ಅನಂತ್​ನಾಗ್​ನಲ್ಲಿ ಲಷ್ಕರ್ ಇ ತೊಯ್ಬಾದ ಕಮಾಂಡರ್​​ನನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿ: ಇಂಟರ್​ನೆಟ್​ ಸ್ಥಗಿತ

ಅನಂತ್​ನಾಗ್​ನಲ್ಲಿ ಲಷ್ಕರ್ ಇ ತೊಯ್ಬಾದ ಕಮಾಂಡರ್​​ನನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿ: ಇಂಟರ್​ನೆಟ್​ ಸ್ಥಗಿತ
ಎನ್​ಕೌಂಟರ್ ನಡೆಯುತ್ತಿರುವ ಸ್ಥಳ

ಈಗೆರಡು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಶೋಪಿಯಾನ್​ ಜಿಲ್ಲೆಯ ಹರಿಪೋರಾ ಗ್ರಾಮದಲ್ಲಿ ಸುಮಾರು 12 ತಾಸುಗಳ ಕಾಲ ಭದ್ರತಾ ಪಡೆ ಮತ್ತು ಉಗ್ರರ ವಿರುದ್ಧ ಎನ್​ಕೌಂಟರ್​ ನಡೆದಿತ್ತು.

TV9kannada Web Team

| Edited By: Lakshmi Hegde

Apr 09, 2022 | 9:19 AM

ಜಮ್ಮು-ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಸಿರ್ಹಾಮಾ ಎಂಬ ಹಳ್ಳಿಯಲ್ಲಿ ಲಷ್ಕರ್ ಇ ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ಕಮಾಂಡರ್​​ನನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಮೃತ ಉಗ್ರನ ಹೆಸರು ನಿಸಾರ್​ ದಾರ್​ ಎಂಬುದಾಗಿ ಜಮ್ಮು-ಕಾಶ್ಮೀರ ಐಜಿಪಿ ವಿಜಯ್​ ಕುಮಾರ್​ ತಿಳಿಸಿದ್ದಾರೆ. ಸಿರ್ಹಾಮಾದಲ್ಲಿ ಇನ್ನೂ ಕೂಡ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದು, ಸದ್ಯ ಅನಂತ್​ನಾಗ್​ ಜಿಲ್ಲೆಯ ಹಲವು ಭಾಗಗಳಲ್ಲಿ ಇಂಟರ್​ನೆಟ್​ ಸಂಪರ್ಕ ಕಡಿತಗೊಳಿಸಲಾಗಿದೆ.

ಸಿರ್ಹಾಮಾದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿಯನ್ನು ಪಡೆದ ಭದ್ರತಾ ಪಡೆ ಸಿಬ್ಬಂದಿ, ಆ ಸ್ಥಳವನ್ನು ಸುತ್ತುವರಿದಿದ್ದರು. ತಾವು ಅಪಾಯದಲ್ಲಿದ್ದೇವೆ ಎಂದು ಅರಿತ ಭಯೋತ್ಪಾದಕರು ರಕ್ಷಣಾ ಪಡೆಗಳ ಮೇಲೆಯೇ ಗುಂಡಿನ ದಾಳಿ ನಡೆಸಲು ಶುರು ಮಾಡಿದರು. ಆಗ ಅದಕ್ಕೆ ಪ್ರತಿ ದಾಳಿ ನಡೆಸಿದ ಭದ್ರತಾ ಸಿಬ್ಬಂದಿ, ಲಷ್ಕರ್​ ಇ ತೊಯ್ಬಾದ ಪ್ರಮುಖ ಉಗ್ರನನ್ನೇ ಕೊಂದು ಹಾಕಿದ್ದಾರೆ. ಹಾಗೇ ಇನ್ನೊಬ್ಬಾತ ಸೆರೆ ಸಿಕ್ಕಿದ್ದಾಗಿಯೂ ಪೊಲೀಸ್ ಅಧಿಕಾರಿ ವಿಜಯ್​ ಕುಮಾರ್ ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದ ವಿವಿಧ ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ಉಗ್ರರ ವಿರುದ್ಧ ತೀವ್ರವಾದ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಈಗೆರಡು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಶೋಪಿಯಾನ್​ ಜಿಲ್ಲೆಯ ಹರಿಪೋರಾ ಗ್ರಾಮದಲ್ಲಿ ಸುಮಾರು 12 ತಾಸುಗಳ ಕಾಲ ಭದ್ರತಾ ಪಡೆ ಮತ್ತು ಉಗ್ರರ ವಿರುದ್ಧ ಎನ್​ಕೌಂಟರ್​ ನಡೆದಿತ್ತು. ಜಮ್ಮು ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್​ಪಿಎಫ್​ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಇನ್ನೊಂದೆಡೆ ಪುಲ್ವಾಮಾದ ಆವಂತಿಪೋರಾದಲ್ಲಿ ಇಬ್ಬರು ಉಗ್ರರನ್ನೂ ಹತ್ಯೆಗೈಯ್ಯಲಾಗಿತ್ತು.

ಇದನ್ನೂ ಓದಿ: Ranbir- Alia Wedding: ಕೊನೆಗೂ ಬಯಲಾಯ್ತು ಆಲಿಯಾ- ರಣಬೀರ್ ವಿವಾಹದ ದಿನಾಂಕ; ಇಲ್ಲಿದೆ ನೋಡಿ ಲೇಟೆಸ್ಟ್ ಡಿಟೇಲ್ಸ್

Follow us on

Related Stories

Most Read Stories

Click on your DTH Provider to Add TV9 Kannada