AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lal Salaam: ಲಾಲ್ ಸಲಾಂ ಕಾದಂಬರಿ ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ

Smriti Irani's Novel: ಯುವ ಅಧಿಕಾರಿ ವಿಕ್ರಮ್ ಪ್ರತಾಪ್ ಸಿಂಗ್ ರಾಜಕಾರಣ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯವಸ್ಥೆಯಲ್ಲಿ ಸಿಲುಕಿ ಯಾವ ರೀತಿ ಸವಾಲುಗಳನ್ನು ಎದುರಿಸುತ್ತಾನೆ ಎಂಬುದೇ ಲಾಲ್ ಸಲಾಮ್ ಕಾದಂಬರಿಯ ಕಥೆಯಾಗಿದೆ.

Lal Salaam: ಲಾಲ್ ಸಲಾಂ ಕಾದಂಬರಿ ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಲಾಲ್ ಸಲಾಂ ಕಾದಂಬರಿಯ ಮುಖಪುಟ
TV9 Web
| Updated By: ಸುಷ್ಮಾ ಚಕ್ರೆ|

Updated on: Nov 18, 2021 | 4:26 PM

Share

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಜುಬಿನ್ ಇರಾನಿ (Smriti Irani) ತಮ್ಮ ಚೊಚ್ಚಲ ಕಾದಂಬರಿ ‘ಲಾಲ್ ಸಲಾಮ್’ (Lal Salaam)  ಮೂಲಕ ಲೇಖಕಿಯಾಗಿದ್ದಾರೆ. ವೆಸ್ಟ್‌ಲ್ಯಾಂಡ್ ಪ್ರಕಾಶನ ಸಂಸ್ಥೆ ಈ ಕಾದಂಬರಿಯನ್ನು ಪ್ರಕಟಿಸಲಿದೆ. 2010ರ ಏಪ್ರಿಲ್​ ತಿಂಗಳಲ್ಲಿ ದಾಂತೇವಾಡದಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿಗಳ ದುರಂತ ಹತ್ಯೆಯಿಂದ ಸ್ಫೂರ್ತಿ ಪಡೆದು ಈ ಕಾದಂಬರಿಯನ್ನು (Novel) ರಚಿಸಲಾಗಿದೆ. ದೇಶಕ್ಕೆ ಜೀವಮಾನದ ಸೇವೆಯನ್ನು ನೀಡಿದ ಅಸಾಧಾರಣ ಪುರುಷರು ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸಲು ಈ ಕಾದಂಬರಿ ಬರೆಯಲಾಗಿದೆ. ನವೆಂಬರ್ 29ರಂದು ಈ ಕಾದಂಬರಿ ಮಾರುಕಟ್ಟೆಗೆ ಬರಲಿದೆ.

ಕೆಲವು ವರ್ಷಗಳಿಂದ ಈ ಕತೆಯು ನನ್ನ ಮನಸ್ಸಿನಲ್ಲೇ ಹುದುಗಿತ್ತು. ಓದುಗರು ನನ್ನ ಕಾದಂಬರಿಯ ನಿರೂಪಣೆಯನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿಯ ಹಿರಿಯ ನಾಯಕಿ ಹಾಗೂ ಮಾಜಿ ನಟಿಯೂ ಆಗಿರುವ ಸ್ಮೃತಿ ಇರಾನಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಲಾಲ್ ಸಲಾಮ್ ಓರ್ವ ಯುವ ಅಧಿಕಾರಿ ವಿಕ್ರಮ್ ಪ್ರತಾಪ್ ಸಿಂಗ್​ನ ಕತೆಯಾಗಿದೆ. ವಿಕ್ರಮ್ ಸಿಂಗ್ ರಾಜಕಾರಣ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯವಸ್ಥೆಯಲ್ಲಿ ಸಿಲುಕಿ ಯಾವ ರೀತಿ ಸವಾಲುಗಳನ್ನು ಎದುರಿಸುತ್ತಾನೆ ಎಂಬುದೇ ಈ ಕಾದಂಬರಿಯ ಕಥೆಯಾಗಿದೆ.

ವೇಗದ ಗತಿಯ ಥ್ರಿಲ್ಲರ್‌ನ ಎಲ್ಲಾ ಅಂಶಗಳನ್ನು ಹೊಂದಿರುವ ಕಾದಂಬರಿ, ವೇಗ, ಆಕ್ಷನ್, ಸಸ್ಪೆನ್ಸ್, ಸ್ಮರಣೀಯ ಪಾತ್ರಗಳು ಮತ್ತು ಸನ್ನಿವೇಶಗಳು ‘ಲಾಲ್ ಸಲಾಮ್’ ಕಾದಂಬರಿಯ ಪ್ರಮುಖ ಅಂಶಗಳಾಗಿದ್ದು, ಪ್ರಾರಂಭದಿಂದ ಕೊನೆಯವರೆಗೆ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ವೆಸ್ಟ್ ಲ್ಯಾಂಡ್ ಪ್ರಕಾಶಕರಾದ ವಿ.ಕೆ. ಕಾರ್ತಿಕಾ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಉತ್ತರ ಪ್ರದೇಶದ ಪ್ರೊಫೆಸರ್​ಗೆ ಜೈಲು

ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಉತ್ತರ ಪ್ರದೇಶದ ಪ್ರೊಫೆಸರ್​ಗೆ ಜೈಲು