ಮಾಟ-ಮಂತ್ರದ ವಿಚಾರವಾಗಿ ಕಲಹ, ಪತ್ನಿ ಮೇಲೆ ಬಿಸಿ ಬಿಸಿ ಫಿಶ್ ಕರಿ ಎರಚಿದ ಪತಿ

ಮಾಟ ಮಂತ್ರ(Black Magic)ದ ವಿಚಾರವಾಗಿ ಪತಿ-ಪತ್ನಿ ನಡುವೆ ವಾಗ್ವಾದ ನಡೆದಿದೆ. ಪತಿ ಕೋಪದಲ್ಲಿ ಪತ್ನಿಯ ಮೇಲೆ ಬಿಸಿ ಬಿಸಿ ಫಿಶ್​ ಕರಿ ಎರಚಿರುವ ಘಟನೆ ಕೇರಳದ ಕೊಲ್ಲಂನಲ್ಲಿ ವರದಿಯಾಗಿದೆ. ಚಡಯಮಂಗಲಂ ಸಮೀಪದ ವೈಕ್ಕಲ್‌ನ ಸಂತ್ರಸ್ತೆ ರೆಜಿಲಾ ಗಫೂರ್ (36) ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಮಾಟ-ಮಂತ್ರದ ವಿಚಾರವಾಗಿ ಕಲಹ, ಪತ್ನಿ ಮೇಲೆ ಬಿಸಿ ಬಿಸಿ ಫಿಶ್ ಕರಿ ಎರಚಿದ ಪತಿ
ಕ್ರೈಂ

Updated on: Oct 31, 2025 | 10:08 AM

ಕೊಲ್ಲಂ, ಅಕ್ಟೋಬರ್ 31: ಮಾಟ ಮಂತ್ರ(Black Magic)ದ ವಿಚಾರವಾಗಿ ಪತಿ–ಪತ್ನಿ ನಡುವೆ ವಾಗ್ವಾದ ನಡೆದಿದೆ. ಪತಿ ಕೋಪದಲ್ಲಿ ಪತ್ನಿಯ ಮೇಲೆ ಬಿಸಿ ಬಿಸಿ ಫಿಶ್​ ಕರಿ ಎರಚಿರುವ ಘಟನೆ ಕೇರಳದ ಕೊಲ್ಲಂನಲ್ಲಿ ವರದಿಯಾಗಿದೆ. ಚಡಯಮಂಗಲಂ ಸಮೀಪದ ವೈಕ್ಕಲ್‌ನ ಸಂತ್ರಸ್ತೆ ರೆಜಿಲಾ ಗಫೂರ್ (36) ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸಜೀರ್ ರೆಜಿಲಾ ಅವರ ಕೂದಲನ್ನು ಸಡಿಲಗೊಳಿಸಿ, ತನ್ನ ಮುಂದೆ ಕುಳಿತು, ಭಸ್ಮ ಹಚ್ಚಿಕೊಳ್ಳುವಂತೆ ಮತ್ತು ಮಾಟಮಂತ್ರ ಮಾಡುವವರು ನೀಡಿದ ಲಾಕೆಟ್ ಧರಿಸುವಂತೆ ಕೇಳಿಕೊಂಡಿದ್ದ ಎಂದು ಎಫ್​ಐಆರ್​ನಲ್ಲಿ ತಿಳಿಸಲಾಗಿದೆ.

ಆಕೆ ನಿರಾಕರಿಸಿದಾಗ, ಅಡುಗೆಮನೆಯ ಒಲೆ ಮೇಲೆ ಕುದಿಯುತ್ತಿದ್ದ ಫಿಶ್ ಕರಿಯ ಪಾತ್ರೆಯನ್ನು ತೆಗೆದುಕೊಂಡು ಬಂದು ಪತ್ನಿಯ ಮೇಲೆ ಸುರಿದಿದ್ದಾನೆ.

ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದಾರೆ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಜೀರ್ ತನ್ನ ಪತ್ನಿಗೆ ದೆವ್ವ ಹಿಡಿದಿದೆ ಎಂದು ಭಾವಿಸಿ, ಈ ಹಿಂದೆ ಹಲವಾರು ಬಾರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು, ಪತಿ ತನ್ನ ಮೇಲೆ ಹಲ್ಲೆ ನಡೆಸಿದ ನಂತರ ಆಕೆ ಪೊಲೀಸರನ್ನು ಸಂಪರ್ಕಿಸಿದ್ದರು.

ಮತ್ತಷ್ಟು ಓದಿ:  ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾಟ ಮಂತ್ರಗಳ‌ ಕಾಟ! ಭಯಭೀತರಾದ ವಾಹನ ಸವಾರರು

ಆಗ ಆತನಿಗೆ ಎಚ್ಚರಿಕೆ ನೀಡಲಾಗಿದ್ದರೂ, ನಂತರ ಆತ ಮಾಟಮಂತ್ರ ಮಾಡುವವರನ್ನು ಸಂಪರ್ಕಿಸುವುದನ್ನು  ಬಿಟ್ಟಿರಲಿಲ್ಲ. ಗಂಡ ತಮ್ಮ ಮಗನ ಮೇಲೂ ಆಗಾಗ ಹಲ್ಲೆ ನಡೆಸುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us