Lok Sabha Elections 2024: ಮಹಾರಾಷ್ಟ್ರದಲ್ಲಿ ಮತ ಚಲಾಯಿಸಿ ಗಮನ ಸೆಳೆದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ

ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ತಮ್ಮ ಮತ ಹಕ್ಕು ಚಲಾಯಿಸಿದರು. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಜ್ಯೋತಿ ತನ್ನ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು. ಎಲ್ಲರೂ ಮತ ಚಲಾಯಿಸುವಂತೆ ಮನವಿ ಮಾಡಿದರು.

Lok Sabha Elections 2024: ಮಹಾರಾಷ್ಟ್ರದಲ್ಲಿ ಮತ ಚಲಾಯಿಸಿ ಗಮನ ಸೆಳೆದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ
ಜ್ಯೋತಿ
Follow us
ನಯನಾ ರಾಜೀವ್
|

Updated on: Apr 19, 2024 | 12:20 PM

ಲೋಕಸಭಾ ಚುನಾವಣೆ(Lok Sabha Election)ಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭಗೊಂಡಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಆಮ್ಗೆ(Jyoti Amge) ಮತ ಚಲಾಯಿಸಿದರು. ಜ್ಯೋತಿ ಅವರು 30ವರ್ಷದವರಾಗಿದ್ದು, 62.8 ಸೆಂ.ಮೀ ಎತ್ತರ ಇದ್ದಾರೆ. ನಾಗ್ಪುರ್ ದ ನಿವಾಸಿಯಾದ ಜ್ಯೋತಿ ಆಮ್ಗೆ ತಮ್ಮ ಪೋಷಕರ ಜೊತೆಗೆ ಮತಗಟ್ಟೆಗೆ ಆಗಮಿಸಿದರು.

ಈ ವೇಳೆ ಅಲ್ಲಿ ಸೇರಿದ್ದ ಜನರು ಅವರನ್ನು ಸಂತೋಷದಿಂದ ಸ್ವಾಗತಿಸಿದರು. ಅಧಿಕಾರಿಗಳು ಕೂಡ ಜವಾಬ್ದಾರಿ ಮೆರೆದ ಜ್ಯೋತಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಜ್ಯೋತಿ ಅವರನ್ನು ವಿಶ್ವದ ಕುಬ್ಜ ಮಹಿಳೆ ಎಂಬುದಾಗಿ ಗಿನ್ನಿಸ್ ಸಂಸ್ಥೆ ಪ್ರಕಟಿಸಿತು.

ನಾನು ಇಂದು ನನ್ನ ಇಡೀ ಕುಟುಂಬದೊಂದಿಗೆ ಬಂದು ಮತ ಹಾಕಿದ್ದೇನೆ. ಪ್ರತಿಯೊಬ್ಬ ಮತದಾರರು ತಮ್ಮ ಮತವನ್ನು ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಏಕೆಂದರೆ ಅದು ನಮ್ಮ ಕರ್ತವ್ಯವಾಗಿದೆ ಎಂದರು. ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ ಮತ್ತು ಉತ್ತರ ಪ್ರದೇಶದಲ್ಲಿ ಮತದಾನ ನಡೆಯುತ್ತಿದೆ.

ಇದಲ್ಲದೇ ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿಯಲ್ಲಿಯೂ ಮತದಾನ ನಡೆಯುತ್ತಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ, ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಜ್ಯೋತಿ ಆಮ್ಗೆ ಯಾರು? ಜ್ಯೋತಿ ಅಮ್ಗೆ ಅವರು 16 ಡಿಸೆಂಬರ್ 1993 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಪ್ರಿಮೊರ್ಡಿಯಲ್ ಡ್ವಾರ್ಫಿಸಂ ಎಂಬ ಆನುವಂಶಿಕ ಅಸ್ವಸ್ಥತೆಯಿಂದಾಗಿ, ಅವರು 62.8 ಸೆಂಟಿಮೀಟರ್ (2 ಅಡಿ 3/4 ಇಂಚು) ಎತ್ತರವನ್ನು ಮಾತ್ರ ಹೊಂದಿದ್ದಾರೆ.

2011 ರಲ್ಲಿ ತನ್ನ 18 ನೇ ಹುಟ್ಟುಹಬ್ಬದ ನಂತರ, ಜ್ಯೋತಿಯನ್ನು ಅಧಿಕೃತವಾಗಿ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳಿಂದ ಘೋಷಿಸಲಾಯಿತು. ಅವರು ಅನೇಕ ಸಾಕ್ಷ್ಯಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವಳು 2009 ರ ಸಾಕ್ಷ್ಯಚಿತ್ರ ಬಾಡಿ ಶಾಕ್: ಟು ಫುಟ್ ಟಾಲ್ ಟೀನ್ ನಲ್ಲಿ ಕಾಣಿಸಿಕೊಂಡಿದ್ದರು. ಅಮೇರಿಕನ್ ಹಾರರ್ ಸ್ಟೋರಿಯಲ್ಲಿಯೂ ಜ್ಯೋತಿ ಕಾಣಿಸಿಕೊಂಡಿದ್ದಾರೆ. 2014 ರಲ್ಲಿ, ಅವರು ಅಮೆರಿಕನ್ ಹಾರರ್ ಸ್ಟೋರಿ: ಫ್ರೀಕ್ ಶೋ ಪಾತ್ರದಲ್ಲಿ (ಮಾ ಪೆಟೈಟ್) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ