ಲವ್ ಜಿಹಾದ್ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ, ಶೀಘ್ರ ಕಾನೂನು ಜಾರಿ: ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂ ಸರ್ಕಾರವು ಲ್ಯಾಂಡ್ ಜಿಹಾದ್ ಮತ್ತು ಲವ್ ಜಿಹಾದ್ ಅನ್ನು ತಡೆಯುವ ನಿಟ್ಟಿನಲ್ಲಿ ಎರಡು ಕಾನೂನುಗಳನ್ನು ಶೀಘ್ರ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿರುವ ಅವರು, ಚುನಾವಣೆಯ ಸಮಯದಲ್ಲಿ ಲವ್ ಜಿಹಾದ್ ಬಗ್ಗೆ ಮಾತನಾಡಿದ್ದೆವು. ಅಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಕಾನೂನನ್ನು ತರುತ್ತೇವೆ ಎಂದಿದ್ದಾರೆ.
ಗುವಾಹಟಿ, ಆಗಸ್ಟ್ 04: ಲವ್ ಜಿಹಾದ್ (Love Jihad) ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಶೀಘ್ರ ಜಾರಿಗೆ ತರಲಾಗುವುದು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಅಸ್ಸಾಂನಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರಲು ನಮ್ಮ ಸರ್ಕಾರ ಚಿಂತಿಸಿದೆ ಎಂದು ಹೇಳಿದ್ದಾರೆ. ಆ ಮೂಲಕ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ ಬಳಿಕ ಇದೀಗ ಅಸ್ಸಾಂ ಸರ್ಕಾರ ಕಾನೂನು ತರಲು ಮುಂದಾಗಿದೆ.
ಬಹುತೇಕ ಬಿಜೆಪಿ ಆಡಳಿತದಲ್ಲಿ ರಾಜ್ಯಗಳಲ್ಲಿ ಬಲವಂತದ ಮತಾಂತರದ ವಿರುದ್ಧ ಕಾನೂನುಗಳಿದ್ದರೂ, ಶಿಕ್ಷೆಯ ನಿಬಂಧನೆಗಳನ್ನು ಇನ್ನಷ್ಟು ಕಠಿಣಗೊಳಿಸಲು ಯೋಜನೆಗಳು ಜಾರಿಯಲ್ಲಿವೆ.
ಎಎನ್ಐ ಟ್ವೀಟ್
#WATCH | Assam CM Himanta Biswa Sarma tweets, “Assam government is bringing two laws to stop Land Jihad and Love Jihad… If a Muslim wants to buy a Hindu’s property or a Hindu wants to buy a Muslim’s property, he will have to get government permission… Those practising love… pic.twitter.com/0pwnYptBA3
— ANI (@ANI) August 4, 2024
ಲವ್ ಜಿಹಾದ್ ವಿರುದ್ಧ ರಾಜ್ಯದಲ್ಲಿ ಮೊದಲು ಉತ್ತರ ಪ್ರದೇಶ ಕಾನೂನು ರೂಪಿಸಿತು. ಪ್ರತಿಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿರುವ ಕಾನೂನುಬಾಹಿರ ಮತಾಂತರ ನಿಷೇಧ (ತಿದ್ದುಪಡಿ) ಮಸೂದೆ 2024 ಅನ್ನು ಪರಿಷ್ಕರಿಸಲು ಯೋಜಿಸಿದೆ. ಸಮಾಜವಾದಿ ಪಕ್ಷವು ಇದನ್ನು ವಿಭಜಕ ಕ್ರಮವೆಂದು ಕರೆದಿದ್ದು, ಸಮಾಜವಾದಿ ಪಕ್ಷವು ಇದನ್ನು ವಿಭಜಕ ನಡೆ ಎಂದು ಹೇಳಿದೆ.
ಇದನ್ನೂ ಓದಿ: ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಬೆಂಕಿ, 3 ಬೋಗಿಗಳು ಅಗ್ನಿಗಾಹುತಿ
ಲವ್ ಜಿಹಾದ್ ವಿರುದ್ಧ ಕಾನೂನಿನೊಂದಿಗೆ ಶೀಘ್ರದಲ್ಲೇ ಹೊಸ ವಸತಿ ನೀತಿಯನ್ನು ಪರಿಚಯಿಸಲಾಗುವುದು. ಆ ಮೂಲಕ ಅಸ್ಸಾಂನಲ್ಲಿ ಜನಿಸಿದವರು ಮಾತ್ರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ. ಅಲ್ಲದೆ ಮುಸ್ಲಿಂ ವ್ಯಕ್ತಿಯು ಹಿಂದೂಗಳ ಅಥವಾ ಹಿಂದೂ ವ್ಯಕ್ತಿ ಮುಸ್ಲಿಂರ ಭೂಮಿಯನ್ನು ಖರೀದಿಸಲು ಬಯಸಿದರೆ ಮೊದಲು ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಈ ತಿಂಗಳ ಕೊನೆಯಲ್ಲಿ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಈ ಹೊಸ ಕಾನೂನುಗಳನ್ನು ತರುವ ಸಾಧ್ಯತೆ ಇದೆ ಎಂದು ಶರ್ಮಾ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.