AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರೂ ಸಾಯೋಣ ಎಂದು ಯುವತಿಯನ್ನು ನಂಬಿಸಿ ಕೊಂದ ಹಂತಕ!

ಕಳೆದ ಶನಿವಾರ ಎಲತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಆರೋಪಿಯ ಒಡೆತನದ ಕೈಗಾರಿಕಾ ಘಟಕದಲ್ಲಿ 26 ವರ್ಷದ ಯುವತಿ ನೇಣು ಬಿಗಿದುಕೊಂಡು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆ ಯುವತಿಯ ಸಂಬಂಧಿಯಾಗಿರುವ ವೈಶಾಖ್, ಆಕೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡುಕೊಂಡು ತನ್ನ ಪತ್ನಿಯ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದ್ದಾಗಿ ಹೇಳಿಕೊಂಡಿದ್ದಾನೆ. ಆದರೆ, ಈ ತನಿಖೆಯು ಭಯಾನಕ ಸತ್ಯವನ್ನು ಬಯಲು ಮಾಡಿದೆ.

ಇಬ್ಬರೂ ಸಾಯೋಣ ಎಂದು ಯುವತಿಯನ್ನು ನಂಬಿಸಿ ಕೊಂದ ಹಂತಕ!
Suicide
ಸುಷ್ಮಾ ಚಕ್ರೆ
|

Updated on: Jan 27, 2026 | 4:43 PM

Share

ಕೋಝಿಕೋಡ್, ಜನವರಿ 27: ಕೇರಳದಲ್ಲಿ ಆರಂಭದಲ್ಲಿ ಆತ್ಮಹತ್ಯೆ ಎಂದು ಭಾವಿಸಲಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇಂದು ಪೊಲೀಸರು 36 ವರ್ಷದ ವ್ಯಕ್ತಿಯನ್ನು ತನ್ನ ಸಂಬಂಧಿಯ ಕೊಲೆಗೆ (Murder) ಸಂಬಂಧಿಸಿದಂತೆ ಬಂಧಿಸಿದ್ದಾರೆ. ಜನವರಿ 24ರಂದು ಯುವತಿಯ ಸಾವು ಸಂಭವಿಸಿದಾಗ ಅದನ್ನು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಆದರೆ, ತನ್ನ ಅಕ್ರಮ ಸಂಬಂಧವನ್ನು ಮರೆಮಾಡಲು ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಶನಿವಾರ ಎಲತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಆರೋಪಿಯ ಒಡೆತನದ ಕೈಗಾರಿಕಾ ಘಟಕದಲ್ಲಿ 26 ವರ್ಷದ ಯುವತಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆ ಯುವತಿಯ ಸಂಬಂಧಿಯಾಗಿರುವ ವೈಶಾಖ್, ಆಕೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ನೋಡಿ ನನ್ನ ಪತ್ನಿಯ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದೆ ಎಂದು ಹೇಳಿಕೊಂಡಿದ್ದ. ಆದರೆ, ತನಿಖೆಯ ವೇಳೆ ಭಯಾನಕ ಸಂಗತಿಗಳು ಬಯಲಾಯಿತು.

ಇದನ್ನೂ ಓದಿ: ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ: ಮಹಿಳೆ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ವೈಶಾಖ್ ಆ ಯುವತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಆದರೆ, ತಮ್ಮ ಸಂಬಂಧವನ್ನು ಯಾರೂ ಒಪ್ಪದ ಕಾರಣದಿಂದ ಆಕೆಯ ಮನವೊಲಿಸಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಒಪ್ಪಿಸಿದ್ದ. ಆತನ ಮಾತು ನಂಬಿ ಆಕೆ ನೇಣು ಹಾಕಿಕೊಂಡಿದ್ದಳು. ಆಕೆಯನ್ನು ನಂಬಿಸಲು ಆತ ಆಕೆಯ ಪಕ್ಕದಲ್ಲೇ ಇನ್ನೊಂದು ಕುಣಿಕೆಯನ್ನು ಕೂಡ ಹಾಕಿದ್ದ. ನಂತರ ತಾನೇ ಆಕೆಯ ಸ್ಟೂಲ್ ಒದ್ದು ಆಕೆಯನ್ನು ಸಾಯಿಸಿದ್ದ. ನಂತರ ಆತ ಆಕೆ ಸತ್ತಿರುವುದನ್ನು ಕನ್ಫರ್ಮ್ ಮಾಡಿಕೊಂಡು ಆಸ್ಪತ್ರೆಗೆ ಸೇರಿಸುವ ನಾಟಕವಾಡಿದ್ದ.

ವೈಶಾಖ್‌ ತನ್ನ ಪ್ಲಾನ್ ಪೊಲೀಸರಿಗೆ ಗೊತ್ತಾಗುವುದಿಲ್ಲ ಎಂದುಕೊಂಡಿದ್ದ. ಆದರೆ, ವಿಧಿವಿಜ್ಞಾನ ವರದಿಗಳು ಆ ಯುವತಿ ನೇಣು ಹಾಕಿಕೊಳ್ಳುವಾಗ ಮತ್ತು ಅವಳನ್ನು ಕೆಳಗೆ ಇಳಿಸಿದ ನಂತರವೂ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಳೆ ಎಂದು ಸೂಚಿಸಿದಾಗ ಪೊಲೀಸರು ತನಿಖೆಯನ್ನು ಹೆಚ್ಚಿಸಿದರು.

ಇದನ್ನೂ ಓದಿ: ನಂಬಿಕೆ ಉಳಿಸಿಕೊಂಡ ಪೊಲೀಸರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ರಕ್ಷಣೆ

ಆ ರಾತ್ರಿ ಅಲ್ಲಿಂದ ಹಿಂತಿರುಗಿ ಸಿಸಿಟಿವಿ ಹಾರ್ಡ್ ಡ್ರೈವ್ ಅನ್ನು ನಾಶಮಾಡಿ ಸಾಕ್ಷ್ಯವನ್ನು ಅಳಿಸಿಹಾಕುವುದು ಅವನ ಕೊನೆಯ ಪ್ಲಾನ್ ಆಗಿತ್ತು. ಆದರೆ, ಪೊಲೀಸರಿಗೆ ವೈಶಾಖ್ ನಡವಳಿಕೆಯಲ್ಲಿ ಅನುಮಾನ ಬಂದ ಕಾರಣದಿಂದ ಆತನ ಬಗ್ಗೆ ಒಂದು ಕಣ್ಣಿಟ್ಟಿದ್ದರು. ಪೊಲೀಸರ ವಿಚಾರಣೆಯಲ್ಲಿ, ವೈಶಾಖ್ ಕೊನೆಗೂ ತಪ್ಪೊಪ್ಪಿಕೊಂಡಿದ್ದಾನೆ.

ತಾನು ಹಾಗೂ ಆ ಯುವತಿ ಅಕ್ರಮ ಸಂಬಂಧದಲ್ಲಿದ್ದಾಗಿಯೂ, ಆಕೆ ನಿರಂತರವಾಗಿ ತನ್ನನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಿದ್ದರಿಂದ ತಾನು ಒತ್ತಡಕ್ಕೊಳಗಾಗಿದ್ದೆ. ಹೀಗಾಗಿ, ಆಕೆಯನ್ನು ಕೊಲ್ಲಲು ಪ್ಲಾನ್ ಮಾಡಿದ್ದಾಗಿ ಹೇಳಿದ್ದಾನೆ. ಇದರಿಂದಾಗಿ ಆತ್ಮಹತ್ಯೆಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಅರೆಸ್ಟ್​ ಆದ್ರೂ ಖುಷಿ ಖುಷಿಯಲ್ಲಿರುವ ರಾಜೀವ್ ಗೌಡ ಹೇಳಿದ್ದೇನು?
ಅರೆಸ್ಟ್​ ಆದ್ರೂ ಖುಷಿ ಖುಷಿಯಲ್ಲಿರುವ ರಾಜೀವ್ ಗೌಡ ಹೇಳಿದ್ದೇನು?
ರಾಜೀವ್​ ಗೌಡನಿಗೆ ಆಶ್ರಯ ನೀಡಿದ್ದ ಉದ್ಯಮಿ ಯಾರು? ಸಿಕ್ಕಿಬಿದ್ದಿದ್ದು ಹೇಗೆ?
ರಾಜೀವ್​ ಗೌಡನಿಗೆ ಆಶ್ರಯ ನೀಡಿದ್ದ ಉದ್ಯಮಿ ಯಾರು? ಸಿಕ್ಕಿಬಿದ್ದಿದ್ದು ಹೇಗೆ?
ಕತ್ತರಿಸಿದ ನಂತರವೂ ಸಾಯದೆ ಚಡಪಡಿಸುತ್ತಿರುವ ಮೀನು! ವಿಡಿಯೋ ನೋಡಿ
ಕತ್ತರಿಸಿದ ನಂತರವೂ ಸಾಯದೆ ಚಡಪಡಿಸುತ್ತಿರುವ ಮೀನು! ವಿಡಿಯೋ ನೋಡಿ
ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಬಹುಕೋಟಿ ಒಡೆಯ ಸಹ ಅರೆಸ್ಟ್
ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಬಹುಕೋಟಿ ಒಡೆಯ ಸಹ ಅರೆಸ್ಟ್
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು?
ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು?
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ
ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ!
ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ!