Lok Sabha Election: ತಾನು ಸತ್ತಿದ್ದೇನೆಂದು ಕಣ್ಣೀರು ಹಾಕುತ್ತಾ ಮತಗಟ್ಟೆಯಿಂದ ಹಿಂದಿರುಗಿದ ಮಹಿಳೆ

ಮಹಿಳೆಯೊಬ್ಬರು ಗಂಟೆಗಟ್ಟಲೆ ಮತಗಟ್ಟೆ ಬಳಿ ನಿಂತಲೂ ಮತದಾನ ಮಾಡಲು ಸಾಧ್ಯವಾಗಲಿಲ್ಲ, ಸರ್ಕಾರದ ದಾಖಲೆಯಲ್ಲಿ ಆಕೆಯ ಹೆಸರೇ ಇರಲಿಲ್ಲ. ಕೇಳಿದಾಗ ನೀವು ಮೃತಪಟ್ಟಿದ್ದೀರಿ ಎಂದು ಇಲ್ಲಿ ಬರೆದಿದೆ ಹಾಗಾಗಿ ನೀವು ಮತದಾನ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಮನೆಗೆ ಕಳುಹಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Lok Sabha Election: ತಾನು ಸತ್ತಿದ್ದೇನೆಂದು ಕಣ್ಣೀರು ಹಾಕುತ್ತಾ ಮತಗಟ್ಟೆಯಿಂದ ಹಿಂದಿರುಗಿದ ಮಹಿಳೆ
ಬಸಂತಿ
Follow us
ನಯನಾ ರಾಜೀವ್
|

Updated on: Apr 19, 2024 | 2:04 PM

ಲೋಕಸಭಾ ಚುನಾವಣೆ(Lok Sabha Election)ಯ ಮೊದಲ ಹಂತದ ಮತದಾನ(Voting) ಆರಂಭವಾಗಿದೆ. ಮತದಾನಕ್ಕೆಂದು ಹೋದ ಮಹಿಳೆಯೊಬ್ಬರು ತಾನು ಸತ್ತಿದ್ದೇನೆ ಎಂದು ಅಳುತ್ತಾ ಹೊರಗೆ ಬಂದಿರುವ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಬಸಂತಿ ದೇವಿ ಮತದಾನಕ್ಕೆಂದು ಹೋಗಿದ್ದರು, ಆಗ ಮತದಾರರ ಪಟ್ಟಿಯಲ್ಲಿ ಮಹಿಳೆಯು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಇದೆ ಹಾಗಾಗಿ ಅವರು ಮತದಾನ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಧುಪಗುರಿ ಪುರಸಭೆಯ 7ನೇ ವಾರ್ಡ್‌ನಲ್ಲಿನ ಪ್ರೌಢಶಾಲೆಯೊಂದರಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಿರುವುದರಿಂದ ಮತ ಹಾಕಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ನಿರಾಕರಿಸಿದ್ದಾರೆ.

ಬಸಂತಿ ಅವರ ಪುತ್ರ  ಮಾತನಾಡಿ ಇಂದು ತಾಯಿ ಒಬ್ಬರೇ ಮತದಾನ ಮಾಡಲು ಹೋಗಿದ್ದರು. ಇಲ್ಲಿ ನಿಮ್ಮ ಹೆಸರಿಲ್ಲ ನೀವು ಸತ್ತಿದ್ದೀರಿ ಎಂದು ಹೇಳಿ ಕಳುಹಿಸಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ತಾಯಿ ಮತಗಟ್ಟೆಯಲ್ಲಿ ನಿಂತಿದ್ದರು. ಆದರೂ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಪ್ರತಿ ಬಾರಿಯೂ ಇಲ್ಲಿ ಮತದಾನ ಮಾಡುತ್ತೇವೆ. ಈ ಬಾರಿ ಏನಾಯಿತು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ನಾನು ಏಳೂವರೆ ಗಂಟೆಗೆ ಮತ ಹಾಕಲು ಹೋಗಿದ್ದೆ, ಆದರೆ, ಬಹಳ ಹೊತ್ತು ಸರದಿಯಲ್ಲಿ ನಿಂತಿದ್ದರೂ ಮತದಾನ ಮಾಡಲು ಸಾಧ್ಯವಾಗಿಲ್ಲ, ಸರ್ಕಾರದ ದಾಖಲೆಯಲ್ಲಿ ಹೆಸರಿಲ್ಲ ಎಂದು ಹೇಳಿದ್ದಾರೆ, ಜಿಲ್ಲಾಧಿಕಾರಿ ಕಚೇರಿಗೂ ಕರೆ ಮಾಡಿದೆ ಆದರೆ ಈಗ ಮನೆಗೆ ಹೋಗಿ ಎಂದು ಹೇಳಿದರು ನಾನು ಸತ್ತಂತೆಯೇ ಭಾಸವಾಗುತ್ತಿದೆ ಎಂದು ಬಸಂತಿ ದೇವಿ ಕಣ್ಣೀರು ಹಾಕಿದರು.

ಮತ್ತಷ್ಟು ಓದಿ: Lok Sabha Elections 2024: ಮಹಾರಾಷ್ಟ್ರದಲ್ಲಿ ಮತ ಚಲಾಯಿಸಿ ಗಮನ ಸೆಳೆದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ

ದೇಶದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಲೋಕಸಭಾ ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಇದಲ್ಲದೇ ಅರುಣಾಚಲ ಪ್ರದೇಶ, ಸಿಕ್ಕಿಂ ಮುಂತಾದ ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ ನಡೆಯುತ್ತಿದೆ.

ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ ಮತ್ತು ಉತ್ತರ ಪ್ರದೇಶದಲ್ಲಿ ಮತದಾನ ನಡೆಯುತ್ತಿದೆ. ಇದಲ್ಲದೇ ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿಯಲ್ಲಿಯೂ ಮತದಾನ ನಡೆಯುತ್ತಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ, ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ