ಬಿಜೆಪಿಯು ಹೊಸ ರಾಜಕೀಯ ಸಮೀಕರಣಕ್ಕೆ ಭಾಷ್ಯ ಬರೆಯಲು ಮುಂದಾಗಿರುವ ತಮಿಳುನಾಡಿನಲ್ಲಿ ನಾಳೆ ಮತದಾನ

ತಮಿಳುನಾಡಿನಲ್ಲಿ ಏಪ್ರಿಲ್​ 19ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. 2019ರ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಕೂಟ 38 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅದೇ ಫಲಿತಾಂಶ ಪುನರಾವರ್ತನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಜತೆಗೆ ರಾಜಕೀಯ ಸಮೀಕರಣಕ್ಕೆ ಹೊಸ ಭಾಷ್ಯ ಬರೆಯಲು ಸಿದ್ಧತೆ ನಡೆಸಿದ್ದಾರೆ.

ಬಿಜೆಪಿಯು ಹೊಸ ರಾಜಕೀಯ ಸಮೀಕರಣಕ್ಕೆ ಭಾಷ್ಯ ಬರೆಯಲು ಮುಂದಾಗಿರುವ ತಮಿಳುನಾಡಿನಲ್ಲಿ ನಾಳೆ ಮತದಾನ
ನರೇಂದ್ರ ಮೋದಿ, ಅಣ್ಣಾಮಲೈ
Image Credit source: ABP Live

Updated on: Apr 18, 2024 | 2:47 PM

ಲೋಕಸಭಾ ಚುನಾವಣೆ(Lok Sabha Election)ಗೆ ತಮಿಳುನಾಡು(Tamil Nadu) ಸಜ್ಜಾಗಿದೆ. ಏಪ್ರಿಲ್​ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎಐಎಡಿಎಂಕೆ, ಡಿಎಂಕೆ ಪ್ರಾಬಲ್ಯ ಇರುವ ಈ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ( K Annamalai) ಕಾರ್ಯವೈಖರಿಯಿಂದಾಗಿ ಭರವಸೆ ಮೂಡಿದೆ. ರಾಜ್ಯದ 39 ಲೋಕಸಭಾ ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, 950 ಅಭ್ಯರ್ಥಿಗಳ ಭವಿಷ್ಯವನ್ನು ಸುಮಾರು 6.23 ಕೋಟಿ ಮತದಾರರು ನಿರ್ಧರಿಸಲಿದ್ದು, ಸುಮಾರು 68,000 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಹಲವು ಬಾರಿ ತಮಿಳುನಾಡಿಗೆ ಭೇಟಿ ನೀಡಿ, ಪ್ರಚಾರವನ್ನು ನಡೆಸಿದ್ದಾರೆ.
ತಮಿಳುನಾಡಿನಲ್ಲಿ ಪ್ರಬಲವಾಗಿರುವುದು ದ್ರಾವಿಡ ಪಕ್ಷಗಳೇ ಆಗಿದ್ದರೂ, ಕಾಂಗ್ರೆಸ್​ ಅಲ್ಪಸ್ವಲ್ಪ ನೆಲೆ ಕಂಡಿದೆ. ಬಿಜೆಪಿ ನೆಲೆ ಕಂಡುಕೊಳ್ಳಲು ಹರಸಾಹಸಪಡುತ್ತಿದೆ. ಇದೇ ಮೊದಲ ಬಾರಿಗೆ ಬಾರಿಗೆ ಡಿಎಂಕೆ- ಎಐಎಡಿಎಂಕೆ- ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

370 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿ ಹೊಂದಿರುವ ಬಿಜೆಪಿಗೆ ದಕ್ಷಿಣದ ರಾಜ್ಯಗಳನ್ನು ಗುರಿಯಾಗಿಸಿದೆ. ಕನಿಷ್ಠ 50 ರಿಂದ 60 ಕ್ಷೇತ್ರದ ಮೇಲೆ ಗುರಿ ಇಟ್ಟಿರುವ ಬಿಜೆಪಿ, ತಮಿಳುನಾಡಿನಲ್ಲಿ ಕನಿಷ್ಠ 10 ಸ್ಥಾನ ಗಳಿಸುವ ಇರಾದೆಯಲ್ಲಿದೆ. ಕೊಯಮತ್ತೂರು, ಪಶ್ಚಿಮ ತಮಿಳುನಾಡಿನ ಕೇಂದ್ರಬಿಂದುವಾಗಿದ್ದು, ರಾಜ್ಯದಲ್ಲಿ ಅತ್ಯಂತ ಕುತೂಹಲಕಾರಿ ಕ್ಷೇತ್ರವಾಗಿದೆ.

ಬಿಜೆಪಿಯ ಅಣ್ಣಾಮಲೈ ಡಿಎಂಕೆ, ಎಐಎಡಿಎಂಕೆ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು ಹವಣಿಸುತ್ತಿದ್ದಾರೆ.
2019ರ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಕೂಟ 38 ಕ್ಷೇತ್ರಗಳಲ್ಲಿಗೆಲುವು ಸಾಧಿಸಿತ್ತು. ಅದೇ ಫಲಿತಾಂಶ ಪುನರಾವರ್ತನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.

ಮತ್ತಷ್ಟು ಓದಿ: Lok Sabha Elections 2024: ಲೋಕಸಭಾ ಚುನಾವಣೆ, ನಾಳೆ 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಅವರ ಪ್ರಚಾರವು ಉತ್ತಮ ಫಲಿತಾಂಶ ನೀಡಬಹುದು ಎಂದು ನಂಬಲಾಗಿದೆ, ಅವರು ಚೆನ್ನೈ, ಕೊಯಮತ್ತೂರು, ವೆಲ್ಲೂರು ಮತ್ತು ತಿರುನಲ್ವೇಲಿಯಲ್ಲಿ ಪ್ರಚಾರ ನಡೆಸಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿಯೊಬ್ಬರು ತಮಿಳುನಾಡಿಗೆ ಒಂಬತ್ತು ಬಾರಿ ಭೇಟಿ ನೀಡಿದ್ದಾರೆ.

ಪ್ರಮುಖ ಕ್ಷೇತ್ರಗಳು
ಕೊಯಮತ್ತೂರು, ತೂತುಕುಡಿ, ಚೆನ್ನೈ ಕೇಂದ್ರ, ಕನ್ಯಾಕುಮಾರಿ, ಕೃಷ್ಣಗಿರಿ, ನೀಲಗಿರಿ, ಶಿವಗಂಗಾ, ಶ್ರೀಪೆರಂಬದೂರು, ಥೆಣಿ, ವಿಲ್ಲುಪುರಂ, ರಾಮನಾಥಪುರಂ, ವಿರುಧನಗರ, ಚೆನ್ನೈ ಉತ್ತರ

ಕಣಲ್ಲಿರುವ ಪ್ರಮುಖ ಅಭ್ಯರ್ಥಿಗಳು
ತಮಿಳ್​ಸಾಯಿ ಸೌಂದರ್‌ರಾಜನ್‌ (ಬಿಜೆಪಿ), ಪನ್ನೀರ್‌ಸೆಲಂ (ಪಕ್ಷೇತರ), ದಯಾನಿಧಿ ಮಾರನ್‌ (ಡಿಎಂಕೆ) ಎಲ್‌.ಮುರುಗನ್‌ (ಬಿಜೆಪಿ), ಅತ್ರಾಳ್‌ ಅಶೋಕ್‌ ಕುಮಾರ್‌ (ಎಐಎಡಿಎಂಕೆ), ಕನಿಮೊಳಿ (ಡಿಎಂಕೆ), ಕೆ.ಅಣ್ಣಮಲೈ (ಕೊಯಮತ್ತೂರು), ಕಾರ್ತಿಚಿದಂಬರಂ (ಕಾಂಗ್ರೆಸ್‌), ಜಯಪ್ರಕಾಶ್‌ (ಎಐಎಡಿಎಂಕೆ).

2019ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಡಿಎಂಕೆ 2024ರಲ್ಲೂ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಬಿಜೆಪಿಯು ಹೊಸ ರಾಜಕೀಯ ಸಮೀಕರಣಕ್ಕೆ ಭಾಷ್ಯ ಬರೆಯುವ ಪ್ರಯತ್ನ ಮಾಡುತ್ತಿದೆ. ಜನವರಿ 4ರಂದು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us