ಮೊಬೈಲ್​ನಲ್ಲಿ 3 ಬಾರಿ ತಲಾಖ್ ಹೇಳಿ ಹೆಂಡತಿಗೆ ಹೆದರಿಸಿದ ಗಂಡ; ಕೇರಳದ ವ್ಯಕ್ತಿ ಮೇಲೆ ಕಿರುಕುಳದ ಆರೋಪ

ಕೇರಳದಲ್ಲಿ ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಫೋನ್‌ನಲ್ಲಿ ತ್ರಿವಳಿ ತಲಾಖ್ ಉಚ್ಚರಿಸಿ ಪತ್ನಿಗೆ ಹಿಂಸೆ ನೀಡಿದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಲಾಖ್ ಅನ್ನು ಅಮಾನ್ಯ ಮತ್ತು ಕಾನೂನುಬಾಹಿರವೆಂದು ಪರಿಗಣಿಸುವ ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿಯೂ ಕೇಸ್ ದಾಖಲಿಸಲಾಗಿದೆ.

ಮೊಬೈಲ್​ನಲ್ಲಿ 3 ಬಾರಿ ತಲಾಖ್ ಹೇಳಿ ಹೆಂಡತಿಗೆ ಹೆದರಿಸಿದ ಗಂಡ; ಕೇರಳದ ವ್ಯಕ್ತಿ ಮೇಲೆ ಕಿರುಕುಳದ ಆರೋಪ
Muslim Woman
Image Credit source: iStock

Updated on: Feb 24, 2026 | 3:36 PM

ಕೊಚ್ಚಿ, ಫೆಬ್ರವರಿ 24: ಮೊಬೈಲ್ ಮೂಲಕ ತ್ರಿವಳಿ ತಲಾಖ್ (Triple Talaq) ಹೇಳಿ ಪತ್ನಿಯನ್ನು ಕ್ರೌರ್ಯಕ್ಕೆ ಒಳಪಡಿಸಿದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 85ರ ಅಡಿಯಲ್ಲಿ ಮುವಾಟ್ಟುಪುಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಪತಿ ಅಥವಾ ಅವನ ಸಂಬಂಧಿಕರು ಮಹಿಳೆಯ ಮೇಲೆ ಕ್ರೌರ್ಯ ನಡೆಸುವುದಕ್ಕೆ ಸಂಬಂಧಿಸಿದ್ದಾಗಿದೆ.

ತಲಾಖ್ ಅನ್ನು ಅಮಾನ್ಯ ಮತ್ತು ಕಾನೂನುಬಾಹಿರವೆಂದು ಪರಿಗಣಿಸುವ ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿಯೂ ಕೇಸ್ ದಾಖಲಿಸಲಾಗಿದೆ. ಇದು ತಲಾಖ್ ಅನ್ನು ಅಮಾನ್ಯ ಮತ್ತು ಕಾನೂನುಬಾಹಿರಗೊಳಿಸುತ್ತದೆ. ತಲಾಖ್ ಉಚ್ಚರಿಸುವುದಕ್ಕೆ ಶಿಕ್ಷೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: Video: ನನ್ಗೇ ತಲಾಖ್ ಕೊಡ್ತೀಯಾ? ಕೋರ್ಟ್​ ಆವರಣದಲ್ಲಿ ಗಂಡನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ಮುಸ್ಲಿಂ ಮಹಿಳೆ

ಆರೋಪಿಯನ್ನು ಅಲಪ್ಪುಳ ಜಿಲ್ಲೆಯ ಕಾರ್ತಿಕಪ್ಪಲ್ಲಿ ತಾಲೂಕಿನ ಮೂಲದ ಸುಹೈಲ್ ಎಂದು ಗುರುತಿಸಲಾಗಿದೆ. ಈ ದಂಪತಿ ಸೆಪ್ಟೆಂಬರ್ 18, 2016ರಂದು ಮುಸ್ಲಿಂ ಧಾರ್ಮಿಕ ಪದ್ಧತಿಗಳನ್ನು ಅನುಸರಿಸಿ ವಿವಾಹವಾಗಿದ್ದರು. ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಅವರಿಬ್ಬರ ನಡುವೆ ಇತ್ತೀಚೆಗೆ ವೈಮಸ್ಸು ಹೆಚ್ಚಾಗಿತ್ತು.

ಮದುವೆಯ ನಂತರ, ಸುಹೈಲ್ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಕ್ರಮೇಣ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದ. ಆ ಮಹಿಳೆಯನ್ನು ಮುವಾಟ್ಟುಪುಳ ಪ್ರದೇಶದಲ್ಲಿ ಬೇರೆಯಾಗಿ ವಾಸಿಸುವಂತೆ ಒತ್ತಾಯಿಸಿದ. ಈ ಅವಧಿಯಲ್ಲಿ ಆಕೆ ಹಾಸ್ಟೆಲ್‌ಗಳು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: ಕೋಲಾರ: ಮಲ ತಂದೆ ತಾಯಿಗೆ ತಲಾಖ್ ನೀಡಿದ್ದರಿಂದ ಮನನೊಂದು ಮಗ ಆತ್ಮಹತ್ಯೆ

ಮೇ 21, 2025ರಂದು ರಾತ್ರಿ 9 ಗಂಟೆ ಸುಮಾರಿಗೆ ಆರೋಪಿಯು ತನ್ನ ಹೆಂಡತಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದ. ಅಲ್ಲದೆ, ಆಕೆಯ ಕುಟುಂಬದ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ, ತಲಾಖ್ ಎಂದು ಹೇಳಿ ಆಕೆಗೆ ವಿಚ್ಛೇದನ ನೀಡಿರುವುದಾಗಿ ಎಸ್‌ಎಂಎಸ್ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.

ನನ್ನ ಗಂಡ ನನ್ನ ಮೇಲೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us