Kerala Corona Cases: ಕೇರಳದಲ್ಲಿ 20,000ಕ್ಕಿಂತ ಕಡಿಮೆ ಕೊರೊನಾ ಪ್ರಕರಣಗಳು ದಾಖಲು; 135 ಮಂದಿ ಸಾವು

Covid19: 28,561 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆ ಮೂಲಕ, ಕೊವಿಡ್ ಸೋಂಕಿನಿಂದ ಗುಣಮುಖ ಆದವರ ಪ್ರಮಾಣ 39,66,558 ಆಗಿದೆ. ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 2,38,782 ಆಗಿದೆ.

Kerala Corona Cases: ಕೇರಳದಲ್ಲಿ 20,000ಕ್ಕಿಂತ ಕಡಿಮೆ ಕೊರೊನಾ ಪ್ರಕರಣಗಳು ದಾಖಲು; 135 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: ganapathi bhat

Sep 06, 2021 | 8:52 PM

ತಿರುವನಂತಪುರಂ: ಕೇರಳದಲ್ಲಿ ಸೋಮವಾರ (ಸಪ್ಟೆಂಬರ್ 6) 19,688 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ತನ್ಮೂಲಕ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 42,27,526 ಆಗಿದೆ. ಕಳೆದ ಹತ್ತು ದಿನಗಳ ಕೊವಿಡ್19 ಪ್ರಕರಣಗಳಲ್ಲಿ ಇಂದು ಮೊದಲ ಬಾರಿಗೆ 20,000 ಕ್ಕಿಂತ ಕಡಿಮೆ ಕೊರೊನಾ ಕೇಸ್​ಗಳು ವರದಿಯಾಗಿವೆ. ಸೋಮವಾರ ಕೊವಿಡ್19 ಪ್ರಕರಣದಿಂದ ಕೇರಳದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. ಅದರಂತೆ ಕೊರೊನಾದಿಂದ ಮರಣಿಸಿದವರ ಸಂಖ್ಯೆ 21,631 ಆಗಿದೆ. ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇಕಡಾ 16.71 ಆಗಿದೆ. ಕಳೆದ 24 ಗಂಟೆಗಳಲ್ಲಿ 1,17,823 ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ಹೇಳಿದೆ.

28,561 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆ ಮೂಲಕ, ಕೊವಿಡ್ ಸೋಂಕಿನಿಂದ ಗುಣಮುಖ ಆದವರ ಪ್ರಮಾಣ 39,66,558 ಆಗಿದೆ. ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 2,38,782 ಆಗಿದೆ.

ಕೇರಳದ 14 ಜಿಲ್ಲೆಗಳ ಪೈಕಿ ತ್ರಿಶ್ಶೂರ್​ನಲ್ಲಿ 3,120 ಅತಿಹೆಚ್ಚು ಕೊವಿಡ್ ಪ್ರಕರಣಗಳು ವರದಿ ಆಗಿದೆ. ಕೋಯಿಕ್ಕೋಡ್ 2,205, ಎರ್ನಾಕುಲಂ 2,029, ಮಲಪ್ಪುರಂ 1,695, ಕೊಲ್ಲಮ್ 1,624, ಪಾಲಕ್ಕಾಡ್ 1,569, ತಿರುವನಂತಪುರಂ 1,483, ಅಲಪ್ಪುಜ 1,444, ಕಣ್ಣೂರ್ 1,262, ಕೊಟ್ಟಾಯಂ 1,020 ಪ್ರಕರಣ ವರದಿ ಆಗಿದೆ.

ಹೊಸ ಕೊರೊನಾ ಕೇಸ್​ಗಳ ಪೈಕಿ 81 ಮಂದಿ ಆರೋಗ್ಯ ಕಾರ್ಯಕರ್ತರು, ಹೊರರಾಜ್ಯದಿಂದ ಆಗಮಿಸಿದ 111 ಮಂದಿ, ಕೊರೊನಾ ಸೋಂಕಿತರ ಸಂಪರ್ಕದಿಂದ 18,602 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 894 ಕೇಸ್​ಗಳ ಮೂಲ ತಿಳಿದುಬಂದಿಲ್ಲ.

ಕೇರಳದಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುವ ಶೇಕಡಾ 75 ರಷ್ಟು ಮಂದಿಗೆ ಒಂದು ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಹಾಗೂ ಶೇಕಡಾ 28 ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕೊರೊನಾ ಪ್ರಕರಣಗಳ ಪೈಕಿ ಕೇವಲ ಶೇಕಡಾ 12.82 ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಶೇಕಡಾ 1 ಕ್ಕಿಂತ ಕಡಿಮೆ ಮಂದಿ ಐಸಿಯುನಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಕೊರೊನಾಗೆ ತುತ್ತಾಗಿ ಇತರ ಆರೋಗ್ಯ ಸಮಸ್ಯೆಗಳು ಹೊಂದಿರುವವರು ಮನೆಯಲ್ಲಿ ಉಳಿಯುವುದನ್ನು ಕಡಿಮೆ ಮಾಡಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 973 ಮಂದಿಗೆ ಸೋಂಕು, 17 ಸಾವು

ಇದನ್ನೂ ಓದಿ: Coronavirus cases in India: ದೇಶದಲ್ಲಿ 38,948 ಹೊಸ ಕೊವಿಡ್ ಪ್ರಕರಣ ಪತ್ತೆ, 219 ಮಂದಿ ಸಾವು

(Kerala records 19688 new Covid19 cases 135 deaths on September 6)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada