ಭಾಷಾ ವೈವಿಧ್ಯತೆ ದೇಶದ ಹೆಮ್ಮೆ ಆದರೆ ಭಾಷೆಯ ವಿಷಯದಲ್ಲಿ ವಿವಾದ ಹುಟ್ಟು ಹಾಕುವ ಯತ್ನ ಮಾಡಲಾಗುತ್ತಿದೆ: ಪ್ರಧಾನಿ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: May 20, 2022 | 2:50 PM

ಬಿಜೆಪಿ ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ನೋಡುತ್ತದೆ ಮತ್ತು ಅವುಗಳನ್ನು ಪೂಜಿಸಲು ಯೋಗ್ಯವಾಗಿದೆ ಎಂದು ಪರಿಗಣಿಸುತ್ತದೆ. ಇದು ದೇಶದ ಉತ್ತಮ ಭವಿಷ್ಯಕ್ಕಿರುವ ಕೊಂಡಿಯಾಗಿದೆ...

ಭಾಷಾ ವೈವಿಧ್ಯತೆ ದೇಶದ ಹೆಮ್ಮೆ ಆದರೆ ಭಾಷೆಯ ವಿಷಯದಲ್ಲಿ ವಿವಾದ ಹುಟ್ಟು ಹಾಕುವ ಯತ್ನ ಮಾಡಲಾಗುತ್ತಿದೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ದೆಹಲಿ: ಭಾಷಾ ವೈವಿಧ್ಯತೆ ದೇಶದ ಹೆಮ್ಮೆ, ಆದರೆ ಅದರ ಬಗ್ಗೆ ವಿವಾದಗಳನ್ನು ಹುಟ್ಟುಹಾಕುವ ಯತ್ನ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಿದ್ದೇವೆ. ಬಿಜೆಪಿ ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ನೋಡುತ್ತದೆ ಮತ್ತು ಅವುಗಳನ್ನು ಪೂಜಿಸಲು ಯೋಗ್ಯವಾಗಿದೆ ಎಂದು ಪರಿಗಣಿಸುತ್ತದೆ. ಇದು ದೇಶದ ಉತ್ತಮ ಭವಿಷ್ಯಕ್ಕಿರುವ ಕೊಂಡಿಯಾಗಿದೆ” ಎಂದು ಜೈಪುರದಲ್ಲಿ ಬಿಜೆಪಿ (BJP) ಪದಾಧಿಕಾರಿಗಳ ರಾಷ್ಟ್ರೀಯ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ನೀಡಿದೆ ಎಂದ ಮೋದಿ ಇದು ಪ್ರಾದೇಶಿಕ ಭಾಷೆಗಳಿಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆಎಂದಿದ್ದಾರೆ.  ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆ ಎಂದು ಪರಿಗಣಿಸಬೇಕೆ ಎಂಬ ಚರ್ಚೆ ನಡೆಯುತ್ತಿರುವ ನಡುವೆಯೇ ಮೋದಿ ಈ ಹೇಳಿಕೆ ನೀಡಿದ್ದಾರೆ. ಕಳೆದ ತಿಂಗಳು ಸಂಸದೀಯ ಅಧಿಕೃತ ಭಾಷಾ ಸಮಿತಿಯ ಅಧ್ಯಕ್ಷರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಸಂಪುಟದ ಶೇ70 ಕಾರ್ಯಸೂಚಿಯನ್ನು ಈಗ ಹಿಂದಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಸದಸ್ಯರಿಗೆ ತಿಳಿಸಿದ್ದರು.

ದೇಶದ ಏಕತೆಯ ಪ್ರಮುಖ ಭಾಗವಾಗಿ ಹಿಂದಿಯನ್ನು ಮಾಡುವ ಸಮಯ ಬಂದಿದೆ ಎಂದು ಶಾ ಹೇಳಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸಿದಾಗ ಅದು ಭಾರತದ ಭಾಷೆಯಲ್ಲಿರಬೇಕು ಮತ್ತು ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಎಂದು ಅಮಿತ್ ಶಾ ಹೇಳಿದ್ದರು.

ಇದನ್ನೂ ಓದಿ
PM Modi Speech: ಜೈಪುರದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ: ಚುನಾವಣೆ ಸಿದ್ಧತೆಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ಹಿಂದಿನಿಂದಲೂ ನಾರಾಯಣಗುರುವನ್ನು ಬದಿಗೆ ಸರಿಸುತ್ತಿದ್ದಾರೆ: ಡಿಕೆ ಶಿವಕುಮಾರ್ ಆರೋಪ
Cannes 2022: ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗಕ್ಕೆ ಗೌರವ; ಮೆಚ್ಚುಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ
ವಿವಿಧ ರಾಜ್ಯಗಳ ಜನರು ಪರಸ್ಪರ ಸಂವಹನಕ್ಕೆ ಇಂಗ್ಲಿಷ್ ಬದಲು ಹಿಂದಿ ಬಳಸಬೇಕು: ಅಮಿತ್ ಶಾ


ಈ ಹೇಳಿಕೆಯು ವಿವಾದವನ್ನುಂಟು ಮಾಡಿದ್ದು ಪ್ರತಿಪಕ್ಷಗಳು ಇದನ್ನು ಭಾರತದ ಬಹುತ್ವದ ಮೇಲಿನ ಆಕ್ರಮಣ, ಬಿಜೆಪಿಯು ಹಿಂದಿಯನ್ನು ಹೇರುತ್ತಿದೆ ಎಂದು ಆರೋಪಿಸಿದವು.

ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರು ಶಾ ಅವರು ಹಿಂದಿಯನ್ನು ಹೇರುವ ಮೂಲಕ ಅಪಚಾರ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಏಪ್ರಿಲ್ 8 ರಂದು ಟ್ವೀಟ್ ಮಾಡಿದ ರಮೇಶ್, “ರಾಜನಾಥ್ ಸಿಂಗ್ ಅವರು ಗೃಹ ಸಚಿವರಾಗಿದ್ದಾಗ ಸಂಸತ್ತಿನಲ್ಲಿ ಹೇಳಿದಂತೆ ಹಿಂದಿ ರಾಜ್ ಭಾಷೆ ರಾಷ್ಟ್ರ ಭಾಷೆಯಲ್ಲ. ಹಿಂದಿ ಸಾಮ್ರಾಜ್ಯಶಾಹಿ ಭಾರತಕ್ಕೆ ಮರಣಶಾಸನವಾಗಲಿದೆ. ನಾನು ಹಿಂದಿಯೊಂದಿಗೆ ತುಂಬಾ ಆರಾಮದಾಯಕವಾಗಿದ್ದೇನೆ, ಆದರೆ ಅದು ಯಾರ ಗಂಟಲಿಗೆ ತುರಕುವುದನ್ನು ನಾನು ಬಯಸುವುದಿಲ್ಲ. ಅಮಿತ್ ಶಾ ಹಿಂದಿ ಹೇರುವ ಮೂಲಕ ಹಿಂದಿಗೆ ಅಪಚಾರ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ