂದು ಕೇರಳ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

‘ಸರ್ಕಾರವು ಒದಗಿಸುವ ಉಚಿತ ಲಸಿಕೆ ಪಡೆಯುವವರಿಗೆ ಪರಿಪೂರ್ಣ ಸುರಕ್ಷೆ ಮತ್ತು ಅತ್ಯುತ್ತಮ ಸುರಕ್ಷೆಯ ನಡುವೆ ಆಯ್ಕೆ ಇರಬೇಕೆ ಎಂಬ ಪ್ರಶ್ನೆಯನ್ನು ನಾನು ಪರಿಗಣಿಸಿಲ್ಲ’ ಎಂದು ಕೇರಳ ಹೈಕೋರ್ಟ್​ ಸ್ಪಷ್ಡಪಡಿಸಿದೆ.

ಪ್ರಸ್ತುತ ಎರಡೂ ಡೋಸ್​ಗಳ ನಡುವೆ 84 ದಿನಗಳ ಅಂತರ ಇರಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಅವಧಿಗೂ ಮೊದಲೇ 2ನೇ ಲಸಿಕೆ ಪಡೆದುಕೊಳ್ಳಲು ಜನರಿಗೆ ಅವಕಾಶ ಕಲ್ಪಿಸಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ.

ವಿದೇಶಗಳಿಗೆ ತೆರಳುತ್ತಿರುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರ ಸುರಕ್ಷೆ ಮತ್ತು ಪರಿಪೂರ್ಣ ಸುರಕ್ಷೆ ನಡುವೆ ಆಯ್ಕೆಗೆ ಅವಕಾಶ ನೀಡಲು ಸಾಧ್ಯವಾದರೆ ಅದೇ ಆಯ್ಕೆಯನ್ನು ಇಲ್ಲಿರುವವರಿಗೆ ಏಕೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಪಿ.ಬಿ.ಸುರೇಶ್​ಕುಮಾರ್ ಪ್ರಶ್ನಿಸಿದರು.

ಸೆಪ್ಟೆಂಬರ್​ 3ರಂದು ಕೇರಳ ಹೈಕೋರ್ಟ್​ ಈ ಸಂಬಂಧ ಹೊರಡಿಸಿರುವ ಆದೇಶವು ಸೋಮವಾರ ಸಾರ್ವಜನಿಕರಿಗೆ ಲಭ್ಯವಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ನೀತಿಯ ಅನ್ವಯವೂ ಬೇಗನೇ 2ನೇ ಡೋಸ್ ನೀಡಲು ಅವಕಾಶವಿದೆ ಎಂದು ಹೇಳಿದೆ.

ಈ ಆದೇಶ ಜಾರಿಗೆ ತರಲು ಕೊವಿನ್ ಪೋರ್ಟಲ್​ನಲ್ಲಿ ಕೇಂದ್ರ ಸರ್ಕಾರ ಅಗತ್ಯ ಮಾರ್ಪಾಡುಗಳನ್ನು ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.

(Kerala coronavirus allow covishield 2nd dose after 4 weeks Kerala high court orders govt of India)

ಇದನ್ನೂ ಓದಿ: Covishield: ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣ ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ; ಅಧ್ಯಯನ

ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಿರುವ ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ

Published On - 6:50 pm, Mon, 6 September 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು