Loan Moratorium: ಸುಪ್ರೀಂಕೋರ್ಟ್​ನಲ್ಲಿ ಮಾರ್ಚ್ 23ಕ್ಕೆ ಸಾಲ ವಿನಾಯಿತಿ ಪ್ರಕರಣದ ತೀರ್ಪು

ಸುಪ್ರೀಂಕೋರ್ಟ್​ನಿಂದ ಮಾರ್ಚ್ 23ನೇ ತಾರೀಕಿನ ಮಂಗಳವಾರದಂದು ಸಾಲ ವಿನಾಯಿತಿ ಪ್ರಕರಣದ (Loan Moratorium) ತೀರ್ಪನ್ನು ನೀಡುವ ಸಾಧ್ಯತೆ ಇದೆ ಎಂದು ಎಎನ್​ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

Loan Moratorium: ಸುಪ್ರೀಂಕೋರ್ಟ್​ನಲ್ಲಿ ಮಾರ್ಚ್ 23ಕ್ಕೆ ಸಾಲ ವಿನಾಯಿತಿ ಪ್ರಕರಣದ ತೀರ್ಪು
ಸುಪ್ರೀಂ ಕೋರ್ಟ್​
Follow us
Srinivas Mata
| Updated By: ganapathi bhat

Updated on:Mar 22, 2021 | 9:25 PM

ಸಾಲ ವಿನಾಯಿತಿ (Loan Moratorium) ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರ (ಮಾರ್ಚ್ 23) ನೀಡಲಾಗುತ್ತದೆ ಎಂದು ಎಎನ್​ಐ ಸುದ್ದಿಸಂಸ್ಥೆಯು ವರದಿ ಮಾಡಿದೆ. ಕೋವಿಡ್​- 19 ಲಾಕ್​ಡೌನ್ ಸಂದರ್ಭದಲ್ಲಿ ಎದುರಾದ ಕಷ್ಟದ ಸನ್ನಿವೇಶವನ್ನು ದಾಟಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಮೊದಲಿಗೆ ಮಾರ್ಚ್ 1, 2020ರಿಂದ ಮೇ 31, 2020 ಹಾಗೂ ಆನಂತರ ಆಗಸ್ಟ್ 31, 2020ರ ತನಕ ಸಾಲದ ಮೇಲಿನ ಕಂತು ಪಾವತಿಯಿಂದ ಸಾಲಗಾರರಿಗೆ ವಿನಾಯಿತಿ ನೀಡುವಂತೆ ಸಂಸ್ಥೆಗಳಿಗೆ ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ) ಸೂಚಿಸಿತ್ತು. 

ಇದಾದ ಮೇಲೆ ಸಾಲವನ್ನು ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಎನ್​ಪಿಎ) ಎಂದು ಪರಿಗಣಿಸದೆ ಒಂದು ಬಾರಿಯ ಮರುಹೊಂದಾಣಿಕೆಗೂ ಅವಕಾಶ ನೀಡುವಂತೆ ತಿಳಿಸಿತ್ತು. ಆದರೆ ಅದು ಮಾರ್ಚ್ 1, 2020ಕ್ಕೆ ಯಾವ ವೈಯಕ್ತಿಕ ಖಾತೆದಾರರು ಅಥವಾ ಕಂಪೆನಿಯ ಸಾಲ ಖಾತೆಯು 30 ದಿನಗಳಿಗೆ ಹೆಚ್ಚಿಗೆ ಆಗದಂತೆ ಬಾಕಿ ಇದ್ದಲ್ಲಿ ಈ ಒಂದು ಸಲದ ಮರುಹೊಂದಾಣಿಕೆಗೆ ಅರ್ಹರಿದ್ದರು. ಬ್ಯಾಂಕ್​ಗಳು ಡಿಸೆಂಬರ್ 31, 2020ರೊಳಗೆ ತೀರುವಳಿ ಯೋಜನೆಯನ್ನು ತಂದು, 2021ರ ಜೂನ್ 30ರ ತನಕ ಜಾರಿ ಮಾಡಬಹುದಾಗಿದೆ.

ಇನ್ನು ವೈಯಕ್ತಿಕ ಸಾಲಗಾರರಿಗೆ ಡಿಸೆಂಬರ್ 31, 2020ರೊಳಗೆ ತೀರುವಳಿ ಯೋಜನೆಯನ್ನು ತಂದು, 90 ದಿನದೊಳಗಾಗಿ ಅದು ಅನ್ವಯಿಸಬೇಕಿತ್ತು. ಆದರೆ ಈ ಸಾಲ ಖಾತೆಯು ಸ್ಟ್ಯಾಂಡರ್ಡ್ ಆಗಿದ್ದು, ಮಾರ್ಚ್ 1, 2020ಕ್ಕೆ ಸಾಲ ಉಳಿಸಿಕೊಂಡಿರುವುದು 30 ದಿನಕ್ಕೆ ಮೀರಿರಬಾರದು. ಆಗಸ್ಟ್ 31, 2020ಕ್ಕೆ ಅನ್ವಯ ಆಗುವಂತೆ ಶೇಕಡಾ 26.6ರಷ್ಟು ಬ್ಯಾಂಕಿಂಗೇತರ ಸಂಸ್ಥೆಗಳ ಗ್ರಾಹಕರು ಸಾಲ ಪಾವತಿ ವಿನಾಯಿತಿ ಪಡೆದಿದ್ದರೆ, ಒಟ್ಟಾರೆಯಾಗಿ ಸಾಲ ಬಾಕಿ ಉಳಿಸಿಕೊಂಡವರಲ್ಲಿ ಶೇ 44.9ರಷ್ಟು ವಿನಾಯಿತಿ ಪಡೆದಿದ್ದರು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಬ್ಯಾಂಕ್​ಗಳಿಗೆ ಬಡ್ಡಿ ಮನ್ನಾ ಹೊರೆ ಭರಿಸುವುದು ಅಸಾಧ್ಯ: ಸುಪ್ರೀಂಗೆ ವಿವರ ಸಲ್ಲಿಸಿದ ಕೇಂದ್ರ

Published On - 9:20 pm, Mon, 22 March 21