ಕಾಂಗ್ರೆಸ್ ಸರ್ಕಾರ ಹಿಮಾಚಲ ಪ್ರದೇಶ(Himacha Pradesh)ದ ಜನತೆಗೆ ಏನನ್ನೂ ಮಾಡಿಲ್ಲ, ಬದಲಾಗಿ ಎಲ್ಲವನ್ನೂ ಲೂಟಿ ಮಾಡಿದೆ ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ನಗೆಪಾಟಲಿಗೀಡಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್(Anurag Thakur)) ಹೇಳಿದ್ದಾರೆ. ಹಿಮಾಚಲಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರನ್ನು ಅನುರಾಗ್ ಟೀಕಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸುಖು ವಿಫಲರಾಗಿದ್ದಾರೆ ಹಿಮಾಚಲ ಪ್ರದೇಶದಲ್ಲಿ ಇತ್ತೀಚಿನ ಪ್ರವಾಹ ಪರಿಸ್ಥಿತಿಯನ್ನು ಕೂಡ ರಾಜಕೀಯಗೊಳಿಸಿದ್ದಾರೆ ಎಂದು ಆರೋಪಿಸಿದರು.
ಮೋದಿ ಸರ್ಕಾರವು ಶೌಚಾಲಯಗಳು, ಉಚಿತ ಧಾನ್ಯಗಳು, ಗ್ಯಾಸ್ ಸಿಲಿಂಡರ್ಗಳನ್ನು ಒದಗಿಸಿದ್ದರಿಂದ ಮಹಿಳೆಯರಿಗೆ ಪ್ರಧಾನಿ ಮೇಲೆ ಸಂಪೂರ್ಣ ನಂಬಿಕೆ ಇದೆ. ಮಹಿಳೆಯರಿಗೆ ಸಂತೋಷ ಹಾಗೂ ಶಕ್ತಿಯನ್ನು ಒದಗಿಸುವ ಸೌಲಭ್ಯಗಳನ್ನು ಪ್ರಧಾನಿ ಒದಗಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಜೂನ್ 1 ರಂದು ಏಳನೇ ಹಂತದಲ್ಲಿ ಮತದಾನ ನಡೆಯಲಿದೆ. ಹಿಮಾಚಲ ಪ್ರದೇಶ, ಕಂಗ್ರಾ, ಶಿಮ್ಲಾ, ಮಂಡಿ ಮತ್ತು ಹಮೀರ್‌ಪುರದ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ.
ಮತ್ತಷ್ಟು ಓದಿ: Lok Sabha Election: ಪ್ರಧಾನಿ ಮೋದಿ ಸೇರಿ ಏಳನೇ ಹಂತದ ಚುನಾವಣಾ ಕಣದಲ್ಲಿರುವ ದಿಗ್ಗಜರು ಯಾರ್ಯಾರು?
ಕೇಂದ್ರ ಸಚಿವ ಮತ್ತು ಹಮೀರ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್‌ನ ಸತ್ಪಾಲ್ ರೈಜಾದಾ ಅವರನ್ನು ಎದುರಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ನಾಯಕರ ಮಾತು ಪಾಕಿಸ್ತಾನಕ್ಕೂ ತಲುಪಿದೆ.
ಅನುರಾಗ್ ಠಾಕೂರ್ ಅವರು ವಿರೋಧ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಕೆಲವರು ಭಾರತದಲ್ಲಿ ವಾಸಿಸುತ್ತಿದ್ದಾರೆ ಆದರೆ ಅವರ ಹೃದಯವು ಪಾಕಿಸ್ತಾನಕ್ಕಾಗಿ ಮಿಡಿಯುತ್ತದೆ ಎಂದು ಹೇಳಿದರು. ಪಾಕಿಸ್ತಾನದ ಕೆಲವರು ಭಾರತದ ವಿರೋಧ ಪಕ್ಷದ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ, ಕೇಜ್ರಿವಾಲ್ ಗೆದ್ದರೆ ಪಾಕಿಸ್ತಾನಕ್ಕೆ ಖುಷಿ
ವಿರೋಧ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಅನುರಾಗ್ ಠಾಕೂರ್, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿಯಂತಹವರು ಗೆದ್ದರೆ ಪಾಕಿಸ್ತಾನಕ್ಕೆ ಸಂತೋಷವಾಗುತ್ತದೆ ಆದರೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಭಾರತ ಉತ್ತಮ ಬಾಂಧವ್ಯ ಬಯಸಿದೆ
ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ, ಅನುರಾಗ್ ಠಾಕೂರ್, ಭಾರತವು ಯಾವಾಗಲೂ ನೆರೆಯ ರಾಷ್ಟ್ರವಾಗಿ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ ಆದರೆ ಪ್ರತಿ ಬಾರಿಯೂ ದ್ರೋಹವಿದೆ ಎಂದು ಹೇಳಿದರು. ಕಾಂಗ್ರೆಸ್‌ನನ್ನೇ ಗುರಿಯಾಗಿಟ್ಟುಕೊಂಡು, ಕಾಂಗ್ರೆಸ್‌ನವರು ಗಡಿಯನ್ನು ತೆರೆಯಲು ಬಯಸುತ್ತಾರೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ