ಕೂದಲೆಳೆ ಅಂತರದಿಂದ ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಭಾರೀ ಅಪಘಾತದಿಂದ ಪಾರು
ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಚಿರಾಗ್ ಪಾಸ್ವಾನ್ ಅವರ ಹೆಲಿಕಾಪ್ಟರ್ ಬಿಹಾರದ ಉಜಿಯಾರ್‌ಪುರದಲ್ಲಿ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದೆ. ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ಈ ಅವಘಡ ಸಂಭವಿಸಿದ್ದು, ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ನವದೆಹಲಿ: ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ (Chirag Paswan) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬಿಹಾರದ (Bihar) ಉಜಿಯಾರ್‌ಪುರ ಲೋಕಸಭಾ ಕ್ಷೇತ್ರದ ಹೆಲಿಪ್ಯಾಡ್ ಬಳಿ ಸ್ವಲ್ಪದರಲ್ಲೇ ಅಪಘಾತದಿಂದ ಪಾರಾಗಿದೆ. ಲ್ಯಾಂಡಿಂಗ್ ಸಮಯದಲ್ಲಿ ನಡೆದ ದುರಂತದಿಂದ ಪಾರಾದ ಪಾಸ್ವಾನ್ ಮತ್ತು ಅವರ ತಂಡಕ್ಕೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಅವರು ದೊಡ್ಡ ಅವಘಡದಿಂದ ಪಾರಾಗಿದ್ದಾರೆ.
ಈ ಘಟನೆಯು ಹೆಲಿಕಾಪ್ಟರ್ ಸುರಕ್ಷತಾ ಪ್ರೋಟೋಕಾಲ್ಗಳ ಬಗ್ಗೆ ಕಳವಳವನ್ನು ಉಂಟುಮಾಡುವಂತೆ ಮಾಡಿದೆ. ಬಿಹಾರದ ಉಜಿಯಾರ್‌ಪುರ ಲೋಕಸಭಾ ಕ್ಷೇತ್ರದ ಮೊಹದ್ದಿ ನಗರದ ಹೆಲಿಪ್ಯಾಡ್ ಬಳಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತವನ್ನು ಸ್ವಲ್ಪದರಲ್ಲೇ ತಪ್ಪಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಚಿರಾಗ್ ಪಾಸ್ವಾನ್ ಅವರ ಹೆಲಿಕಾಪ್ಟರ್ ನಿಗದಿತ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಆಗುವಾಗ ಈ ಆತಂಕಕಾರಿ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಪೆನ್ಡ್ರೈವ್ ಹಂಚಿಕೆ ಆರೋಪ, ಚುನಾವಣೆ ಜಂಜಾಟದ ಮಧ್ಯೆ ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ ಡಿಕೆ ಸಹೋದರರ ವಾಸ್ತವ್ಯ!
ಒಮ್ಮೆಲೆ ಹೆಲಿಕಾಪ್ಟರ್ ಚಕ್ರಗಳು ಕುಸಿದಿದ್ದರಿಂದ ಕೆಲಕಾಲ ಎಲ್ಲರೂ ಆತಂಕಗೊಂಡಿದ್ದರು. ಇಂತಹ ಕಾರ್ಯಾಚರಣೆಗಳಿಗೆ ಸ್ಥಳದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತದೆ.
Bihar | LJP National President Chirag Paswan’s helicopter narrowly avoided a crash near the helipad in Mohaddi Nagar of Ujiarpur Lok Sabha constituency.
(Source: Chirag Paswan’s Office) pic.twitter.com/GnQEYJ5kf4
— ANI (@ANI) May 9, 2024
ಅದೃಷ್ಟವಶಾತ್, ಯಾರಿಗೂ ಯಾವುದೇ ರೀತಿಯ ಗಾಯಗಳು ವರದಿಯಾಗಿಲ್ಲ. ಚಿರಾಗ್ ಪಾಸ್ವಾನ್ ಮತ್ತು ಅವರ ತಂಡದವರು ಸುರಕ್ಷಿತವಾಗಿದ್ದಾರೆ. ಅದೇನೇ ಇದ್ದರೂ, ಈ ಘಟನೆಯು ಹೆಲಿಕಾಪ್ಟರ್ ಪ್ರಯಾಣಕ್ಕೆ ಸಂಬಂಧಿಸಿದ ಅಪಾಯಗಳನ್ನು ಒತ್ತಿಹೇಳುತ್ತದೆ. ವಿಶೇಷವಾಗಿ ಲ್ಯಾಂಡಿಂಗ್ ಮತ್ತು ಟೇಕ್‌ಆಫ್‌ನಂತಹ ನಿರ್ಣಾಯಕ ಕ್ಷಣಗಳಲ್ಲಿ ಎಚ್ಚರ ವಹಿಸುವುದು ಎಷ್ಟು ಅಗತ್ಯವೆಂಬ ಚರ್ಚೆ ಶುರುವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ