AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಕೊನೆಯ ಮುತ್ತು'; ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಬೀಳ್ಕೊಡುಗೆ ನೀಡಿದ ಕೇರಳದ ಚಾಲಕ

‘ಕೊನೆಯ ಮುತ್ತು’; ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಬೀಳ್ಕೊಡುಗೆ ನೀಡಿದ ಕೇರಳದ ಚಾಲಕ

ಸುಷ್ಮಾ ಚಕ್ರೆ
|

Updated on: Sep 04, 2026 | 11:01 PM

Share

ಹಲವು ವರ್ಷಗಳ ಕಾಲ ಬಸ್​ ಚಲಾಯಿಸಿ ಜೀವನ ಸಾಗಿಸಿದ ನಂತರ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್​ಆರ್​​ಟಿಸಿ) ಚಾಲಕರೊಬ್ಬರು ತಮ್ಮ ನಿವೃತ್ತಿಯ ದಿನವನ್ನು ಅತ್ಯಂತ ಭಾವನಾತ್ಮಕವಾಗಿ ಕಳೆದಿದ್ದಾರೆ. ಇಡುಕ್ಕಿ ಜಿಲ್ಲೆಯ ಕಟ್ಟಪ್ಪಣ ಮೂಲದ ಪೌಲ್ ಕುರಿಯನ್ ಎಂಬ ಚಾಲಕ, ಹಲವು ವರ್ಷಗಳಿಂದ ತಮ್ಮ ವೃತ್ತಿಜೀವನದ ಭಾಗವಾಗಿದ್ದ ಬಸ್​ಗೆ ಅತ್ಯಂತ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದ್ದಾರೆ. ಬಸ್​​ ಚಕ್ರಗಳನ್ನು ಮುಟ್ಟಿ ನಮಸ್ಕರಿಸಿದ ಅವರು ಬಸ್​​ನ ಮುಂಭಾಗಕ್ಕೆ ಮುತ್ತನ್ನಿಟ್ಟು ಕಣ್ಣೀರು ಹಾಕಿದ್ದಾರೆ.

ತಿರುವನಂತಪುರಂ, ಸೆಪ್ಟೆಂಬರ್ 4: ಹಲವು ವರ್ಷಗಳ ಕಾಲ ಬಸ್​ ಚಲಾಯಿಸಿ ಜೀವನ ಸಾಗಿಸಿದ ನಂತರ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್​ಆರ್​​ಟಿಸಿ) ಚಾಲಕರೊಬ್ಬರು ತಮ್ಮ ನಿವೃತ್ತಿಯ ದಿನವನ್ನು ಅತ್ಯಂತ ಭಾವನಾತ್ಮಕವಾಗಿ ಕಳೆದಿದ್ದಾರೆ. ಇಡುಕ್ಕಿ ಜಿಲ್ಲೆಯ ಕಟ್ಟಪ್ಪಣ ಮೂಲದ ಪೌಲ್ ಕುರಿಯನ್ ಎಂಬ ಚಾಲಕ, ಹಲವು ವರ್ಷಗಳಿಂದ ತಮ್ಮ ವೃತ್ತಿಜೀವನದ ಭಾಗವಾಗಿದ್ದ ಬಸ್​ಗೆ ಅತ್ಯಂತ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದ್ದಾರೆ. ಬಸ್​​ ಚಕ್ರಗಳನ್ನು ಮುಟ್ಟಿ ನಮಸ್ಕರಿಸಿದ ಅವರು ಬಸ್​​ನ ಮುಂಭಾಗಕ್ಕೆ ಮುತ್ತನ್ನಿಟ್ಟು ಕಣ್ಣೀರು ಹಾಕಿದ್ದಾರೆ.

ಪೌಲ್ ಕುರಿಯನ್ ಅವರು ತಮ್ಮ ಬಸ್ಸ್‌ಗೆ ಕೃತಜ್ಞತೆ ಸಲ್ಲಿಸಿದ ಈ ಭಾವುಕ ಕ್ಷಣವನ್ನು ಅಲ್ಲಿದ್ದವರು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ಚಾಲಕನ ಕರ್ತವ್ಯ ಪ್ರಜ್ಞೆ ಮತ್ತು ವಾಹನದೊಂದಿಗಿನ ಅವರ ಭಾವನಾತ್ಮಕ ಬಾಂಧವ್ಯವನ್ನು ಶ್ಲಾಘಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us