ಹೆಂಡದ ದೊರೆ ಪೋಂಟಿಯ 400 ಕೋಟಿ ಮೌಲ್ಯದ ಫಾರ್ಮ್​ಹೌಸ್ ಕೆಡವಿಹಾಕಿದ ಡೆಲ್ಲಿ ಅಧಿಕಾರಿಗಳು

Ponty Chadha's Farmhouse demolished: ಮದ್ಯದ ದೊರೆ ದಿವಂಗತ ಗುರದೀಪ್ ಸಿಂಗ್ ಅಲಿಯಾಸ್ ಪೋಂಟಿ ಚಡ್ಢ ಅವರಿಗೆ ಸೇರಿದ 400 ಕೋಟಿ ರೂ ಮೌಲ್ಯದ ಫಾರ್ಮ್ ಹೌಸ್ ಅನ್ನು ಡೆಲ್ಲಿ ಪಾಲಿಕೆ ಅಧಿಕಾರಿಗಳು ಕೆಡವಿಸಿದ್ದಾರೆ. ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಯ ಭಾಗವಾಗಿ ಈ ಕೆಲಸ ನಡೆದಿದೆ. 10 ಎಕರೆಯಷ್ಟು ವಿಶಾಲ ಜಾಗದಲ್ಲಿ ಚಡ್ಢ ಅವರ ಫಾರ್ಮ್ ಹೌಸ್ ಇತ್ತು. ಮೊನ್ನೆ ಮೊನ್ನೆ ಉತ್ತರಾಖಂಡ್ ಸುರಂಗ ಕುಸಿತದಲ್ಲಿ ಸಿಕ್ಕಿಕೊಂಡಿದ್ದ 41 ಜನರನ್ನು ಕಾಪಾಡಿ ಹೀರೋ ಎನಿಸಿದ್ದ ವಾಕೀಲ್ ಹಸನ್ ಎಂಬುವವರ ಮನೆಯನ್ನೂ ಕೆಡವಲಾಗಿತ್ತು.

ಹೆಂಡದ ದೊರೆ ಪೋಂಟಿಯ 400 ಕೋಟಿ ಮೌಲ್ಯದ ಫಾರ್ಮ್​ಹೌಸ್ ಕೆಡವಿಹಾಕಿದ ಡೆಲ್ಲಿ ಅಧಿಕಾರಿಗಳು
ದೆಹಲಿಯಲ್ಲಿ ಪೋಂಟಿ ಚಡ್ಡ ಅವರಿಗೆ ಸೇರಿದ ಫಾರ್ಮ್​ಹೌಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 03, 2024 | 4:32 PM

ನವದೆಹಲಿ, ಮಾರ್ಚ್ 3: ಮದ್ಯದ ದೊರೆಯಾಗಿದ್ದ ದಿವಂಗತ ಪೋಂಟಿ ಚಡ್ಢ (Ponty Chadha) ಅವರಿಗೆ ಸೇರಿದ ಫಾರ್ಮ್​ಹೌಸ್​ವೊಂದನ್ನು ಡೆಲ್ಲಿ ಅಭಿವೃದ್ಧಿ ಪ್ರಾಧಿಕಾರ (DDA- Delhi Development Authority) ಕೆಡವಿ ಹಾಕಿದೆ. ಶುಕ್ರವಾರ ಮತ್ತು ಶನಿವಾರ ಈ ಬೃಹತ್ ಬಂಗಲೆಯನ್ನು ಕೆಡವಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ಕಾರಿ ಜಾಗದಲ್ಲಿ ಕಟ್ಟಲಾದ ಅನಧಿಕೃತ ಕಟ್ಟಡಗಳ ತೆರವು, ಮತ್ತು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಯೋಜನೆಯ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ. ಪೋಂಟಿ ಚಡ್ಢ ಅವರ ಫಾರ್ಮ್ ಹೌಸ್ ಅನ್ನು ಸರ್ಕಾರಿ ಜಾಗದಲ್ಲಿ ಕಟ್ಟಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಕೆಡವಲಾಗಿದೆ.

ಲಿಕ್ಕರೆ ದೊರೆ ಎನಿಸಿರುವ ಗುರದೀಪ್ ಸಿಂಗ್ ಅಲಿಯಾಸ್ ಪೋಂಟಿ ಚಡ್ಢ ಅವರ ಈ ಫಾರ್ಮ್ ಹೌಸ್ 10 ಎಕರೆಯಷ್ಟು ವಿಶಾಲ ಜಾಗದಲ್ಲಿ ಇದೆ. ಛತ್ತರ್​ಪುರ್​ನಲ್ಲಿರುವ ಇದರ ಮೌಲ್ಯ ಅಂದಾಜು 400 ಕೋಟಿ ರೂ ಎನ್ನಲಾಗಿದೆ. ಶುಕ್ರವಾದ ಅಧಿಕಾರಿಗಳು ಐದು ಎಕರೆಯಷ್ಟು ಜಾಗವನ್ನು ವಶಕ್ಕೆ ಪಡೆದಿದ್ದರು. ಶನಿವಾರ ಫಾರ್ಮ್​ಹೌಸ್​ನ ಮುಖ್ಯ ಕಟ್ಟಡವನ್ನು ಕೆಡವಲಾಗಿದೆ. ಅಷ್ಟೂ ಜಾಗವನ್ನು ಡಿಡಿಎ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿದೆ.

ಎರಡು ತಿಂಗಳ ಹಿಂದೆಯೂ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿತ್ತು. ಗೋಕುಲಪುರಿಯಲ್ಲಿ ಕಮರ್ಷಿಯಲ್ ಶೂರೂಮ್ ಸೇರಿದಂತೆ ಹಲವು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರನೆ ಜನವರಿ 13ರಿಂದ 17ರವರೆಗೂ ನಡೆದಿತ್ತು. ಒಟ್ಟು ನಾಲ್ಕು ಎಕರೆ ಸರ್ಕಾರಿ ಜಾಗವನ್ನು ಮರಳಿ ಸುಪರ್ದಿಗೆ ಪಡೆಯಲಾಗಿತ್ತು.

ಇದನ್ನೂ ಓದಿ: ಲೋಕಸಭಾ ಟಿಕೆಟ್ ನಿರಾಕರಣೆ ಬೆನ್ನಲ್ಲೇ ಸಕ್ರಿಯ ರಾಜಕಾರಣದಿಂದ ದೂರವಾದ ಮಾಜಿ ಸಚಿವ ಡಾ. ಹರ್ಷವರ್ಧನ್

ಪೋಂಟಿ ಚಡ್ಡ ಅವರು ಉತ್ತರಪ್ರದೇಶದ ಮೊರಾದಾಬಾದ್​ನವರಾಗಿದ್ದು, 2012ರಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

ಮೊನ್ನೆ ಮೊನ್ನೆ ದೆಹಲಿಯ ಖಜೂರಿ ಖಾಸ್ ಎಂಬಲ್ಲಿ 44 ವರ್ಷದ ವಕೀಲ್ ಹಸನ್ ಎಂಬುವವರ ಮನೆಯನ್ನು ಡಿಡಿಎ ಅಧಿಕಾರಿಗಳು ಕೆಡವಿಸಿದ್ದರು. ಮೂರು ತಿಂಗಳ ಹಿಂದೆ 2023ರ ನವೆಂಬರ್​ನಲ್ಲಿ ಉತ್ತರಾಖಂಡ್​ನಲ್ಲಿ ಗಣಿ ಸುರಂಗ ಕುಸಿದು 41 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾಗ ಅವರ ಜೀವ ಉಳಿಸಿದ್ದು ಇದೇ ವಕೀಲ್ ಹಸನ್ ನೇತೃತ್ವದ ರಾಟ್ ಹೋಲ್ ಮೈನರ್​ಗಳೇ. 41 ಕಾರ್ಮಿಕರನ್ನು ಉಳಿಸುವಾಗ ನಾವು ಜೀವ ಲೆಕ್ಕಿಸಲಿಲ್ಲ. ನಾವು ಬದುಕಿ ಬರುತ್ತೇವೋ ಇಲ್ಲವೋ ಗೊತ್ತಿರಲಿಲ್ಲ. ಈಗ ಅದಕ್ಕೆ ಪ್ರತಿಯಾಗಿ ಸಿಕ್ಕಿದ್ದೇನು? ಬೀದಿಗೆ ಬಿದ್ದಿರುವ ನಾನು ಮತ್ತು ನನ್ನ ಕುಟುಂಬ ಎಲ್ಲಿಗೆ ಹೋಗೋಣ ಎಂದು ವಾಕೀಲ್ ಹಸನ್ ಅವರು ಕಂಬನಿ ಮಿಡಿದದ್ದು ಕೆಲ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!