Manoj Pande: ಭಾರತದ ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕಾರ
ಮನೋಜ್ ಸಿ ಪಾಂಡೆ ಎರಡು ವರ್ಷಕ್ಕೂ ಹೆಚ್ಚು ಕಾಲ ಸೇನಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೂರು ವರ್ಷಗಳ ಸೇವೆಯವರೆಗೆ ಅಥವಾ 62 ವರ್ಷದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸೇನಾ ಮುಖ್ಯಸ್ಥರು ತಮ್ಮ ಅಧಿಕಾರದಲ್ಲಿರುತ್ತಾರೆ.
ನವದೆಹಲಿ: ಭಾರತದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಎಂಎಂ ನರವಣೆ (MM Naravane) ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಲೆಫ್ಟಿನಲ್ ಜನರಲ್ ಮನೋಜ್ ಪಾಂಡೆ (Gen Manoj Pande) ಸೇನಾ ಸಿಬ್ಬಂದಿಯ 29ನೇ ಮುಖ್ಯಸ್ಥರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರ ಸಾವಿನ ಬಳಿಕ 2021ರ ಡಿಸೆಂಬರ್ ತಿಂಗಳಲ್ಲಿ ಭಾರತದ ಸೇನಾ ಮುಖ್ಯಸ್ಥರಾಗಿ ಎಂ.ಎಂ. ನರವಣೆ ಅಧಿಕಾರ ವಹಿಸಿಕೊಂಡಿದ್ದರು. ಅವರು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಹೊಸ ಉತ್ತರಾಧಿಕಾರಿಯಾಗಿ ಜನರಲ್ ಮನೋಜ್ ಪಾಂಡೆ ಅವರನ್ನು ಘೋಷಿಸಲಾಗಿದೆ. ಅವರು ಇಂದು ಸೇನಾ ಮುಖ್ಯಸ್ಥರಾಗಿ (Chief of Army Staff) ಅಧಿಕಾರ ವಹಿಸಿಕೊಂಡಿದ್ದಾರೆ.
ಭಾರತೀಯ ಸೇನಾ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಜನರಲ್ ಮನೋಜ್ ಪಾಂಡೆ, ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನೋಜ್ ಸಿ ಪಾಂಡೆ ಎರಡು ವರ್ಷಕ್ಕೂ ಹೆಚ್ಚು ಕಾಲ ಸೇನಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೂರು ವರ್ಷಗಳ ಸೇವೆಯವರೆಗೆ ಅಥವಾ 62 ವರ್ಷದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸೇನಾ ಮುಖ್ಯಸ್ಥರು ತಮ್ಮ ಅಧಿಕಾರದಲ್ಲಿರುತ್ತಾರೆ.
ಲೆಫ್ಟಿನೆಂಟ್ ಜನರಲ್ ಮನೋಜ್ ಸಿ ಪಾಂಡೆ ಪರಿಚಯ: 1962ರ ಮೇ 6ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿ ಪಾಂಡೆ 1982ರ ಡಿಸೆಂಬರ್ 24ರಂದು ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಇಂಜಿನಿಯರ್ಸ್ (ದಿ ಬಾಂಬೆ ಸಪ್ಪರ್ಸ್) ನಲ್ಲಿ ನೇಮಕಗೊಂಡರು. 39 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆಯ ಅವಧಿಯಲ್ಲಿ, ಅವರು ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ಬೋಧನಾ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
General MM Naravane #COAS was presented a Ceremonial Guard of Honour at the #SouthBlock lawns on the occasion of relinquishing the appointment of the Chief of the Army Staff.#IndianArmy pic.twitter.com/VO9qPohk2h
— ADG PI – INDIAN ARMY (@adgpi) April 30, 2022
ಲೆಫ್ಟಿನೆಂಟ್ ಜನರಲ್ ಮನೋಜ್ ಸಿ. ಪಾಂಡೆ ಅವರ ಕಮಾಂಡ್ ನೇಮಕಾತಿಗಳಲ್ಲಿ ವೆಸ್ಟರ್ನ್ ಥಿಯೇಟರ್‌ನಲ್ಲಿ ಇಂಜಿನಿಯರ್ ಬ್ರಿಗೇಡ್‌ನ ಕಮಾಂಡ್, ಸ್ಟ್ರೈಕ್ ಕಾರ್ಪ್ಸ್‌ನ ಭಾಗವಾಗಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಲೈನ್ ಆಫ್ ಕಂಟ್ರೋಲ್ ಜೊತೆಗೆ ಇನ್‌ಫಾಂಟ್ರಿ ಬ್ರಿಗೇಡ್ ಸೇರಿವೆ. ಇತರ ಪ್ರಮುಖ ಕಮಾಂಡ್ ನೇಮಕಾತಿಗಳಲ್ಲಿ ಪಶ್ಚಿಮ ಲಡಾಖ್‌ನ ಎತ್ತರದ ಪ್ರದೇಶದಲ್ಲಿ ಮೌಂಟೇನ್ ವಿಭಾಗ ಮತ್ತು ಕಮಾಂಡ್ ಆಫ್ ಎ ಕಾರ್ಪ್ಸ್, ಎಲ್‌ಎಸಿ ಉದ್ದಕ್ಕೂ ಮತ್ತು ಪೂರ್ವ ಕಮಾಂಡ್‌ನ ಕೌಂಟರ್ ಬಂಡಾಯ ಕಾರ್ಯಾಚರಣೆ ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಹೆಚ್ಚಿನ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ…
ಲೆಫ್ಟಿನೆಂಟ್ ಜನರಲ್ ಮನೋಜ್ ಸಿ ಪಾಂಡೆ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಕ್ಯಾಂಬರ್ಲಿ (ಇಂಗ್ಲೆಂಡ್), ಆರ್ಮಿ ವಾರ್ ಕಾಲೇಜ್, ಮೊವ್ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜ್, ನವದೆಹಲಿಯಲ್ಲಿ ಸ್ಟಾಫ್ ಕಾಲೇಜ್‌ನಲ್ಲಿ ಕೋರ್ಸ್‌ಗಳನ್ನು ಪಡೆದಿದ್ದಾರೆ. ಅವರ ಶ್ರೇಷ್ಠ ಸೇವೆಗಾಗಿ, ಲೆಫ್ಟಿನೆಂಟ್ ಜನರಲ್ ಮನೋಜ್ ಸಿ ಪಾಂಡೆ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕವನ್ನು ನೀಡಲಾಗಿದೆ.
ಚೀನಾ, ಪಾಕಿಸ್ತಾನ ಸೇರಿದಂತೆ ಭಾರತವು ತನ್ನ ಗಡಿಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಮನೋಜ್ ಪಾಂಡೆ ವಿಶ್ವದ ಅತಿದೊಡ್ಡ ಸೇನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸೇನೆಯ ಆಳ್ವಿಕೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಸೇನಾ ಪಡೆ, ವಾಯುಪಡೆ ಮತ್ತು ನೌಕಾಪಡೆಯ ಹೊಣೆ ಹೊರಲಿದ್ದಾರೆ.
General Manoj Mukund Naravane, Chief of the Army Staff, along with his wife Smt Veena Naravane, called on President Ram Nath Kovind and First Lady Smt Savita Kovind at Rashtrapati Bhavan. pic.twitter.com/OGRHcjCpkE
— President of India (@rashtrapatibhvn) April 30, 2022
ನಿವೃತ್ತಿಯಾಗಿರುವ ಜನರಲ್ ನರವಣೆ ಮತ್ತು ಅವರ ಪತ್ನಿ ವೀಣಾ ನರವಣೆ ಇಂದು ಬೆಳಗ್ಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರನ್ನು ಭೇಟಿ ಮಾಡಿದ್ದಾರೆ.