ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ ಯಾವುದು? ದೆಹಲಿ ಪೊಲೀಸ್ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ವೇದಿಕೆಯ ಹಿಂಭಾಗ ಪ್ರಾಣಿಯೊಂದು ಗೋಚರವಾಗಿದ್ದು, ಕೆಲವರು ಅದನ್ನು ಬೆಕ್ಕು ಎಂದರೆ ಕೆಲವರು ನಾಯಿ, ಚಿರತೆ ಇರಬಹುದು ಎಂದು ಊಹಿಸಿದ್ದರು ಅದಕ್ಕೆ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ ಯಾವುದು? ದೆಹಲಿ ಪೊಲೀಸ್ ಹೇಳಿದ್ದೇನು?

Updated on: Jun 11, 2024 | 10:10 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಪ್ರಮಾಣವಚನ ಕಾರ್ಯಕ್ರಮದಂದು ವೇದಿಕೆ ಹಿಂಭಾಗ ಕಾಣಿಸಿಕೊಂಡ ನಿಗೂಢ ಪ್ರಾಣಿಯ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜೂನ್​ 9ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಡಿಯೋವೊಂದರಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸುವಾಗ ವೇದಿಕೆ ಹಿಂಭಾಗ ಪ್ರಾಣಿಯೊಂದು ಹಾದು ಹೋಗುವುದನ್ನು ಕಾಣಬಹುದು. ಆ ಪ್ರಾಣಿ ಚಿರತೆಯಾಗಿರಬಹುದಾ ಎಂದು ಹಲವು ಮಂದಿ ಪ್ರಶ್ನೆ ಮಾಡಿದ್ದರು ಆದರೆ ಅದಕ್ಕೆ ದೆಹಲಿ ಪೊಲೀಸ್​ ಸ್ಪಷ್ಟನೆ ನೀಡಿದೆ.

ದೆಹಲಿ ಪೊಲೀಸರು ಈ ಸುದ್ದಿಯನ್ನು ವದಂತಿ ಎಂದು ಕರೆದಿದ್ದಾರೆ
ವರದಿಗಳನ್ನು ನಿರಾಕರಿಸಿದ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ದೆಹಲಿ ಪೊಲೀಸರು ತನ್ನ ಎರಡನೇ ಪೋಸ್ಟ್‌ನಲ್ಲಿ , ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ನಿನ್ನೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದ ನೇರ ಪ್ರಸಾರದಲ್ಲಿ ತೆಗೆದ ಪ್ರಾಣಿಯ ಚಿತ್ರವನ್ನು ತೋರಿಸುತ್ತಿವೆ ಮತ್ತು ಅದು ಕಾಡು ಪ್ರಾಣಿ ಎಂದು ಹೇಳುತ್ತಿದೆ. ಅದು ಸಂಪೂರ್ಣ ಸುಳ್ಳು ಎಂದು ಹೇಳಿದೆ.

ದುರ್ಗಾದಾಸ್​ ಪ್ರಮಾಣವಚನ ತೆಗೆದುಕೊಳ್ಳುತ್ತಿರುವ ಸಂದರ್ಭ
ದುರ್ಗಾದಾಸ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಸಂದರ್ಭ. ಈ ವೇಳೆ ರಾಷ್ಟ್ರಪತಿ ಭವನದ ಹಿಂದೆ ಯಾವುದೋ ಪ್ರಾಣಿ ನಡೆದುಕೊಂಡು ಬರುತ್ತಿರುವುದು ಕ್ಯಾಮರಾದಲ್ಲಿ ಕಂಡುಬಂದಿದೆ. ವಿಡಿಯೋದಲ್ಲಿ ಕಾಣಸಿಗುವ ಈ ಪ್ರಾಣಿಯನ್ನು ಕೆಲವರು ಚಿರತೆ ಎಂದು ಕರೆದರೆ ಕೆಲವರು ಬೆಕ್ಕು ಎಂದು ಕರೆದಿದ್ದಾರೆ.

ಮತ್ತಷ್ಟು ಓದಿ: Modi 3.0 Cabinet: ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತೆಗೆದುಕೊಂಡ ಮೊದಲ ನಿರ್ಧಾರ ಇದು

ಇದು ಯಾವ ಪ್ರಾಣಿ ಎಂದು ತಿಳಿಯಲು ಜನರು ಕಾತುರರಾಗಿದ್ದರು ಮತ್ತು ಇಷ್ಟು ಭದ್ರತೆಯ ನಡುವೆ ಚಿರತೆ ರಾಷ್ಟ್ರಪತಿ ಭವನವನ್ನು ಹೇಗೆ ತಲುಪಿತು? ದೇಶಾದ್ಯಂತ ಮಾಧ್ಯಮ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ವಿವಿಧ ರೀತಿಯ ಸುದ್ದಿಗಳನ್ನು ಹರಡಲಾಯಿತು. ಆದರೆ, ಇದೀಗ ದೆಹಲಿ ಪೊಲೀಸರು ಅಧಿಕೃತವಾಗಿ ಆ ಪ್ರಾಣಿ ನಿಗೂಢ ಪ್ರಾಣಿಯಲ್ಲ, ರಾಷ್ಟ್ರಪತಿ ಭವನದ ಸಾಕು ಬೆಕ್ಕು ಎಂದು ಖಚಿತಪಡಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us