ಕೇರಳ: ರೈಲಿನ ಮೇಲಿನ ಬರ್ತ್ ಸೀಟ್ ಬಿದ್ದು ಪ್ರಯಾಣಿಕ ಸಾವು; ಸರಪಳಿ ಸರಿಯಾಗಿ ಸಿಕ್ಕಿಸಿರಲಿಲ್ಲ ಎಂದ ರೈಲ್ವೇ

ಜೂನ್ 16 ರಂದು ತೆಲಂಗಾಣದ ವಾರಂಗಲ್ ಜಿಲ್ಲೆಯ ಮೂಲಕ ರೈಲು ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಪ್ರಯಾಣಿಕ ಕೇರಳದ ನಿವಾಸಿ ಅಲಿ ಖಾನ್ ಸಿಕೆ ಕುತ್ತಿಗೆಗೆ ಗಾಯವಾಗಿದ್ದು, ಆರಂಭದಲ್ಲಿ ಅವರನ್ನು ರಾಮಗುಂಡಂನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ರೈಲ್ವೆ ಹೇಳಿದೆ.

ಕೇರಳ: ರೈಲಿನ ಮೇಲಿನ ಬರ್ತ್ ಸೀಟ್ ಬಿದ್ದು ಪ್ರಯಾಣಿಕ ಸಾವು; ಸರಪಳಿ ಸರಿಯಾಗಿ ಸಿಕ್ಕಿಸಿರಲಿಲ್ಲ ಎಂದ ರೈಲ್ವೇ
ಪ್ರಾತಿನಿಧಿಕ ಚಿತ್ರ
Follow us
|

Updated on: Jun 26, 2024 | 6:46 PM

ತಿರುವನಂತಪುರಂ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಮೇಲಿನ ಬರ್ತ್ ಸೀಟು ಜಾರಿ ಬಿದ್ದು ಕೇರಳದ 60 ವರ್ಷದ ಪ್ರಯಾಣಿಕರೊಬ್ಬರು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಹ ಪ್ರಯಾಣಿಕರು ಸೀಟಿನ ಸರಪಳಿಯನ್ನು ಸರಿಯಾಗಿ ಸಿಕ್ಕಿಸದೇ ಇದ್ದ ಕಾರಣ ಮೇಲಿನ ಬರ್ತ್ ಪ್ರಯಾಣಿಕರ ಮೇಲೆ ಬಿದ್ದಿದೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಎರ್ನಾಕುಲಂ-ಹಜರತ್ ನಿಜಾಮುದ್ದೀನ್ ಮಿಲೇನಿಯಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12645 ರ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಕ ಅಲಿ ಖಾನ್ ಸಿಕೆ ಎಂಬವರು ತನ್ನ ಸ್ನೇಹಿತನೊಂದಿಗೆ ಆಗ್ರಾಕ್ಕೆ ಪ್ರಯಾಣಿಸುತ್ತಿದ್ದರು ಎಂದು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಬುಧವಾರ ತಿಳಿಸಿದ್ದಾರೆ.

ಜೂನ್ 16 ರಂದು ತೆಲಂಗಾಣದ ವಾರಂಗಲ್ ಜಿಲ್ಲೆಯ ಮೂಲಕ ರೈಲು ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಖಾನ್ ಕುತ್ತಿಗೆಗೆ ಗಾಯವಾಗಿದ್ದು, ಆರಂಭದಲ್ಲಿ ರಾಮಗುಂಡಂನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಕೇರಳದ ಕಾಂಗ್ರೆಸ್, ಈ ಘಟನೆಗೆ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ರೈಲ್ವೆಯ ಸ್ಥಿತಿಯೇ ಕಾರಣ ಎಂದು ದೂಷಿಸಿದೆ.

ಇದಕ್ಕೆ ರೈಲ್ವೇ ಸಚಿವಾಲಯದ ವಕ್ತಾರರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಪ್ರತಿಕ್ರಯಿಸಿದ್ದು, ಪ್ರಯಾಣಿಕರ ಮೇಲೆ ಸೀಟು ಬಿದ್ದಿದೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ ಎಂದಿದ್ದಾರೆ.

ರೈಲ್ವೇ ಸಚಿವಾಲಯದ ವಕ್ತಾರರ ಪೋಸ್ಟ್

ನಿಜಾಮುದ್ದೀನ್ ನಿಲ್ದಾಣದಲ್ಲಿ ಆಸನವನ್ನು ಪರಿಶೀಲಿಸಲಾಗಿದೆ. ಅದು ಹಾನಿಗೊಳಗಾದ ಸ್ಥಿತಿಯಲ್ಲಿಲ್ಲ. ಆದ್ದರಿಂದ “ಮೇಲಿನ ಬರ್ತ್‌ನ ಸರಪಳಿಯನ್ನು ಸರಿಯಾಗಿ ಸಿಕ್ಕಿಸದೇ ಇದ್ದ ಕಾರಣ ಮೇಲಿನ ಬರ್ತ್ ಸೀಟು ಬಿದ್ದಿದೆ” ಎಂದು ಪೋಸ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Zika Virus: ಪುಣೆಯಲ್ಲಿ ಝಿಕಾ ವೈರಸ್ ಪತ್ತೆ, ವೈದ್ಯ ಹಾಗೂ ಮಗಳಿಗೆ ತಗುಲಿದ ಸೋಂಕು

ರಾಮಗುಂಡಂ ನಿಲ್ದಾಣದಲ್ಲಿ ಸುಮಾರು 18:34 ಗಂಟೆಗೆ (15.6.2024) ಸಂದೇಶ ಬಂದ ನಂತರ ಮತ್ತೊಂದೆಡೆ ರೈಲ್ವೆ ಸಿಬ್ಬಂದಿ, ಕರ್ತವ್ಯ ನಿರತ ಸ್ಟೇಷನ್ ಮಾಸ್ಟರ್, ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ಸಹಾಯಕ್ಕಾಗಿ ವ್ಯವಸ್ಥೆ ಮಾಡಿದರು. ರೈಲನ್ನು ರಾಮಗುಂಡಂನಲ್ಲಿ ನಿಲುಗಡೆ ಮಾಡಿದರು. ಅಲ್ಲಿ ಗಾಯಗೊಂಡ ಪ್ರಯಾಣಿಕನ್ನು ಕೋಚ್‌ನಿಂದ ಆಂಬ್ಯುಲೆನ್ಸ್‌ಗೆ ಶಿಫ್ಟ್ ಮಾಡಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರೈಲ್ವೆ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!