Lok Sabha Election: ಬಿಜೆಪಿಗೆ ಜೂನ್​ 4ರಂದೇ ಅಂತಿಮ ಬೀಳ್ಕೊಡುಗೆ: ಅಖಿಲೇಶ್​ ಯಾದವ್

|

Updated on: May 26, 2024 | 11:37 AM

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ದಿನವೇ ಬಿಜೆಪಿಗೆ ಅಂತಿಮ ಬೀಳ್ಕೊಡುಗೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್​ ಯಾದವ್ ಭವಿಷ್ಯ ನುಡಿದಿದ್ದಾರೆ.

Lok Sabha Election: ಬಿಜೆಪಿಗೆ ಜೂನ್​ 4ರಂದೇ  ಅಂತಿಮ ಬೀಳ್ಕೊಡುಗೆ: ಅಖಿಲೇಶ್​ ಯಾದವ್
ಅಖಿಲೇಶ್​ ಯಾದವ್
Follow us on

2024ರ ಲೋಕಸಭೆ ಚುನಾವಣೆ(Lok Sabha Election)ಯಲ್ಲಿ ಭಾರತೀಯ ಜನತಾ ಪಕ್ಷ ಹೀನಾಯ ಸೋಲನ್ನು ಎದುರಿಸಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್(Akhilesh Yadav) ಹೇಳಿದ್ದಾರೆ. ಜೂನ್​ 4ರಂದು ಬಿಜೆಪಿಗೆ ಅಂತಿಮ ಬೀಳ್ಕೊಡುಗೆ ನೀಡಲಾಗುತ್ತದೆ. ಆ ದಿನ ಹಲವು ಮಂದಿಗೆ ಸ್ವಾತಂತ್ರ್ಯದ ದಿನವಾಗಲಿದೆ ಎಂದು ಅಖಿಲೇಶ್​ ಹೇಳಿದ್ದಾರೆ.

ಟೈಮ್ಸ್​ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಖಿಲೇಶ್​, ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ಮಿತ್ರಪಕ್ಷವಾಗಿ, ಅಖಿಲೇಶ್ ಯಾದವ್ ಚುನಾವಣಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ವಾತಾವರಣವನ್ನು ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ.

ಹಿಂದುಳಿದ ದಲಿತ ಅಲ್ಪಸಂಖ್ಯಾತರು ಅಂದರೆ ಇಂಡಿಯಾ ಬ್ಲಾಕ್ ಮತ್ತು ಎಸ್‌ಪಿಯ ಪಿಡಿಎ ಸೂತ್ರವು ಎನ್‌ಡಿಎಗಿಂತ ಮೇಲುಗೈ ಸಾಧಿಸಲಿದೆ ಎಂದು ಅಖಿಲೇಶ್ ಹೇಳಿಕೊಂಡಿದ್ದಾರೆ. ನಿಮ್ಮ ರಾಜಕೀಯ ಆಕಾಂಕ್ಷೆಗಳ ಲಕ್ನೋಗೆ ಸೀಮಿತ ಎಂದು ಹೇಳುತ್ತಾ ಬಂದಿದ್ದೀರಿ, ಈಗ ಬದಲಾವಣೆ ಆಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಲಕ್ನೋ ಎಂದೂ ಲಕ್ನೋ ಆಗಿಯೇ ಉಳಿಯುತ್ತದೆ. ಲಕ್ನೋವನ್ನು ಯಾರು ತೊರೆಯುತ್ತಾರೆ? ದೆಹಲಿಗೆ ಹಾರಿದವರು ಲಕ್ನೋಗೆ ಮರಳಲೇಬೇಕು ಎಂದರು.

ಮತ್ತಷ್ಟು ಓದಿ: Lok Sabha Polls: ಜನ 140 ಸೀಟುಗಳಿಗೂ ಬಿಜೆಪಿ ಪರದಾಡುವಂತೆ ಮಾಡುತ್ತಾರೆ; ಅಖಿಲೇಶ್ ಯಾದವ್ ವಿಶ್ವಾಸ

ಮತದಾರರ ಗಮನ ಸೆಳೆಯಲು ಇಂಡಿಯಾ ಮೈತ್ರಿಕೂಟಕ್ಕೆ ಅನುಕೂಲವಾದ ಅಂಶಗಳ ಬಗ್ಗೆ ಪ್ರಶ್ನಿಸಿದಾಗ ಬಿಜೆಪಿಯ ಸುಳ್ಳು ಅತಿಹೆಚ್ಚು ಕೆಲಸ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅದರ ಸಾಧನೆ ಶೂನ್ಯ. ಅವರಿಗೆ ರಾಜಕೀಯ ವಿಶ್ವಾಸಾರ್ಹತೆ ಉಳಿದಿಲ್ಲ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿದೆ. ಉತ್ತರ ಪ್ರದೇಶದ 7 ವರ್ಷಗಳನ್ನು ಅದಕ್ಕೆ ಸೇರಿಸಿ, ಅವರು ನೀಡಿದ ಹೇಳಿಕೆಗಳು 17 ವರ್ಷಗಳಲ್ಲಿ ಸುಳ್ಳು ಎನ್ನುವುದು ಸಾಬೀತಾಗಿದೆ ಎಂದು ಹೇಳಿದರು.

ಹಲವು ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದು, ಕೆಲ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ಹೊರಹೋಗಿವೆ. ಈ ಅನುಭವಗಳು ಭವಿಷ್ಯದಲ್ಲಿ ನಮಗೆ ಮೈತ್ರಿಕೂಟವನ್ನು ಉತ್ತಮವಾಗಿ ನಿಭಾಯಿಸಲು ನೆರವಾಗಲಿದೆ. ಇಂಡಿಯಾ ಮೈತ್ರಿಕೂಟದ ಹಲವು ಮಂದಿ ನಾಯಕರು ಸಭೆಗಳನ್ನು ಹಾಗೂ ಸುಧೀರ್ಘ ಚರ್ಚೆಗಳನ್ನು ನಡೆಸಿರುವುದು ನಮ್ಮ ಬಂಧವನ್ನು ಬೆಳೆಸಲು ನೆರವಾಗಲಿದೆ ಎಂದು ಸಮರ್ಥಿಸಿಕೊಂಡರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ