ಕುಲು: ಹಿಮಾಚಲ ಪ್ರದೇಶದ ಕುಲು (Kullu) ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಟೆಂಪೋ ಟ್ರಾವೆಲರ್ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ 7 ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ 10 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಮಾಚಲ ಪ್ರದೇಶದ (Himachal Pradesh) ಬಂಜಾರ್ ಉಪವಿಭಾಗದ ಘಿಯಾಘಿ ಬಳಿ ಈ ಅಪಘಾತ (Accident) ಸಂಭವಿಸಿದೆ.
ಕುಲುವಿನ ಬಂಜಾರ್ ಕಣಿವೆಯ ಘಿಯಾಗಿ ಪ್ರದೇಶದಲ್ಲಿ ಭಾನುವಾರ ರಾತ್ರಿ 8.30ಕ್ಕೆ ಪ್ರವಾಸಿ ವಾಹನವೊಂದು ಬಂಡೆಯ ಮೇಲಿಂದ ಪ್ರಪಾತಕ್ಕೆ ಉರುಳಿದ ಪರಿಣಾಮ 7 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ. ಐವರು ಗಾಯಾಳುಗಳನ್ನು ಕುಲು ವಲಯದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು 5 ಮಂದಿಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಲು ಎಸ್‌ಪಿ ಗುರುದೇವ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: Accident: ಛತ್ತೀಸ್ಗಢದ ಜಶ್ಪುರದಲ್ಲಿ ಬಸ್ ಪಲ್ಟಿ ಹೊಡೆದು ಮೂವರು ಸಾವು, 6 ಜನರಿಗೆ ಗಾಯ
ಬಂಜಾರ್‌ನ ಬಿಜೆಪಿ ಶಾಸಕ ಸುರೇಂದ್ರ ಶೌರಿ ಕೂಡ ಟ್ವೀಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಗಾಯಾಳುಗಳನ್ನು ಮೊದಲು ಬಂಜಾರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಕುಲು ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತ ಪ್ರವಾಸಿಗರು ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳವರಾಗಿದ್ದು, ಅವರ ಕುರಿತ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
HP | 7 people killed & 10 others injured after a tourist vehicle rolled down from a cliff at 8:30pm yesterday on NH-305 in Ghiyagi area of Banjar Valley in Kullu. 5 injured are shifted to Zonal hospital, Kullu & 5 are under treatment at Banjar in a hospital: Gurdev Singh SP Kullu pic.twitter.com/FX7GPxQq7T
— ANI (@ANI) September 26, 2022
ರಾತ್ರಿ ವೇಳೆಯಲ್ಲಿ ಪ್ರಪಾತಕ್ಕೆ ಇಳಿದು ತಮ್ಮ ಜೀವವನ್ನು ಪಣಕ್ಕಿಟ್ಟು ರಕ್ಷಣಾ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಮತ್ತು ಸ್ಥಳೀಯರಿಗೆ ಶಾಸಕ ಸುರೇಂದ್ರ ಶೌರಿ ಧನ್ಯವಾದ ತಿಳಿಸಿದ್ದಾರೆ.