ಉಗ್ರರಿಂದ 9 ಗುಂಡೇಟು ತಿಂದು ಸಾವು ಗೆದ್ದಿದ್ದ ಕೀರ್ತಿ ಚಕ್ರ ಯೋಧ 46 ದಿನ ಮತ್ತೊಬ್ಬ ‘ಭಯೋತ್ಪಾದಕ ಕೊರೊನಾ’ ವಿರುದ್ಧವೂ ಗೆದ್ದರು!
Kirti Chakra Chetan Kumar Cheetah: 46 ದಿನಗಳ ಕಾಲ ನಿರಂತರ ಚಿಕಿತ್ಸೆಯ ಬಳಿಕ ಈಗ ಚೇತನ್ ಕುಮಾರ್ ಚೀತಾ ಏಮ್ಸ್ ಆಸ್ಪತ್ರೆಯಿಂದ ಡಿಸಚಾರ್ಜ್ ಆಗಿದ್ದಾರೆ. ಕೊರೊನಾ ವೈರಸ್ ಅನ್ನು ಚೇತನ್ ಮಣಿಸಿದ್ದಾರೆ. ಜೀವನದಲ್ಲಿ ಎರಡೆರೆಡು ಬಾರಿ ಸಾವುನ್ನು ಗೆದ್ದು ಬಂದಿದ್ದಾರೆ. ಕೀರ್ತಿ ಚಕ್ರ ಶ್ರೀ ಚೇತನ್ ಕುಮಾರ್ ಚೀತಾ ಅವರಿಗೊಂದು ಸೆಲ್ಯೂಟ್ ಮಾಡೋಣ.
ಆತ ಭಾರತಾಂಬೆಯ ಹೆಮ್ಮೆಯ ಪುತ್ರ. ದೇಶದ ಗಡಿ ರಕ್ಷಣೆಗಾಗಿ ಪ್ರಾಣ ಕೊಡಲು ಸದಾಸಿದ್ಧ ಧೀರ ಯೋಧ. ಜೀವನದಲ್ಲಿ ಎರಡೆರೆಡು ಬಾರಿ ಸಾವಿನ ವಿರುದ್ಧ ಸೆಣಸಾಡಿ ಗೆದ್ದು ಬಂದಿರುವ ವೀರ. ಉಗ್ರಗಾಮಿಗಳಿಂದ 9 ಗುಂಡೇಟು ತಿಂದು ನಾಲ್ಕು ವರ್ಷದ ಹಿಂದೆ ಸಾವು-ಬದುಕಿನ ನಡುವೆ ಹೋರಾಡಿ ಸಾವು ಗೆದ್ದು ಬಂದಿದ್ದ ವೀರ ಯೋಧ. . ಈ ವರ್ಷ ಕೊರೊನಾ ವೈರಸ್ ವಿರುದ್ಧ ನಿರಂತರ 46 ದಿನ ಹೋರಾಡಿ ಮತ್ತೆ ಸಾವುನ್ನು ಗೆದ್ದು ಬಂದಿದ್ದಾರೆ. ಉಗ್ರಗಾಮಿಗಳು ಹಾಗೂ ಕೊರೊನಾ ವೈರಸ್ ನಂಥ ಶತ್ರುಗಳ ವಿರುದ್ಧ ಕೇವಲ ಇಚ್ಚಾಶಕ್ತಿಯಿಂದ ಹೋರಾಡಿ ಗೆದ್ದು ಬಂದಿರುವ ಅಪರೂಪದ ವೀರ ಯೋಧನ ಸಾಹಸಮಯ ನಿಜ ಕಥೆಯನ್ನ ಈಗ ನಿಮ್ಮ ಮುಂದೆ ಇಡ್ತೀವಿ.
ಜೀವನದಲ್ಲಿ ಎರಡೆರೆಡು ಬಾರಿ ಸಾವಿನ ವಿರುದ್ಧ ಸೆಣಸಾಡಿ ಗೆದ್ದು ಬಂದಿರುವ ವೀರ: ಶ್ರೀಯುತ ಚೇತನ್ ಕುಮಾರ್ ಚೀತಾ ಈ ಹೆಸರು ಕೇಳಿದರೇ, ಪ್ರತಿಯೊಬ್ಬ ದೇಶಪ್ರೇಮಿಯ ಮೈಮನ ರೋಮಾಂಚನವಾಗುತ್ತೆ. ಚೇತನ್ ಕುಮಾರ್ ಜೀವನದ ಕಥೆ ಕೇಳಿದರೇ, ನೀವು ನಿಬ್ಬೆರಾಗಾಗುತ್ತೀರಿ. ಪ್ರತಿಯೊಬ್ಬರಲ್ಲೂ ದೇಶಪ್ರೇಮ, ಸಾಹಸ ಮನೋಭಾವ ಉಕ್ಕಿ ಬರುತ್ತೆ. ದೇಶವನ್ನು ಶತ್ರುಗಳಿಂದ ರಕ್ಷಿಸಲು ತನ್ನ ಪ್ರಾಣವನ್ನು ಲೆಕ್ಕಿಸದೇ, ವೀರಾವೇಶದಿಂದ ಹೋರಾಡಿದ ವೀರಯೋಧ ಶ್ರೀ ಚೇತನ್ ಕುಮಾರ್ ಚೀತಾ (Shri Chetan Kumar Cheetah). ಜೀವನದಲ್ಲಿ ಎರಡೆರೆಡು ಬಾರಿ ಸಾವಿನ ವಿರುದ್ಧ ಹೋರಾಡಿ ಗೆದ್ದು ಬಂದ ಧೀರ ಚೇತನ್ ಕುಮಾರ್ ಚೀತಾ.
ಭಾರತದ ಸಿಆರ್‌ಪಿಎಫ್ ನಲ್ಲಿ ಕಮ್ಯಾಂಡೆಂಟ್ ಆಗಿರುವ ಚೇತನ್ ಕುಮಾರ್ ಚೀತಾ, ನಾಲ್ಕು ವರ್ಷಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ (Commanding Officer of CRPF 45th battalion in Jammu and Kashmir) ಉಗ್ರಗಾಮಿಗಳ ವಿರುದ್ಧ ಮುನುಗ್ಗಿ ಕೆಚ್ಚೆದೆಯಿಂದ ಹೋರಾಡಿದವರು. ಸಿಆರ್‌ಪಿಎಫ್- ಉಗ್ರಗಾಮಿಗಳ ನಡುವೆ 2017ರ ಫೆಬ್ರವರಿ 14ರಂದು ರಂದು ಜಮ್ಮು ಕಾಶ್ಮೀರದ ಬಂಡಿಪೋರದ ಹಾಜಿನಾ ಪ್ರದೇಶದಲ್ಲಿ ಭಾರಿ ಎನ್ಕೌಂಟರ್ ನಡೆದಿತ್ತು. ಸಿಆರ್‌ಪಿಎಫ್ ನ 45ನೇ ಬೆಟಾಲಿಯನ್ ಕಮ್ಯಾಂಡರ್ ಆಗಿದ್ದ ಚೇತನ್ ಕುಮಾರ್ ಚೀತಾ, ನೇತೃತ್ವದಲ್ಲಿ ಸಿಆರ್‌ಪಿಎಫ್ ಯೋಧರು ಉಗ್ರರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಆ ವೇಳೆ ಉಗ್ರರು ಸಿಆರ್‌ಪಿಎಫ್ ಬೆಟಾಲಿಯನ್ ಮೇಲೆ ದಾಳಿ ನಡೆಸಿದ್ದರು.
ಆಗ ಚೇತನ್ ಕುಮಾರ್ ಚೀತಾ ಯೋಧರನ್ನು ಮುಂದೆ ಕಳಿಸಿ, ತಾವು ಹಿಂದೆ ನಿಲ್ಲಲಿಲ್ಲ. ತಾವೇ ಮುನುಗ್ಗಿದ್ದರು. ಉಗ್ರಗಾಮಿಗಳ ವಿರುದ್ಧ ದಾಳಿ ನಡೆಸಿದ್ದರು. ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಚೇತನ್ ಕುಮಾರ್ ನೇತೃತ್ವದ ಸಿಆರ್‌ಪಿಎಫ್ ಬೆಟಾಲಿಯನ್ ಯಶಸ್ವಿಯಾಗಿತ್ತು. ಆದರೇ, ಎನ್ ಕೌಂಟರ್ ನಲ್ಲಿ ಚೇತನ್ ಕುಮಾರ್ ಗೆ 9 ಗುಂಡೇಟು ಬಿದ್ದಿತ್ತು. ತಲೆ, ಹೊಟ್ಟೆ, ಎರಡು ಕೈ, ಕಣ್ಣಿನ ಭಾಗಕ್ಕೆ ಗುಂಡೇಟು ಬಿದ್ದಿದ್ದವು. ಚೇತನ್ ಕುಮಾರ್ ಚೀತಾ ಬದುಕುಳಿಯಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಚೇತನ್ ಕುಮಾರ್ ಅವರದ್ದು ಗಟ್ಟಿ ಹೃದಯ. ಪ್ರಬಲ ಇಚ್ಛಾಶಕ್ತಿ ಇತ್ತು. ಚೇತನ್ ಕುಮಾರ್ ಚೀತಾ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಚೇತನ್ ಕೋಮಾಗೆ ಜಾರಿದರು. ಒಂದು ತಿಂಗಳ ಕಾಲ ದೆಹಲಿಯ ಏಮ್ಸ್ ನಲ್ಲಿ ಚೇತನ್ ಸಾವು-ಬದುಕಿನ ನಡುವೆ ಹೋರಾಡಿದ್ದರು. ಏಮ್ಸ್ ವೈದ್ಯರು ದೇಶದ ವೀರಯೋಧನನ್ನು ಉಳಿಸಲು ಅತ್ಯುತ್ತಮ ಚಿಕಿತ್ಸೆ ನೀಡಿದ್ದರು. ವೈದ್ಯರು ಸಾಕಷ್ಟು ಸರ್ಜರಿಗಳನ್ನು ನಡೆಸಿ ದೇಹಕ್ಕೆ ಹೊಕ್ಕಿದ್ದ ಗುಂಡುಗಳನ್ನು ಹೊರತೆಗೆದರು. ಕೋಮಾಗೆ ಜಾರಿದ್ದವರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ವೈದ್ಯಕೀಯ ಪವಾಡ ನಡೆದರೇ ಮಾತ್ರವೇ ಬದುಕುಳಿಯಬಹುದು ಅಂತ ವೈದ್ಯರು ಹೇಳಿದ್ದರು. ಕೊನೆಗೂ ಆ ವೈದ್ಯಕೀಯ ಪವಾಡವೇ ನಡೆದು ಹೋಯಿತು. ಚೇತನ್ ಕುಮಾರ್ ಸಾವುನ್ನು ಗೆದ್ದರು.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9)
ಆದರೆ, ಚಿಕಿತ್ಸೆಯ ವೇಳೆ ಕಣ್ಣಿಗೆ ಬಾರಿ ಏಟು ಬಿದ್ದಿದ್ದರಿಂದ ಬಲಭಾಗದ ಕಣ್ಣು ಕಳೆದುಕೊಂಡರು. 2017ರ ಏಪ್ರಿಲ್ ನಲ್ಲಿ ಆಸ್ಪತ್ರೆಯಿಂದ ಡಿಸಚಾರ್ಚ್ ಆಗಿದ್ದರು. ಆದರೇ, ಸಂಪೂರ್ಣ ಗುಣಮುಖವಾಗಲು ಒಂದೆರೆಡು ವರ್ಷ ಸಮಯ ಬೇಕು ಎಂದು ವೈದ್ಯರು ಹಾಗೂ ಸಿಆಆರ್‌ಪಿಎಫ್ ಅಧಿಕಾರಿಗಳು ಹೇಳಿದ್ದರು. ಆದರೆ ಆಸ್ಪತ್ರೆಯಿಂದ ಮನೆಗೆ ಬಂದ ಚೇತನ್, ನಾನು ಈಗಲೂ ಫಿಟ್ ಇದ್ದೇನೆ. ಈಗಲೂ ಫೀಲ್ಡ್ ಗೆ ಹೋಗಿ ಉಗ್ರರ ವಿರುದ್ಧ ಅಪರೇಷನ್ ನಡೆಸಲು ಸಿದ್ದನಿದ್ದೇನೆ ಎಂದಿದ್ದರು. ನನ್ನ ಸೇನೆ, ದೇಶ ನಾನು ಫೀಲ್ಡ್ ಗೆ ಹೋಗಿ ಅಪರೇಷನ್ ಮಾಡಲು ಬಯಸಿದರೇ, ನಾನು ರೆಡಿ ಇದ್ದೇನೆ. ಯಾವುದೇ ಹಿಂಜರಿಕೆ ಇಲ್ಲ ಎಂದು ಚೇತನ್ ಹೇಳಿದ್ದರು.
ಇದು ಚೇತನ್ ಅವರ ಹೋರಾಟದ ಮನೋಭಾವ. ಉಗ್ರಗಾಮಿಗಳ ವಿರುದ್ಧದ ಕಾದಾಟದಲ್ಲಿ ಒಂದು ಕಣ್ಣು ಕಳೆದುಕೊಂಡರೂ, ಛಲ ಬಿಡದೇ, ದೇಶಸೇವೆಗೆ ಜೀವನವನ್ನೇ ಅರ್ಪಿಸಿಕೊಂಡವರು. 2018ರಲ್ಲಿ ಚೇತನ್ ಕುಮಾರ್ ಚೀತಾ ಮತ್ತೆ ಸಿಆರ್‌ಪಿಎಫ್ ಸೇವೆಗೆ ಸೇರ್ಪಡೆಯಾಗಿದ್ದರು. ಚೇತನ್ ಅವರ ಶೌರ್ಯ, ಸಾಹಸವನ್ನು ಗೌರವಿಸಿ ಭಾರತ ಸರ್ಕಾರ ಶಾಂತಿಕಾಲದಲ್ಲಿ ನೀಡುವ ಎರಡನೇ ಅತಿ ದೊಡ್ಡ ಸೇನಾ ಪುರಸ್ಕಾರವಾದ ಕೀರ್ತಿ ಚಕ್ರವನ್ನು (Kirti Chakra) ನೀಡಿ ಚೇತನ್ ಕುಮಾರ್ ಚೀತಾ ಅವರನ್ನು ಗೌರವಿಸಿದೆ.
ಈಗ ಮತ್ತೊಬ್ಬ ‘ಭಯೋತ್ಪಾದಕ ಕೊರೊನಾ’ ವಿರುದ್ಧವೂ ವಿರುದ್ಧ 46 ದಿನ ಐಸಿಯುನಲ್ಲಿ ಹೋರಾಟ:
ಇಂಥ ಚೇತನ್ ಕುಮಾರ್ ಚೀತಾ ಅವರಿಗೆ ಈ ವರ್ಷದ ಮೇ ತಿಂಗಳಿನಲ್ಲಿ ಕೊರೊನಾ ವೈರಸ್ ಸೋಂಕು ತಗುಲಿತ್ತು. ಹರಿಯಾಣದ ಜಾಜರ್ ಜಿಲ್ಲೆಯಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬಹಳಷ್ಟು ಸಂದರ್ಭದಲ್ಲಿ ಚೇತನ್ ಕುಮಾರ್ ಬದುಕುಳಿಯುತ್ತಾರೆ ಅಂತ ಹೇಳುವುದೇ ಕಷ್ಟ ಆಗಿತ್ತು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ. ಏಕೆಂದರೇ, ಚೇತನ್ ಗಂಭೀರ ಅನಾರೋಗ್ಯದ ಸ್ಥಿತಿಯಲ್ಲಿದ್ದರು.
“ಎರಡು ಬಾರಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಬೇಕಾಯಿತು. ಮೇ 30 ಹಾಗೂ ಜೂನ್ 10 ರಂದು ವೆಂಟಿಲೇಟರ್ ನಲ್ಲಿ ಚೇತನ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ವೆಂಟಿಲೇಟರ್ ಗೆ ಹೋದ ರೋಗಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ . ಆದರೆ ಚೇತನ್ ಅವರ ಬದುಕುಳಿಯಬೇಕೆಂಬ ಇಚ್ಚಾಶಕ್ತಿ, ವೈದ್ಯರು, ನರ್ಸ್ ಸೇರಿದಂತೆ ಎಲ್ಲರ ನಿರಂತರ ಪರಿಶ್ರಮದಿಂದ ಚೇತನ್ ಸಾವುನ್ನು ಗೆದ್ದು ಬಂದಿದ್ದಾರೆ” ಎಂದು ಜಾಜರ್ ಏಮ್ಸ್ ಆಸ್ಪತ್ರೆಯ ಕೊರೊನಾ ರೋಗಿಗಳ ಸೇವಾ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಸುಷ್ಮಾ ಭಟ್ನಾಗರ್ ಹೇಳಿದ್ದಾರೆ.
ಮನೆಯಲ್ಲಿ ಫಿಸಿಯೋಥೆರಪಿ ಚಿಕಿತ್ಸೆ ಮುಂದುವರಿಸಲು ವೈದ್ಯರು ಹೇಳಿದ್ದಾರೆ. 46 ದಿನಗಳ ಕಾಲ ನಿರಂತರ ಚಿಕಿತ್ಸೆಯ ಬಳಿಕ 46 ವರ್ಷ ವಯಸ್ಸಿನ ಚೇತನ್ ಕುಮಾರ್ ಚೀತಾ ಏಮ್ಸ್ ಆಸ್ಪತ್ರೆಯಿಂದ ಡಿಸಚಾರ್ಜ್ ಆಗಿದ್ದಾರೆ. ಕೊರೊನಾ ವೈರಸ್ ಅನ್ನು ಚೇತನ್ ಮಣಿಸಿದ್ದಾರೆ. ಜೀವನದಲ್ಲಿ ಎರಡೆರೆಡು ಬಾರಿ ಸಾವುನ್ನು ಗೆದ್ದು ಬಂದಿದ್ದಾರೆ. ಕೀರ್ತಿ ಚಕ್ರ ಶ್ರೀ ಚೇತನ್ ಕುಮಾರ್ ಚೀತಾ ಅವರಿಗೊಂದು ಸೆಲ್ಯೂಟ್ ಮಾಡೋಣ.
#PresidentKovind presents Kirti Chakra to Shri Chetan Kumar Cheeta, Commandant, 45 Battalion, CRPF. He displayed exemplary bravery, exceptional leadership qualities and indomitable fighting spirit risking his own life in neutralising the hardcore terrorists in Bandipora, J&K pic.twitter.com/UHAE2AGsUM
— President of India (@rashtrapatibhvn) March 27, 2018
(Kirti Chakra Commandant Shri Chetan Kumar Cheetah defeat a certain death with his bravery against terrorists and coronavirus)