ನರೇಂದ್ರ ಮೋದಿ 3ನೇ ಬಾರಿಯೂ ಪ್ರಧಾನಿಯಾಗುವುದರಲ್ಲಿ ಅನುಮಾನವೇ ಇಲ್ಲ; ರಾಜನಾಥ್ ಸಿಂಗ್

|

Updated on: May 11, 2024 | 9:19 PM

ತಿಹಾರ್ ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುವಾಗ, ಬಿಜೆಪಿಯು 75 ವರ್ಷ ವಯಸ್ಸಿನ ನಂತರ ತನ್ನ ನಾಯಕರನ್ನು ನಿವೃತ್ತಿ ಮಾಡುವುದಾಗಿ ಈ ಹಿಂದೆ ಹೇಳಿರುವುದರಿಂದ ನರೇಂದ್ರ ಮೋದಿ, ಅಮಿತ್ ಶಾ ಅವರ ಕತೆಯೇನು? ಎಂದು ಪ್ರಶ್ನಿಸಿದ್ದರು.

ನರೇಂದ್ರ ಮೋದಿ 3ನೇ ಬಾರಿಯೂ ಪ್ರಧಾನಿಯಾಗುವುದರಲ್ಲಿ ಅನುಮಾನವೇ ಇಲ್ಲ; ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Follow us on

ನವದೆಹಲಿ: ಅಕ್ರಮ ಮದ್ಯ ಹಗರಣ ನೀತಿ ಪ್ರಕರಣದಲ್ಲಿ ತಿಹಾರ್ ಜೈಲಿನಿಂದ (Tihar Jail) ಜಾಮೀನಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal), ಬಿಜೆಪಿಯಲ್ಲಿ 75 ವರ್ಷ ದಾಟಿದವರನ್ನು ರಾಜಕೀಯದಿಂದ ದೂರ ಇಡಲಾಗುತ್ತದೆ, ಅವರಿಗೆ ನಿವೃತ್ತಿ ನೀಡಲಾಗುತ್ತದೆ. ಹೀಗಾಗಿ, ಭಾರತೀಯ ಜನತಾ ಪಕ್ಷ (BJP) ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಮೂಲೆಗುಂಪು ಮಾಡಲಿದೆ. ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬುತ್ತಿದ್ದಂತೆ ಅಮಿತ್ ಶಾ ಅವರನ್ನು ಪ್ರಧಾನಿಯನ್ನಾಗಿ ಮಾಡಲಾಗುವುದು ಎಂದು ಆರೋಪಿಸಿದ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ ಮತ್ತು ಅವರ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಈ ವಿಚಾರವಾಗಿ ಬಿಜೆಪಿಯೊಳಗಾಗಲೀ ಅಥವಾ ಎನ್‌ಡಿಎಯೊಳಗಾಗಲೀ ಅಥವಾ ದೇಶದ ಜನರ ಮನಸ್ಸಿನಲ್ಲಾಗಲೀ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದಿರುವ ಸಚಿವ ರಾಜನಾಥ್ ಸಿಂಗ್, “ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇಂದು ಬಿಜೆಪಿ ಬಗ್ಗೆ ಯಾವ ರೀತಿಯ ಆಧಾರರಹಿತ ಮಾತುಗಳನ್ನು ಹೇಳಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಉದ್ದೇಶ ಈ ಚುನಾವಣೆಯಲ್ಲಿ ಸ್ಪಷ್ಟವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟ ಅದ್ಭುತ ಗೆಲುವು ಸಾಧಿಸಲಿದೆ. ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದು, ಬಿಜೆಪಿಯೊಳಗಾಗಲೀ ಅಥವಾ ಎನ್‌ಡಿಎಯೊಳಗಾಗಲೀ ಈ ಬಗ್ಗೆ ಯಾವುದೇ ಅನುಮಾನವಿಲ್ಲ ದೇಶವಾಸಿಗಳ ಮನಸ್ಸಿನಲ್ಲೂ ಅನುಮಾನ ಇಲ್ಲ.” ಎಂದಿದ್ದಾರೆ.

ಇದನ್ನೂ ಓದಿ: Rahul Gandhi: ನಿಮಗೂ ಟೆಂಪೋದಲ್ಲಿ ಹಣ ಬರುತ್ತಿತ್ತಾ?; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

“ಪ್ರಧಾನಿ ಮೋದಿ ರಾಜಕೀಯದಲ್ಲಿ ವಿಶ್ವಾಸಾರ್ಹತೆಯ ಸಂಕೇತವಾದರೆ, ಕೇಜ್ರಿವಾಲ್ ರಾಜಕೀಯದಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟಿನ ಸಂಕೇತವಾಗಿದೆ. ಬಿಜೆಪಿಯ ಮನಸ್ಸಿನಲ್ಲಿ ಮೋದಿ ಇದ್ದಾರೆ, ಈ ದೇಶದಲ್ಲಿ ಮೋದಿ ಅವರ ನಾಯಕತ್ವ ಇರಲಿದೆ. ಸಾರ್ವಜನಿಕರ ಮನಸ್ಸಿನಲ್ಲಿ ಅವರು ಹೊಂದಿರುವ ವಿಶ್ವಾಸಾರ್ಹತೆ ಈ ದೇಶವು ಮೂರನೇ ಬಾರಿಗೆ ಪ್ರಧಾನಿಯಾಗುವ ಮೂಲಕ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮತ್ತು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ತನ್ನ ಸಂಕಲ್ಪವನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ಈ ದೇಶ ಹೊಂದಿದೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್ ಖುಷಿಪಡಬೇಕಾಗಿಲ್ಲ, ಮೋದಿಜೀ ಅವರ ಅವಧಿ ಪೂರ್ಣಗೊಳಿಸುತ್ತಾರೆ: ಅಮಿತ್ ಶಾ

ಇಂದು ಮುಂಜಾನೆ, ಅರವಿಂದ್ ಕೇಜ್ರಿವಾಲ್ ಅವರ ‘ಮುಂದಿನ ಪ್ರಧಾನಿ ಹೇಳಿಕೆ’ಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯಲ್ಲಿ ಅಂತಹ ’75 ವರ್ಷಗಳ ನಿವೃತ್ತಿ’ ನಿಬಂಧನೆ ಇಲ್ಲ, ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ ಮತ್ತು ಅವರ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ