ಕೇರಳದ ಆರ್ಥಿಕ ಪರಿಸ್ಥಿತಿ: ಕೇಂದ್ರಕ್ಕೆ ವರದಿ ಸಲ್ಲಿಸಲು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಚಿಂತನೆ
ಕೆಎಸ್‌ಆರ್‌ಟಿಸಿಯ ನಿವೃತ್ತ ನೌಕರರು ಸಲ್ಲಿಸಿದ ಮನವಿಯ ಮೇಲೆ ಕೇರಳ ಸರ್ಕಾರವು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್ ಅನ್ನು ಉಲ್ಲೇಖಿಸಿದ ರಾಜ್ಯಪಾಲ ಆರಿಫ್ ಖಾನ್, ರಾಜ್ಯ ಸರ್ಕಾರವು ತನ್ನ ಸಿಬ್ಬಂದಿಗೆ ಪಿಂಚಣಿ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನೀಡಿರುವ ಹಣಕಾಸು ಖಾತರಿಗಳನ್ನು ಪೂರೈಸುವ ಸ್ಥಿತಿಯಲ್ಲಿಲ್ಲ ಎಂದು ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿ ಡಿಸೆಂಬರ್ 12: ರಾಜ್ಯವು ಭಾರೀ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬ ವರದಿಗಳ ನಡುವೆ, ಕೇರಳದ (Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರು ಪರಿಸ್ಥಿತಿಯನ್ನು ಕೇಂದ್ರಕ್ಕೆ ತಿಳಿಸಲು ಕರ್ತವ್ಯ ಬದ್ಧರಾಗಿದ್ದಾರೆ ಎಂದು ಮಂಗಳವಾರ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖಾನ್, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ವರದಿಯನ್ನು ಕೇಳಿದ್ದಾರೆ. ರಾಜ್ಯದಿಂದ ಪ್ರತಿಕ್ರಿಯೆ ಬರಲು 10 ದಿನಗಳ ಕಾಲ ಕಾಯುತ್ತೇನೆ ಎಂದಿದ್ದಾರೆ ಅವರು.
ಸಂವಿಧಾನದ ಪರಿಚ್ಛೇದ 360(1)ರ ಪ್ರಕಾರ ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹೇರುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಆರ್.ಎಸ್.ಶಶಿಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ರಾಜ್ಯಪಾಲರು ವರದಿ ಕೇಳಿದ್ದರು.
ಕೆಎಸ್‌ಆರ್‌ಟಿಸಿಯ ನಿವೃತ್ತ ನೌಕರರು ಸಲ್ಲಿಸಿದ ಮನವಿಯ ಮೇಲೆ ಕೇರಳ ಸರ್ಕಾರವು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್ ಅನ್ನು ಉಲ್ಲೇಖಿಸಿದ ರಾಜ್ಯಪಾಲರು, ರಾಜ್ಯ ಸರ್ಕಾರವು ತನ್ನ ಸಿಬ್ಬಂದಿಗೆ ಪಿಂಚಣಿ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನೀಡಿರುವ ಹಣಕಾಸು ಖಾತರಿಗಳನ್ನು ಪೂರೈಸುವ ಸ್ಥಿತಿಯಲ್ಲಿಲ್ಲ ಎಂದು ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಗವರ್ನರ್ ಖಾನ್ ಹೇಳಿದರು.
ರಾಜ್ಯವು ಬಿಕ್ಕಟ್ಟಿನಲ್ಲಿದ್ದರೆ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದು ನನ್ನ ಕರ್ತವ್ಯ. ಆಡಳಿತಾರೂಢ ಎಲ್ಡಿಎಫ್ ಸರ್ಕಾರದಿಂದ ಉತ್ತರವನ್ನು ಪಡೆಯಲು 10 ದಿನಗಳವರೆಗೆ ಕಾಯುವುದಾಗಿ ರಾಜ್ಯಪಾಲರು ಹೇಳಿದ್ದಾರೆ.
ಇದನ್ನೂ ಓದಿ:ಕೇರಳ ರಾಜ್ಯಪಾಲರ ಕಾರಿನ ಮೇಲೆ ದಾಳಿ, ಕಪ್ಪು ಬಾವುಟ ಪ್ರದರ್ಶನ: 7 ಎಸ್ಎಫ್ಐ ಕಾರ್ಯಕರ್ತರ ಬಂಧನ
ಎಸ್ಎಫ್ಐ ವಿರುದ್ಧ ಸೆಕ್ಷನ್ 124 ರ ಅಡಿಯಲ್ಲಿ ಆರೋಪ
ರಾಜ್ಯಪಾಲರು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಮೇಲ್ ಕಳುಹಿಸಿದ ಕೆಲವೇ ಗಂಟೆಗಳ ನಂತರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ರ ಅಡಿಯಲ್ಲಿ (ಅಧ್ಯಕ್ಷರು, ರಾಜ್ಯಪಾಲರು, ಇತ್ಯಾದಿಗಳ ಮೇಲೆ ಹಲ್ಲೆ ನಡೆಸುವುದು, ಯಾವುದೇ ಕಾನೂನುಬದ್ಧ ಅಧಿಕಾರವನ್ನು ಬಲವಂತಪಡಿಸುವ ಅಥವಾ ನಿರ್ಬಂಧಿಸುವ ಉದ್ದೇಶದಿಂದ) SFI ವಿರುದ್ಧ ಆರೋಪ ಹೊರಿಸಲಾಯಿತು. ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಸೋಮವಾರ ರಾತ್ರಿ ರಾಜ್ಯಪಾಲರ ಅಧಿಕೃತ ವಾಹನಕ್ಕೆ ಡಿಕ್ಕಿ ಹೊಡೆದು ದಾರಿಗೆ ಅಡ್ಡಿಪಡಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Tue, 12 December 23