Kumbalangi: ಕೇರಳದ ಕುಂಬಳಂಗಿ ದೇಶದ ಮೊಟ್ಟ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಗ್ರಾಮ!
Menstrual Cup: ಭಾರತದ ಮೊದಲ ಮಾದರಿ ಪ್ರವಾಸೋದ್ಯಮ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕುಂಬಳಂಗಿಯು ದೇಶದ ಮೊದಲ ಸ್ಯಾನಿಟರಿ ನ್ಯಾಪ್ಕಿನ್ ಮುಕ್ತ ಪಂಚಾಯತ್ ಆಗಲಿದೆ.
ಎರ್ನಾಕುಲಂ: ಕೇರಳದ ಎರ್ನಾಕುಲಂನಲ್ಲಿರುವ ಕುಂಬಳಂಗಿ (Kumbalangi) ದೇಶದಲ್ಲೇ ಮೊದಲ ಸ್ಯಾನಿಟರಿ ನ್ಯಾಪ್ಕಿನ್ ಮುಕ್ತ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿನ್ನೆ (ಗುರುವಾರ) ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕುಂಬಳಂಗಿಯನ್ನು ಸ್ಯಾನಿಟರಿ ಪ್ಯಾಡ್ ಮುಕ್ತ ಗ್ರಾಮವೆಂದು ಘೋಷಣೆ ಮಾಡಿದ್ದಾರೆ. ಎರ್ನಾಕುಲಂ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶಿಷ್ಟವಾದ ಪ್ರಚಾರದ ಭಾಗವಾಗಿ ಈ ಸಾಧನೆ ಮಾಡಲಾಗಿದೆ.
ಮಹಿಳೆಯರಲ್ಲಿ ಋತುಚಕ್ರದ ಸಂದರ್ಭದಲ್ಲಿ ಯಾವ ರೀತಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸುವ ಪ್ರಚಾರದ ಭಾಗವಾಗಿ, 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಒಟ್ಟು 5,000 ಮುಟ್ಟಿನ ಕಪ್‌ಗಳನ್ನು ವಿತರಿಸಲಾಗುವುದು.
ಕೇರಳದ ಸಂಸದ ಹಿಬಿ ಈಡನ್ ಪ್ರಕಾರ, ಎರ್ನಾಕುಲಂ ಸಂಸದೀಯ ಕ್ಷೇತ್ರದಲ್ಲಿ ಜಾರಿಗೊಳಿಸಲಾಗುತ್ತಿರುವ ‘ಅವಲ್ಕೈ’ (ಅವಳಿಗಾಗಿ) ಯೋಜನೆಯ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಕೊಚ್ಚಿಯಲ್ಲಿರುವ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕುಂಬಳಂಗಿ ಕೂಡ ಹೊಸ ಪ್ರವಾಸಿ ಮಾಹಿತಿ ಕೇಂದ್ರವನ್ನು ಹೊಂದಿದೆ. ಇದು ಭಾರತದ ಮೊದಲ ಮಾದರಿ ಪ್ರವಾಸಿ ಗ್ರಾಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಭಾರತದ ಮೊದಲ ಮಾದರಿ ಪ್ರವಾಸೋದ್ಯಮ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕುಂಬಳಂಗಿಯು ದೇಶದ ಮೊದಲ ಸ್ಯಾನಿಟರಿ ನ್ಯಾಪ್ಕಿನ್ ಮುಕ್ತ ಪಂಚಾಯತ್ ಆಗಲಿದೆ. ಎಚ್‌ಎಲ್‌ಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿಯ ‘ತಿಂಗಲ್’ ಯೋಜನೆ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನೊಂದಿಗಿನ ಒಪ್ಪಂದದ ನಂತರ ಎರ್ನಾಕುಲಂ ಸಂಸದೀಯ ಕ್ಷೇತ್ರದಲ್ಲಿ ಜಾರಿಗೊಳಿಸಲಾಗುತ್ತಿರುವ ‘ಅವಲ್ಕೈ’ ಎಂಬ ಉಪಕ್ರಮದ ಒಂದು ಭಾಗವಾಗಿ ಈ ಕ್ರಮವನ್ನು ಮಾಡಲಾಗಿದೆ ಎಂದು ಸಂಸದ ಹೈಬಿ ಈಡನ್ ಹೇಳಿದ್ದಾರೆ.
ಇದನ್ನೂ ಓದಿ: ಕೊವಿಡ್ ಪ್ರಕರಣ ಏರಿಕೆ : ಕೇರಳದಲ್ಲಿ 1ರಿಂದ 9ನೇ ತರಗತಿವರೆಗೆ ಶಾಲೆಗಳಿಗೆ ರಜೆ ಘೋಷಣೆ
ಕೇರಳ: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ; ಆರೋಪಿ ಬಿಷಪ್ ಫ್ರಾಂಕೋ ಮುಳಯ್ಕಲ್ ತಪ್ಪಿತಸ್ಥನಲ್ಲ ಎಂದ ಕೋರ್ಟ್