AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi 3.0 Cabinet: ಬಿಜೆಪಿ ಕೈಯಲ್ಲೇ ಉಳಿಯಲಿದೆ ಈ ನಾಲ್ಕು ಪ್ರಮುಖ ಖಾತೆಗಳು

4 ಪ್ರಮುಖ ಖಾತೆಗಳು ಬಿಜೆಪಿ ಕೈಯಲ್ಲೇ ಇರಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳು ಸೇರಿದಂತೆ ಎಲ್ಲಾ ನಾಲ್ಕು ಪ್ರಮುಖ ಸಚಿವಾಲಯಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಇದೆ ಎಂದು ಹೇಳಲಾಗುತ್ತಿದೆ.

Modi 3.0 Cabinet: ಬಿಜೆಪಿ ಕೈಯಲ್ಲೇ ಉಳಿಯಲಿದೆ ಈ ನಾಲ್ಕು ಪ್ರಮುಖ ಖಾತೆಗಳು
ನರೇಂದ್ರ ಮೋದಿ
ನಯನಾ ರಾಜೀವ್
|

Updated on:Jun 09, 2024 | 3:19 PM

Share

ಲೋಕಸಭಾ ಚುನಾವಣೆ(Lok Sabha Election) ಮುಗಿದು ಬಿಜೆಪಿ ನೇತೃತ್ವದ ಎನ್​ಡಿ ಸರ್ಕಾರ ಬಹುಮತವನ್ನು ಪಡೆದುಕೊಂಡಿದೆ. ಇಂದು ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಗೆಯೇ 4 ಪ್ರಮುಖ ಖಾತೆಗಳು ಬಿಜೆಪಿ ಕೈಯಲ್ಲೇ ಇರಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳು ಸೇರಿದಂತೆ ಎಲ್ಲಾ ನಾಲ್ಕು ಪ್ರಮುಖ ಸಚಿವಾಲಯಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಇದೆ ಎಂದು ಹೇಳಲಾಗುತ್ತಿದೆ.

ಈ ನಾಲ್ಕು ಪ್ರಮುಖ ಖಾತೆಗಳನ್ನು ಹೊರತುಪಡಿಸಿ, ಬಿಜೆಪಿ ರೈಲ್ವೆ, ರಸ್ತೆ ಸಾರಿಗೆ, ಕಾನೂನು, ಮಾಹಿತಿ ತಂತ್ರಜ್ಞಾನ ಮತ್ತು ಶಿಕ್ಷಣದಂತಹ ಇತರ ಕೆಲವು ಪ್ರಮುಖ ಸಚಿವಾಲಯಗಳನ್ನು ತಾವೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಕಳೆದ ಸಚಿವ ಸಂಪುಟದ 10 ಸಚಿವರು ಪುನರಾವರ್ತನೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮಿತ್ ಶಾ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಎಸ್ ಜೈಶಂಕರ್, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ಹರ್ದೀಪ್ ಸಿಂಗ್ ಪುರಿ ಮತ್ತು ಅಶ್ವಿನಿ ವೈಷ್ಣವ್ ಅವರು ಕೇಂದ್ರ ಸಚಿವರಾಗಿಯೇ ಮುಂದುವರಿಯಲಿದ್ದು, ಅನುರಾಗ್ ಠಾಕೂರ್ ಅವರನ್ನು ಕೈಬಿಡಲಾಗುತ್ತಿದೆ ಎನ್ನುವ ಮಾಹಿತಿಯೂ ಕೇಳಿಬಂದಿದೆ.

ಮತ್ತಷ್ಟು ಓದಿ: ಮೋದಿ ಸಂಪುಟ ಸೇರಲು ಅನುಪ್ರಿಯಾ, ಚಿರಾಗ್​, ಜಯಂತ್ ಸೇರಿ ಹಲವರಿಗೆ ಕರೆ

ಮೂಲಗಳ ಪ್ರಕಾರ, ಒಂದು ಡಜನ್‌ಗಿಂತಲೂ ಹೆಚ್ಚು ಬಿಜೆಪಿ ಸಂಸದರನ್ನು ಮಂತ್ರಿ ಪರಿಷತ್ತಿನಲ್ಲಿ ಹೆಸರಿಸಲಾಗಿದೆ ಮತ್ತು ಇನ್ನೊಂದು ಡಜನ್ ಮಿತ್ರಪಕ್ಷಗಳಿಂದ ಬಂದವರು. ಈ ಪಟ್ಟಿಯಲ್ಲಿ ಹೊಸ ಮುಖಗಳು ಮತ್ತು ಹಲವಾರು ಮಹಿಳೆಯರು ಸೇರಿದ್ದಾರೆ.

ನ್ಯೂಸ್​ 18 ವರದಿ ಮಾಡಿದಂತೆ ನಿತೀಶ್ ಕುಮಾರ್ ನೇತೃತ್ವದ JD(U) ಒಂದು ಕ್ಯಾಬಿನೆಟ್ ಸ್ಥಾನ ಮತ್ತು ಒಬ್ಬ ರಾಜ್ಯ ಸಚಿವ (MoS) ಪಡೆಯಲು ಸಿದ್ಧವಾಗಿದೆ ಎಂದು ತಿಳಿಸಿವೆ.

ತೆಲುಗು ದೇಶಂ ಪಕ್ಷದ (ಟಿಡಿಪಿ) ಹೊಸದಾಗಿ ಚುನಾಯಿತರಾದ ಇಬ್ಬರು ಸಂಸದರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಲು ಸಿದ್ಧರಾಗಿದ್ದಾರೆ. ಈ ಚುನಾವಣೆಯಲ್ಲಿ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾದ ಚಂದ್ರಶೇಖರ್ ಪೆಮ್ಮಸಾನಿ ಅವರು ಇಂದು ಕೇಂದ್ರ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಟಿಡಿಪಿ ಇಂದು ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:19 pm, Sun, 9 June 24