Kohinoor Diamond: ಇಂಗ್ಲೆಂಡ್​ನಿಂದ ಕೊಹಿನೂರ್ ವಜ್ರವನ್ನು ವಾಪಾಸ್ ತರುವುದು ಯಾವಾಗ?; ಭಾರತದ ಉತ್ತರ ಹೀಗಿದೆ

ಬ್ರಿಟನ್‌ನ ದೀರ್ಘಾವಧಿಯ ​​ರಾಣಿ ಎಲಿಜಬೆತ್ ಅವರ ಮರಣದ ನಂತರ ವಿಶ್ವದ ಅತಿದೊಡ್ಡ ವಜ್ರಗಳಲ್ಲಿ ಒಂದಾದ ಕೊಹಿನೂರ್ ವಜ್ರವನ್ನು ಮರಳಿ ತರುವ ಬಗ್ಗೆ ಮತ್ತೆ ಒತ್ತಾಯ ಹೆಚ್ಚಾಗಿದೆ.

Kohinoor Diamond: ಇಂಗ್ಲೆಂಡ್​ನಿಂದ ಕೊಹಿನೂರ್ ವಜ್ರವನ್ನು ವಾಪಾಸ್ ತರುವುದು ಯಾವಾಗ?; ಭಾರತದ ಉತ್ತರ ಹೀಗಿದೆ
Follow us
ಸುಷ್ಮಾ ಚಕ್ರೆ
|

Updated on:Oct 15, 2022 | 3:06 PM

ನವದೆಹಲಿ: ಭಾರತದಿಂದ ಬ್ರಿಟಿಷರು ತೆಗೆದುಕೊಂಡ ಹೋದ ಅತ್ಯಮೂಲ್ಯ ವಸ್ತುಗಳಲ್ಲಿ ಕೊಹಿನೂರ್ ವಜ್ರ (Kohinoor Diamond) ಕೂಡ ಒಂದು. ಇತ್ತೀಚೆಗೆ ಕೊನೆಯುಸಿರೆಳೆದ ರಾಣಿ ಎಲಿಜಬೆತ್ ಕಿರೀಟದಲ್ಲಿ ಹಲವು ದಶಕಗಳಿಂದ ಸ್ಥಾನ ಪಡೆದಿದ್ದ ಕೊಹಿನೂರ್ ವಜ್ರವನ್ನು ವಾಪಾಸ್ ಭಾರತಕ್ಕೆ ತರಬೇಕೆಂಬ ಒತ್ತಾಯ ಹೆಚ್ಚುತ್ತಲೇ ಇದೆ. ಈ ಬಗ್ಗೆ ಮಾತನಾಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಕೊಹಿನೂರ್ ವಜ್ರವನ್ನು ಮರಳಿ ತರಲು ಬೇಡಿಕೆ ಹೆಚ್ಚುತ್ತಿದೆ. ಈ ಬಗ್ಗೆ ತೃಪ್ತಿಕರ ನಿರ್ಣಯವನ್ನು ಸರ್ಕಾರ ಇನ್ನೂ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಬ್ರಿಟನ್‌ನ ದೀರ್ಘಾವಧಿಯ ​​ರಾಣಿ ಎಲಿಜಬೆತ್ ಅವರ ಮರಣದ ನಂತರ ವಿಶ್ವದ ಅತಿದೊಡ್ಡ ವಜ್ರಗಳಲ್ಲಿ ಒಂದಾದ ಕೊಹಿನೂರ್ ವಜ್ರವನ್ನು ಮರಳಿ ತರುವ ಬಗ್ಗೆ ಮತ್ತೆ ಒತ್ತಾಯ ಹೆಚ್ಚಾಗಿದೆ. ಕೆಲವು ವರ್ಷಗಳ ಹಿಂದೆ ಸಂಸತ್ತಿನಲ್ಲಿ ಇದಕ್ಕೆ ಸರ್ಕಾರ ನೀಡಿದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿರುವ ಬಾಗ್ಚಿ, ಭಾರತ ಸರ್ಕಾರವು ಕೆಲವು ವರ್ಷಗಳ ಹಿಂದೆ ಸಂಸತ್ತಿನಲ್ಲಿ ಇದಕ್ಕೆ ಪ್ರತಿಕ್ರಿಯಿಸಿದೆ. ನಾವು ಇಂಗ್ಲೆಂಡ್ ಸರ್ಕಾರದೊಂದಿಗೆ ಕಾಲಕಾಲಕ್ಕೆ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ. ಯಾವುದೇ ಸಮಸ್ಯೆ ಇಲ್ಲದೆ ಆ ವಜ್ರವನ್ನು ಭಾರತಕ್ಕೆ ತರುವ ಮಾರ್ಗಗಳು ಮತ್ತು ವಿಧಾನಗಳ ಹುಡುಕಾಟವನ್ನು ನಾವು ಮುಂದುವರಿಸುತ್ತೇವೆ. ಆದಷ್ಟು ಬೇಗ ಈ ವಿಷಯ ಇತ್ಯರ್ಥವಾಗುವ ಭರವಸೆಯಿದೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದಿಂದ ಕದ್ದ ಉಡುಗೊರೆ-ಉಯಿಲುಗಳು ವಾಪಸಾಗುತ್ತಿವೆ, ಕೊಹಿನೂರ್ ವಜ್ರ ವಾಪಸ್​ ಆಗಿಲ್ಲ! ಏನಿದರ ಮರ್ಮ?

ವಿಶ್ವದ ಅತಿದೊಡ್ಡ ವಜ್ರಗಳಲ್ಲಿ ಒಂದಾದ 108 ಕ್ಯಾರೆಟ್ ಕೊಹಿನೂರ್ ರತ್ನವನ್ನು 1849ರಲ್ಲಿ ರಾಣಿ ವಿಕ್ಟೋರಿಯಾಗೆ ನೀಡಲಾಗಿತ್ತು. ಪ್ರಸ್ತುತ, ಆ ಕೊಹಿನೂರ್ ವಜ್ರವನ್ನು ಮಾಲ್ಟೀಸ್ ಕ್ರಾಸ್‌ನಲ್ಲಿ ಬ್ರಿಟನ್‌ನ ದಿವಂಗತ ರಾಣಿ ಎಲಿಜಬೆತ್​ಗಾಗಿ ಮಾಡಿದ ಕಿರೀಟದಲ್ಲಿ ಇರಿಸಲಾಗಿದೆ. 108 ಕ್ಯಾರೆಟ್ ಕೊಹಿನೂರ್ ರತ್ನವನ್ನು ರಾಣಿ ವಿಕ್ಟೋರಿಯಾಗೆ 1849ರಲ್ಲಿ ಮಹಾರಾಜ ದುಲೀಪ್ ಸಿಂಗ್ ನೀಡಿದ್ದರು. ಇತ್ತೀಚೆಗೆ, ಟ್ವಿಟರ್‌ನಲ್ಲಿ ಭಾರತಕ್ಕೆ ಆ ಕೊಹಿನೂರ್ ವಜ್ರವನ್ನು ವಾಪಾಸ್ ತರಬೇಕೆಂಬ ಬೇಡಿಕೆಗಳು ಟ್ರೆಂಡ್ ಆಗಿವೆ.

ಮುಂದಿನ ವರ್ಷ ಮೇ ತಿಂಗಳಲ್ಲಿ ಚಾರ್ಲ್ಸ್‌ನ ಪಟ್ಟಾಭಿಷೇಕ ನಡೆಯುವಾಗ ಬ್ರಿಟನ್‌ನ ಹೊಸ ರಾಜ III ನೇ ಚಾರ್ಲ್ಸ್ ಅವರ ಪತ್ನಿ ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಅವರು ಕೊಹಿನೂರ್‌ ವಜ್ರದೊಂದಿಗೆ ಕಿರೀಟವನ್ನು ಧರಿಸುತ್ತಾರೆ ಎಂಬ ಊಹಾಪೋಹಗಳು ಮೊದಲು ಇದ್ದವು. ಆದರೆ, ಆ ವಜ್ರದ ಸುತ್ತಲಿನ ರಾಜಕೀಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಆಕೆ ಇನ್ನು ಮುಂದೆ ಆ ವಜ್ರವಿರುವ ಕಿರೀಟವನ್ನು ಧರಿಸುವುದಿಲ್ಲ ಎಂದು ಇಂಗ್ಲೆಂಡ್​ನ ಮಾಧ್ಯಮಗಳು ವರದಿ ಮಾಡಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Sat, 15 October 22