ಶಬರಿಮಲೆ ಪೊನ್ನಂಬಲಮೇಡುನಲ್ಲಿ ಬೆಳಗಿದ ಮಕರ ಜ್ಯೋತಿ; ದರ್ಶನ ಪಡೆದ ಅಯ್ಯಪ್ಪ ಭಕ್ತರು
ಮಕರ ಸಂಕ್ರಾಂತಿ (Makar Sankranti) ದಿನ ಆಕಾಶದಲ್ಲಿ ನಕ್ಷತ್ರ ಉದಯಿಸುತ್ತಿದ್ದಂತೆ ಪೊನ್ನಂಬಲಮೇಡುನಲ್ಲಿ ಮಕರ ಜ್ಯೋತಿ ಬೆಳಗಿತು. ಮಕರ ಜ್ಯೋತಿ ದರ್ಶನ ಪಡೆದು ಶರಣಂ ಅಯ್ಯಪ್ಪ ಎಂಬ ಸ್ತುತಿಯೊಂದಿಗೆ ಅಯ್ಯಪ್ಪ ಭಕ್ತರು ಪುನೀತರಾದ ಕ್ಷಣ ಅದಾಗಿತ್ತು.
ಶಬರಿಮಲೆ: ಶಬರಿಮಲೆ (Sabarimala) ಪೊನ್ನಂಬಲಮೇಡುನಲ್ಲಿ ಮಕರ ಜ್ಯೋತಿ (Makara Jyothi) ಕಾಣಿಸಿದೆ. ಮಕರ ಸಂಕ್ರಾಂತಿ (Makar Sankranti) ದಿನ ಆಕಾಶದಲ್ಲಿ ನಕ್ಷತ್ರ ಉದಯಿಸುತ್ತಿದ್ದಂತೆ ಪೊನ್ನಂಬಲಮೇಡುನಲ್ಲಿ ಮಕರ ಜ್ಯೋತಿ ಬೆಳಗಿತು. ಮಕರ ಜ್ಯೋತಿ ದರ್ಶನ ಪಡೆದು ಶರಣಂ ಅಯ್ಯಪ್ಪ ಎಂಬ ಸ್ತುತಿಯೊಂದಿಗೆ ಅಯ್ಯಪ್ಪ ಭಕ್ತರು ಪುನೀತರಾದ ಕ್ಷಣ ಅದಾಗಿತ್ತು. ಶಬರಿಮಲೆ ಸನ್ನಿಧಾನಂ ದೇಗುಲದಲ್ಲಿ ತಿರುವಾಭರಣ ಅಲಂಕೃತ ಅಯ್ಯಪ್ಪನಿಗೆ ದೀಪಾರಾಧನೆ ವೇಳೆ ಮಕರವಿಳಕ್ಕು ಬೆಳಗಿತು. ಸನ್ನಿಧಾನಂ, ಪಂಪಾ ಸೇರಿದಂತೆ ಪೊನ್ನಂಬಲಮೇಡು ಕಾಣಸಿಗುವ ಸ್ಥಳಗಳಲ್ಲಿ ಅಯ್ಯಪ್ಪ ಭಕ್ತರು ಜ್ಯೋತಿ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದರು. ಮಕರಸಂಕ್ರಮಣದ ಮುನ್ನಾದಿನದಂದು ಅಯ್ಯಪ್ಪನಿಗೆ ತೊಡುವ ತಿರುವಾಭರಣಗಳೊಂದಿಗೆ ಪಂದಳಂನಿಂದ ಮೆರವಣಿಗೆಯು ಸಂಜೆ 5 ಗಂಟೆಗೆ ಶರಂಕುತ್ತಿ ತಲುಪಿತು. ಅಲ್ಲಿಂದ ದೇವಸ್ವಂ ಬೋರ್ಡ್ ನಿಯೋಗವು ಮೆರವಣಿಗೆಯನ್ನು ಬರಮಾಡಿಕೊಂಡು ವಾದ್ಯಮೇಳದೊಂದಿಗೆ ಸನ್ನಿಧಾನಕ್ಕೆ ಕೊಂಡೊಯ್ದಿತು. ಧ್ವಜಸ್ತಂಭದಡಿಯಲ್ಲಿ ಅವರನ್ನು ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್, ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್, ಸದಸ್ಯ ಮನೋಜ್ ಚರಲೇಲ್, ಎಡಿಜಿಪಿ ಎಸ್.ಶ್ರೀಜಿತ್ ಬರಮಾಡಿಕೊಂಡರು. ಸ್ವೀಕರಿಸಿದ ತಿರುವಾಭರಣಗಳನ್ನು ಅಯ್ಯಪ್ಪನ ಮೂರ್ತಿಗೆ ತೊಡಿಸಿ ತಂತ್ರಿ ಮತ್ತು ಮೇಲ್ಶಾಂತಿ ಪೂಜೆಸಲ್ಲಿಸಿದರು. ಬಳಿಕ ಪೊನ್ನಂಬಲಮೇಡುಬೆಟ್ಟದಲ್ಲಿ ಮಕರವಿಳಕ್ಕು ಕಾಣಿಸಿತು . ಮಧ್ಯಾಹ್ನ 2.29ಕ್ಕೆ ಮಕರ ಸಂಕ್ರಮಣದ ವೇಳೆ ಕವಡಿಯಾರ್ ಅರಮನೆಯಿಂದ ತುಪ್ಪದಿಂದ ಅಯ್ಯಪ್ಪನಿಗೆ ಅಭಿಷೇಕ ಮಾಡಲಾಯಿತು. ಮಕರ ಸಂಕ್ರಮಣ ಪೂಜೆಯ ನಂತರ ಮುಚ್ಚಿದ್ದ ಮೆಟ್ಟಿಲುಗಳನ್ನು ಸಂಜೆ 5 ಗಂಟೆಗೆ ತೆರೆಯಲಾಯಿತು.
When the Makara Jyothi appears in the sky, it is eternal bliss for the devotees of Lord Ayyappa.
LIVE NOW –#Sabarimala #Makaravilakku on https://t.co/G7VbbnRozy pic.twitter.com/GOPkX0FKvZ
— Doordarshan National दूरदर्शन नेशनल (@DDNational) January 14, 2022
ಕೊವಿಡ್ ಹಿನ್ನೆಲೆಯಲ್ಲಿ ಮತ್ತೆ ನಿರ್ಬಂಧಗಳನ್ನು ಹೇರಲಾಗಿದೆ. ಈ ಬಾರಿ ಎಲ್ಲಿಯೂ ಗುಡಿಸಲು ಕಟ್ಟಲು ಅನುಮತಿ ಇರಲಿಲ್ಲ. ಈ ಬಾರಿ ಪುಲ್ಲುಮೇಟ್ಟುಗೆ ಭೇಟಿ ನೀಡಲು ಅನುಮತಿ ಇರಲಿಲ್ಲ. ನಿನ್ನೆ ರಾತ್ರಿ ಳಾಹ ಫಾರೆಸ್ಟ್ ಛತ್ರದಲ್ಲಿ ವಿಶ್ರಾಂತಿ ಪಡೆದು ಮುಂಜಾನೆ 3 ಗಂಟೆಗೆ ತಿರುವಾಭರಣ ಮೆರವಣಿಗೆಯು ತಲಪ್ಪಾರ ಕೋಟೆ, ಅಟ್ಟತೊಡು ಕಾಲೋನಿ, ಎತ್ತಪಟ್ಟಿ ಮತ್ತು ಒಳಿಯಂಬುಳ ಮೂಲಕ ಮಧ್ಯಾಹ್ನ ವಲಿಯಾನವಟ್ಟಂಗೆ ತಲುಪಿತು. ವಿಶ್ರಾಂತಿ ಪಡೆದು ಚೆರಿಯಾನವಟ್ಟಂ, ನೀಲಿಮಲ, ಅಪ್ಪಾಚ್ಚಿ ಮೇಡ್ ಮತ್ತು ಶಬರಿ ಪೀಠದ ಮೂಲಕ ಶರಂಕುತ್ತಿಗೆ ತಲುಪಿತ್ತು. ಜನವರಿ 19ರವರೆಗೆ ಭಕ್ತರು ದರ್ಶನ ಪಡೆಯಬಹುದು.
ಪಂಪಾ ‘ವಿಳಕ್ಕು’, ‘ಸದ್ಯ’ ಇದಕ್ಕೂ ಮುನ್ನ ಗುರುವಾರ ಪಂಪಾ (ಪಂಬಾ) ನದಿಯ ದಡದಲ್ಲಿ ತೀರ್ಥೋದ್ಭವದ ಅಂಗವಾಗಿ ಪಂಬಾ ‘ವಿಳಕ್ಕು’ ಮತ್ತು ‘ಸದ್ಯ’ ವಿಧಿವಿಧಾನಗಳನ್ನು ನಡೆಸಲಾಯಿತು. ಮಧ್ಯಾಹ್ನದ ಸಮಯದಲ್ಲಿ ಹಲವಾರು ರುಚಿಕರವಾದ ಭಕ್ಷ್ಯಗಳನ್ನು ಒಳಗೊಂಡಿರುವ ‘ಸದ್ಯ’ವನ್ನು ಬಡಿಸಲಾಗುತ್ತದೆ ಮತ್ತು ಬಿದಿರಿನಿಂದ ಮಾಡಿದ ದೀಪಗಳನ್ನು ನದಿಯಲ್ಲಿ ತೇಲಿಸುವ ‘ವಿಳಕ್ಕು’ ಎಂಬ ಆಚರಣೆಯು ಸೂರ್ಯಾಸ್ತದ ನಂತರ ನಡೆಯಿತು. ಈ ಆಚರಣೆಗಳ ನಂತರ, ಅಲಂಗಾಡ್ ಮತ್ತು ಅಂಬಲಪ್ಪುಳದ ಯಾತ್ರಾರ್ಥಿಗಳ ತಂಡಗಳು ಪಂಬಾದಿಂದ ಸನ್ನಿಧಾನಂನಲ್ಲಿರುವ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ತಮ್ಮ ಹತ್ತಲು ಪ್ರಾರಂಭಿಸಿದವು.
ಇದನ್ನೂ ಓದಿ: Kumbalangi: ಕೇರಳದ ಕುಂಬಳಂಗಿ ದೇಶದ ಮೊಟ್ಟ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಗ್ರಾಮ!
Published On - 8:10 pm, Fri, 14 January 22