ಕುವೈತ್‌ಗೆ ಹೋಗಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ: ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್
ಕೇರಳ ಸರ್ಕಾರವು ಗುರುವಾರ ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದು ವೀಣಾ ಜಾರ್ಜ್ ಅವರು ರಾಜ್ಯ ಮಿಷನ್ ನಿರ್ದೇಶಕ (ಎನ್‌ಎಚ್‌ಎಂ) ಜೀವನ್ ಬಾಬು ಅವರೊಂದಿಗೆ ತುರ್ತಾಗಿ ಕುವೈತ್‌ಗೆ ಪ್ರಯಾಣಿಸಲಿದ್ದು, ಗಾಯಗೊಂಡ ರಾಜ್ಯದವರ ಚಿಕಿತ್ಸೆಗೆ ಸಂಬಂಧಿಸಿದ ಪ್ರಯತ್ನಗಳನ್ನು ಸಂಘಟಿಸಲು ನಿರ್ಧರಿಸಿದ್ದಾರೆ ಎಂದು ಹೇಳಿತ್ತು.
ತಿರುವನಂತಪುರಂ ಜೂನ್ 14: ಗಲ್ಫ್ ದೇಶದ ದಕ್ಷಿಣ ನಗರವಾದ ಮಂಗಾಫ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ (Kuwait Fire) ಸಂತ್ರಸ್ತರಾಗಿರುವ ರಾಜ್ಯದ ಭಾರತೀಯ ಪ್ರಜೆಗಳ ನೆರವಿಗಾಗಿ ಕುವೈತ್‌ಗೆ (Kuwait) ತೆರಳಲು ಕೇಂದ್ರ ಸರ್ಕಾರ ತನಗೆ ಅನುಮತಿ ನೀಡಲಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George)ಶುಕ್ರವಾರ ಆರೋಪಿಸಿದ್ದಾರೆ. ಬುಧವಾರ ಕುವೈತ್‌ನ ಕಟ್ಟಡವೊಂದಕ್ಕೆ ಬೆಂಕಿ ತಗುಲಿ ಸಾವಿಗೀಡಾದ 45 ಭಾರತೀಯರ ಮೃತದೇಹಗಳನ್ನು ಸ್ವೀಕರಿಸಲು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿರುವಾಗ ಬೆಳಿಗ್ಗೆ ಕೊಚ್ಚಿಯ ವಿಮಾನ ನಿಲ್ದಾಣದ ಆಮದು ಕಾರ್ಗೋ ಟರ್ಮಿನಲ್‌ನಲ್ಲಿ ಮೌನ ಮನೆ ಮಾಡಿತ್ತು. ಸಂತ್ರಸ್ತರ ಮೃತದೇಹಗಳನ್ನು ಅವರ ಮನೆಗಳಿಗೆ ಸಾಗಿಸಲು ಆಂಬ್ಯುಲೆನ್ಸ್‌ಗಳನ್ನು ಟರ್ಮಿನಲ್‌ನಲ್ಲಿ ಇರಿಸಲಾಗಿತ್ತು.
ಕುವೈತ್‌ನ ಮಂಗಾಫ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 45 ಭಾರತೀಯರ ಮೃತದೇಹಗಳನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಬೆಳಗ್ಗೆ ಕೊಚ್ಚಿಗೆ ಬಂದಿಳಿಯಿತು. ಶುಕ್ರವಾರ ಬೆಳಗ್ಗೆ ಕುವೈತ್‌ಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಶೀಘ್ರ ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ಕುವೈತ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದರು. ಅವರು ವಿಮಾನದಲ್ಲಿದ್ದರು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಕೇರಳದ ಕಂದಾಯ ಸಚಿವರು ಹೇಳಿದ್ದೇನು?
Ernakulam: Kerala Revenue Minister K. Rajan says “It was an unfortunate incident that Kerala Health Minister Veena George was not permitted to travel to Kuwait. Our intention was to coordinate the efforts and make sure the people of Kerala admitted to the hospitals there are… pic.twitter.com/fmseLVojHK
— ANI (@ANI) June 14, 2024
“ನಮಗೆ (ಕುವೈತ್‌ಗೆ ಪ್ರಯಾಣಿಸಲು) ಒಪ್ಪಿಗೆ ಸಿಗದಿರುವುದು ತುಂಬಾ ದುರದೃಷ್ಟಕರ. ಸಾವಿಗೀಡಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಕೇರಳದವರು. ಚಿಕಿತ್ಸೆಯಲ್ಲಿರುವ ಹೆಚ್ಚಿನ ಜನರು ಕೇರಳದವರು ಎಂದು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕೇರಳ ಸರ್ಕಾರವು ಗುರುವಾರ ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದು ವೀಣಾ ಜಾರ್ಜ್ ಅವರು ರಾಜ್ಯ ಮಿಷನ್ ನಿರ್ದೇಶಕ (ಎನ್‌ಎಚ್‌ಎಂ) ಜೀವನ್ ಬಾಬು ಅವರೊಂದಿಗೆ ತುರ್ತಾಗಿ ಕುವೈತ್‌ಗೆ ಪ್ರಯಾಣಿಸಲಿದ್ದು, ಗಾಯಗೊಂಡ ರಾಜ್ಯದವರ ಚಿಕಿತ್ಸೆಗೆ ಸಂಬಂಧಿಸಿದ ಪ್ರಯತ್ನಗಳನ್ನು ಸಂಘಟಿಸಲು ನಿರ್ಧರಿಸಿದ್ದಾರೆ ಎಂದು ಹೇಳಿತ್ತು. ಸಾವಿಗೀಡಾದವರಲ್ಲಿ ಕೇರಳದ 24 ಮಂದಿ ಸೇರಿದ್ದಾರೆ. “ಗಂಭೀರವಾಗಿ ಗಾಯಗೊಂಡವರ ಸಂಖ್ಯೆಯ ಬಗ್ಗೆ ರಾಯಭಾರ ಕಚೇರಿ ನಮಗೆ ನಿಖರವಾದ ಡೇಟಾವನ್ನು ನೀಡಿಲ್ಲ. ನಾವು ಅಲ್ಲಿಂದ ಸಂಗ್ರಹಿಸಿದ ಮಾಹಿತಿಯೆಂದರೆ ಒಟ್ಟು 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಲ್ಲಿ 4 ಜನರು ಕೇರಳದವರು. ಆದರೆ ಇದು ನನ್ನ ಭೇಟಿಯ ಉದ್ದೇಶವು (ಕುವೈತ್‌ಗೆ) ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ, ನಾನು ಗಾಯಾಳುಗಳೊಂದಿಗೆ ಇರಲು ಮತ್ತು ಅವರ ಅಗತ್ಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಬಯಸುತ್ತೇನೆ ಎಂದು ಜಾರ್ಜ್ ಸುದ್ದಿಗಾರರಿಗೆ ತಿಳಿಸಿದರು.
ಕುವೈತ್ ಅಗ್ನಿ ದುರಂತದಲ್ಲಿ ಗಾಯಗೊಂಡಿರುವ ಭಾರತೀಯರ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳನ್ನು ಸಂಘಟಿಸುವಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು “ಅದ್ಭುತ” ಕೆಲಸ ಮಾಡಿದೆ ಎಂದು ಕೇಂದ್ರ ರಾಜ್ಯ ಸಚಿವ ಸುರೇಶ್ ಗೋಪಿ ಶುಕ್ರವಾರ ಹೇಳಿದ್ದಾರೆ.
ಇದನ್ನೂ ಓದಿ: ಅಗ್ನಿ ದುರಂತ: 45 ಭಾರತೀಯರ ಶವಗಳೊಂದಿಗೆ ಕುವೈತ್ನಿಂದ ಕೇರಳಕ್ಕೆ ಬಂದಿಳಿದ ಸೇನಾ ವಿಮಾನ
ಏತನ್ಮಧ್ಯೆ, ಅಗ್ನಿ ದುರಂತದಲ್ಲಿ ಸಾವಿಗೀಡಾದ ಇತರ ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ವಿಮಾನ ದೆಹಲಿಗೆ ಹೋಗುವ ಮೊದಲು 23 ಮಲಯಾಳಿಗಳು, 7 ತಮಿಳಿಗರು ಮತ್ತು ಕರ್ನಾಟಕದ ಒಬ್ಬರ ಶವಗಳನ್ನು ಕೊಚ್ಚಿಯಲ್ಲಿ ಸ್ವೀಕರಿಸಲಾಗುವುದು ಎಂದು ಕೇರಳ ಕಂದಾಯ ಸಚಿವ ಕೆ ರಾಜನ್ ಸುದ್ದಿಗಾರರಿಗೆ ತಿಳಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ