ಪರಸ್ಪರ ಗುಪ್ತಾಂಗ ಹಿಡಿದುಕೊಳ್ಳಬೇಕು, ನಾಯಿ ರೀತಿ ನಡೀಬೇಕು, ತಿನ್ನಬೇಕು ಸಿಬ್ಬಂದಿಯನ್ನು ನಾಯಿಯಂತೆ ಕಾಣುವ ಆಫೀಸ್

ಸಾಮಾನ್ಯವಾಗಿ ಎಲ್ಲಾ ಕಂಪನಿಗಳಲ್ಲಿ ಒಂದೊಮ್ಮೆ ಟಾರ್ಗೆಟ್ ರೀಚ್ ಆಗದಿದ್ದರೆ ಸಂಬಳವನ್ನು ಕಡಿತ ಮಾಡುವ ಎಚ್ಚರಿಕೆ ನೀಡುತ್ತಾರೆ. ಆದರೆ ಈ ಕಂಪನಿಯಲ್ಲಿ ಸಿಬ್ಬಂದಿಯನ್ನು ಅಕ್ಷರಶಃ ನಾಯಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನಾಯಿಯಂತೆ ಕೇವಲ ನೋಟದಿಂದ ನೋಡುವುದಲ್ಲ ಬದಲಾಗಿ ಸಿಬ್ಬಂದಿ ಕುತ್ತಿಗೆಗೆ ಸರಪಳಿ ಕಟ್ಟಿ ನಾಯಿಯಂತೆ ನಡೆಸಿಕೊಂಡು ಹೋಗುತ್ತಾರೆ, ಪರಸ್ಪರ ಗುಪ್ತಾಂಗವನ್ನು ಹಿಡಿಯಬೇಕು, ನಾಯಿಯಂತೆ ನಡೆಯಬೇಕು, ನಾಯಿಯಂತೆ ತಿನ್ನಬೇಕು ಈ ರೀತಿ ಕ್ರೂರವಾದ ಶಿಕ್ಷೆಯನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ.

ಪರಸ್ಪರ ಗುಪ್ತಾಂಗ ಹಿಡಿದುಕೊಳ್ಳಬೇಕು, ನಾಯಿ ರೀತಿ ನಡೀಬೇಕು, ತಿನ್ನಬೇಕು ಸಿಬ್ಬಂದಿಯನ್ನು ನಾಯಿಯಂತೆ ಕಾಣುವ ಆಫೀಸ್
ಸಿಬ್ಬಂದಿ

Updated on: Apr 06, 2025 | 8:53 AM

ಕೇರಳ, ಏಪ್ರಿಲ್ 06: ಸಮಾಜವು ಹೆಚ್ಚು ಆಧುನಿಕವಾಗುತ್ತಿದ್ದಂತೆ, ಮನುಷ್ಯರಲ್ಲಿ ಕ್ರೂರತ್ವ ಕೂಡ ಹೆಚ್ಚಾಗುತ್ತಿದೆ. ಕೇರಳ ಒಂದು ಕಂಪನಿಯಲ್ಲಿ ತಮ್ಮ ಸಿಬ್ಬಂದಿಯನ್ನು ನಾಯಿ(Dog)ಗಿಂತ ಕಡೆಯಾಗಿ ನಡೆಸಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನಾಯಿಯಂತೆ ಕೇವಲ ನೋಟದಿಂದ ನೋಡುವುದಲ್ಲ ಬದಲಾಗಿ ಸಿಬ್ಬಂದಿ ಕುತ್ತಿಗೆಗೆ ಸರಪಳಿ ಕಟ್ಟಿ ನಾಯಿಯಂತೆ ನಡೆಸಿಕೊಂಡು ಹೋಗುತ್ತಾರೆ, ಪರಸ್ಪರ ಗುಪ್ತಾಂಗವನ್ನು ಹಿಡಿಯಬೇಕು, ನಾಯಿಯಂತೆ ನಡೆಯಬೇಕು, ನಾಯಿಯಂತೆ ತಿನ್ನಬೇಕು ಈ ರೀತಿ ಕ್ರೂರವಾದ ಶಿಕ್ಷೆಯನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ.

ಕೇರಳದ ಕೊಚ್ಚಿಯಲ್ಲಿರುವ ಹಿಂದೂಸ್ತಾನ್ ಪವರ್ ಲಿಂಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಗಳನ್ನು ನಾಯಿಗಳಂತೆ ಕಿರುಕುಳ ನೀಡಲಾಗುತ್ತಿದೆ .ಕಂಪನಿಯ ಗುರಿಗಳನ್ನು ತಲುಪದ ಉದ್ಯೋಗಿಗಳ ಜೊತೆ ಮ್ಯಾನೇಜರ್ ಕ್ರೂರವಾಗಿ ವರ್ತಿಸುತ್ತಿರುವುದನ್ನು ತೋರಿಸುವ ವೀಡಿಯೊಗಳು ಬೆಳಕಿಗೆ ಬಂದಿವೆ.

ಇದನ್ನೂ ಓದಿ
ದೇಹದ ಅಂಗಾಂಗಗಳ ಬಗ್ಗೆ ವಿವರಿಸಲು ಶಿಕ್ಷಕಿ ಹೊಸ ಪ್ರಯತ್ನ
ಕ್ರಿಕೆಟ್ ಆಡುತ್ತಿದ್ದಾಗಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ವಿದ್ಯಾರ್ಥಿ
ಸಿಂಹದ ಬಾಲ ಹಿಡಿದು ಎಳೆದಾಡುತ್ತಿರುವ ಬಾಲಕ
ನೆರೆಹೊರೆಯ ಸದಸ್ಯರ ಭೀಕರ ಕಾಳಗದ ನಡುವೆ ಕುಸಿದೇ ಬಿತ್ತು ಮೇಲ್ಛಾವಣಿ

ನಾಯಿಗಳಂತೆ ಬೆಲ್ಟ್‌ಗಳಿಂದ ಕಟ್ಟುವುದು, ನಾಲ್ಕು ಕಾಲುಗಳ ಮೇಲೆ ನಡೆಯುವುದು ಮತ್ತು ಬಾಯಿಂದ ನಾಣ್ಯಗಳನ್ನು ಎತ್ತಿಕೊಳ್ಳುವಂತೆ ಒತ್ತಾಯಿಸುವುದು ಸೇರಿದಂತೆ ನಾಯಿಗಳು ಮಾಡುವ ಕೆಲಸಗಳನ್ನು ನೌಕರರು ಮಾಡುವಂತೆ ಒತ್ತಾಯಿಸಲಾಯಿತು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇವರೆಲ್ಲರೂ ಮಾರ್ಕೆಟಿಂಗ್ ಉದ್ಯೋಗಿಗಳಾಗಿದ್ದಾರೆ, ಅವರೆಲ್ಲರೂ ಮನೆ ಮನೆಗಳಿಗೆ ಹೋಗಿ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಲಸ ಹೊಂದಿದ್ದಾರೆ. ಟಾರ್ಗೆಟ್ ರೀಚ್ ಆಗಲು ವಿಫಲರಾದವರಿಗೆ ಇಂತಹ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅವರೆಲ್ಲರೂ 10 ಸಾವಿರಕ್ಕಿಂತಲೂ ಕಡಿಮೆ ಸಂಬಳ ಹೊಂದಿರುವವರಾಗಿದ್ದಾರೆ.

ಕಂಪನಿಯ ವರ್ತನೆಗೆ ಟೀಕೆಗೆ ಗುರಿಯಾಗಿರುವ ಕೇರಳ ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ತಕ್ಷಣವೇ ತನಿಖೆಗೆ ಆದೇಶಿಸಿದರು. ಕಂಪನಿಯ ಮಾಲೀಕನನ್ನು ಈ ಹಿಂದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೌಕರರ ಹಕ್ಕುಗಳ ಕುರಿತು ಚರ್ಚೆಗೆ ನಾಂದಿ ಹಾಡಿದೆ.

ಆದರೆ, ಕಂಪನಿಯ ಮಾಲೀಕರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಘಟನೆಗೂ ತಮ್ಮ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಅವರು ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳುತ್ತಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us