AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MARD: ಪುರುಷರ ಹಕ್ಕಿಗಾಗಿ ಚುನಾವಣಾ ಕಣಕ್ಕಿಳಿದ ಪಕ್ಷವಿದು

Lok Sabha Elections 2024: ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ಎಂಎಆರ್​ಡಿ ಪಕ್ಷವು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. MARD ಪಕ್ಷವು ಈ ಹಿಂದೆ ಏಳು ವಿಭಿನ್ನ ಚುನಾವಣೆಗಳಲ್ಲಿ ಸ್ಪರ್ಧಿಸಿದೆ - 2019 ರಲ್ಲಿ ವಾರಾಣಸಿ ಮತ್ತು ಲಕ್ನೋದಲ್ಲಿ ಲೋಕಸಭೆ ಚುನಾವಣೆಗಳು, 2020 ರಲ್ಲಿ ಬಂಗಾರ್ಮೌ ಅಸೆಂಬ್ಲಿ ಸ್ಥಾನದ ಉಪಚುನಾವಣೆ, ಬರೇಲಿ, ಲಕ್ನೋ ಉತ್ತರ, ಬಕ್ಷಿ ಕಾ ತಾಲಾಬ್(ಲಕ್ನೋ)ಮತ್ತು 2022 ರಲ್ಲಿ ಚೌರಿ ಚೌರಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದೆ.

MARD: ಪುರುಷರ ಹಕ್ಕಿಗಾಗಿ ಚುನಾವಣಾ ಕಣಕ್ಕಿಳಿದ ಪಕ್ಷವಿದು
Image Credit source: TV9 Bharatvarsh
ನಯನಾ ರಾಜೀವ್
|

Updated on:Apr 29, 2024 | 2:20 PM

Share

ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿ, ಮೇರಾ ಅಧಿಕಾರ್ ರಾಷ್ಟ್ರೀಯ ದಳ (MARD) ಪಕ್ಷಕ್ಕೆ, ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಸೋಲುವುದು ಮುಖ್ಯವಲ್ಲ, ಈ ಪಕ್ಷವು ಕೇವಲ ಪುರುಷರ ಧ್ವನಿಯಾಗಲು ಮತ್ತು ಪುರುಷರ ಗೌರವವನ್ನು ಕಾಪಾಡಲು ಚುನಾವಣಾ ಕಣಕ್ಕೆ ಇಳಿದಿದೆ. ಪಕ್ಷ 2018 ರಲ್ಲಿ ರಚನೆಯಾದಾಗಿನಿಂದ ಸ್ಪರ್ಧಿಸಿದ ಎಲ್ಲಾ ಸ್ಥಾನಗಳಲ್ಲಿ ತನ್ನ ಠೇವಣಿಗಳನ್ನು ಕಳೆದುಕೊಂಡಿದೆ, ಆದರೆ ಅದರ ನಾಯಕರು ಚುನಾವಣಾ ಸೋಲಿನ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ಪಕ್ಷವು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಎಂಎಆರ್​ಡಿ ಪಕ್ಷವು ಈ ಹಿಂದೆ ಏಳು ವಿಭಿನ್ನ ಚುನಾವಣೆಗಳಲ್ಲಿ ಸ್ಪರ್ಧಿಸಿದೆ – 2019 ರಲ್ಲಿ ವಾರಾಣಸಿ ಮತ್ತು ಲಕ್ನೋದಲ್ಲಿ ಲೋಕಸಭೆ ಚುನಾವಣೆಗಳು, 2020 ರಲ್ಲಿ ಬಂಗಾರ್ಮೌ ಅಸೆಂಬ್ಲಿ ಸ್ಥಾನದ ಉಪಚುನಾವಣೆ, ಬರೇಲಿ, ಲಕ್ನೋ ಉತ್ತರ, ಬಕ್ಷಿ ಕಾ ತಾಲಾಬ್ (ಲಖನೌ) ಮತ್ತು 2022 ರಲ್ಲಿ ಚೌರಿ ಚೌರಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದೆ.

ಎಂಎಆರ್​ಡಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶುತೋಷ್ ಕುಮಾರ್ ಪಾಂಡೆ ಮಾತನಾಡಿ, ಪುರುಷರ ಗೌರವಾರ್ಥವಾಗಿ ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಕಿರುಕುಳಕ್ಕೊಳಗಾದ ಮತ್ತು ಶೋಷಣೆಗೊಳಗಾದ ಜನರ ಪರವಾಗಿ ಧ್ವನಿ ಎತ್ತಲು ನಾವು ಕ್ಷೇತ್ರಕ್ಕೆ ಬಂದಿದ್ದೇವೆ.

ಮತ್ತಷ್ಟು ಓದಿ: Congress Manifesto: ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​, 5 ಯೋಜನೆಗಳ ಘೋಷಣೆ

ಗೆಲುವು ಮತ್ತು ಸೋಲು ನಮಗೆ ಮುಖ್ಯವಲ್ಲ, ಈ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಪ್ರಶ್ನೆ ಕೇಳಿದಾಗ, ಈ ಬಾರಿಯೂ ಠೇವಣಿ ಕಳೆದುಕೊಳ್ಳಬಹುದು’ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿಲ್ಲ ಮತ್ತು ನಾವು ದೇಣಿಗೆಯನ್ನು ಸಹ ತೆಗೆದುಕೊಳ್ಳುವುದಿಲ್ಲ, ನಮ್ಮ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದರು.

ಪಕ್ಷವು ಇದುವರೆ ಲಕ್ನೋ , ರಾಂಚಿ ಹಾಗೂ ಗೋರಖ್​ಪುರ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮಹಿಳೆಯರ ಭದ್ರತೆಯ ಹೆಸರಿನಲ್ಲಿ ಕಿರುಕುಳ ಹಾಗೂ ಶೋಷಣೆಗೆ ಒಳಗಾಗುವರ ಪರವಾಗಿ ಧ್ವನಿ ಎತ್ತಲು ನಾವು ಪುರುಷರ ಪರವಾಗಿ ಹೋರಾಟಕ್ಕೆ ಧುಮುಕಿದ್ದೇವೆ, ಸೋಲು, ಗೆಲುವು ಯಾವುದೂ ಮುಖ್ಯವಲ್ಲ ಎಂದು ಹೇಳಿದ್ದಾರೆ.

ಯಾವುದೇ ನೀತಿ ಅಥವಾ ಕಾನೂನನ್ನು ರೂಪಿಸುವ ಮೊದಲು ಪುರುಷರ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳುವಂತೆ ಪ್ರತ್ಯೇಕ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಪುರುಷರ ಆಯೋಗವನ್ನು ರಚಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

ಇದು ಪುರುಷರ ಆರೋಗ್ಯ, ಭದ್ರತೆ ಹಾಗೂ ಗೌರವವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಪಾಂಡೆ ಹೇಳಿದ್ದಾರೆ. ಮಹಿಳೆಯರಿಗಾಗಿ ರಚಿಸಲಾದ ಕಾನೂನುಗಳಿಂದ ಪುರುಷರನ್ನು ಶೋಷಣೆಯಿಂದ ರಕ್ಷಿಸಲು ಪುರುಷರ ಭದ್ರತಾ ಮಸೂದೆ ತರುವುದಾಗಿ ಭರವಸೆ ನೀಡಿದೆ. ಪುರುಷರಿಗೆ ಜೀವನಾಂಶದ ಹೆಸರಿನಲ್ಲಿ ಕಿರುಕುಳ ನೀಡದಂತೆ ಮಹಿಳೆಯರ ಸ್ವಾವಲಂಬನೆಯನ್ನು ಉತ್ತೇಜಿಸಲು ಪಕ್ಷವು ಭರವಸೆ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:19 pm, Mon, 29 April 24

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ