ಚೀನಾ ವಶಪಡಿಸಿಕೊಂಡ ಭಾರತದ ಭೂಮಿಯ ಬಗ್ಗೆ ಮೌನವೇಕೆ?; ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

|

Updated on: Apr 03, 2025 | 3:43 PM

ಇಂದು ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಿದೇಶಿಯರ ಮುಂದೆ ತಲೆ ಬಾಗುವುದು ಬಿಜೆಪಿಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿಯೇ ಇದೆ ಎಂದು ಹೇಳಿದರು. ಲೋಕಸಭೆಯಲ್ಲಿ ಭಾಷಣ ಮಾಡುವಾಗ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ಭಾರತದ ಮೇಲಿನ ಅಮೆರಿಕದ ಸುಂಕಗಳ ಪರಿಸ್ಥಿತಿಯನ್ನು ಪ್ರಸ್ತಾಪಿಸಿದರು.

ಚೀನಾ ವಶಪಡಿಸಿಕೊಂಡ ಭಾರತದ ಭೂಮಿಯ ಬಗ್ಗೆ ಮೌನವೇಕೆ?; ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
Rahul Gandhi
Follow us on

ನವದೆಹಲಿ, ಏಪ್ರಿಲ್ 3: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ( Rahul Gandhi) ಭಾರತದ ಮೇಲೆ ಅಮೆರಿಕ ವಿಧಿಸಿರುವ ಸುಂಕಗಳ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಹಾಗೇ, ಚೀನಾ ದೇಶವು ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ವಿಷಯದ ಬಗ್ಗೆ ಚೀನಾಕ್ಕೆ ಪತ್ರ ಬರೆದಿದ್ದಾರೆ. ಆದರೆ “ನಮ್ಮ ದೇಶದ ಸರ್ಕಾರ”ದ ಬದಲಾಗಿ ಬೀಜಿಂಗ್‌ನ ರಾಯಭಾರಿಯ ಮೂಲಕ ಈ ಮಾಹಿತಿ ಹೊರಬಂದಿದೆ ಎಂದು ಅವರು ಟೀಕಿಸಿದ್ದಾರೆ.

“ನಾವು ನಮ್ಮ ಭೂಮಿಯನ್ನು ಮರಳಿ ಪಡೆಯಬೇಕು. ಪ್ರಧಾನಿ ಮತ್ತು ರಾಷ್ಟ್ರಪತಿ ಈಗಾಗಲೇ ಚೀನಿಯರಿಗೆ ಪತ್ರ ಬರೆದಿದ್ದಾರೆ ಎಂದು ನನಗೆ ತಿಳಿದುಬಂದಿದೆ. ನಾವು ಇದನ್ನು ನಮ್ಮ ದೇಶದವರ ಬದಲಾಗಿ ಚೀನಾದ ರಾಯಭಾರಿಯಿಂದ ತಿಳಿದುಕೊಳ್ಳುವಂತಾಗಿದೆ ಎಂಬುದು ಬೇಸರದ ಸಂಗತಿ. ಮತ್ತೊಂದೆಡೆ, ನಮ್ಮ ಮಿತ್ರ ರಾಷ್ಟ್ರ ನಮ್ಮ ಮೇಲೆ ಸುಂಕ ವಿಧಿಸಲು ನಿರ್ಧರಿಸಿದೆ. ಇದು ನಮ್ಮನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ. ಭಾರತ ಸರ್ಕಾರ ನಮ್ಮ ಭೂಮಿಯ ಬಗ್ಗೆ ಏಕೆ ಮೌನ ವಹಿಸಿದೆ? ಸುಂಕದ ವಿಷಯದ ಬಗ್ಗೆ ನೀವು ಏನು ಮಾಡುತ್ತೀರಿ?” ಎಂದು ಅವರು ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ
ಹೊಸ ಪಾಡ್‌ಕಾಸ್ಟ್‌ನಲ್ಲಿ ಡೈವೋರ್ಸ್ ಬಗ್ಗೆ ಚರ್ಚಿಸಿದ ಮಿಚೆಲ್ ಒಬಾಮಾ
ಪಾಕಿಸ್ತಾನದಲ್ಲಿ ರೈಲು ಹೈಜಾಕ್;27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ
ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ
ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರಿಂದ ಪರಸ್ಪರ ಹಲ್ಲೆ

ಇದನ್ನೂ ಓದಿ: Waqf Bill: ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ವಕ್ಫ್​ ತಿದ್ದುಪಡಿ ಮಸೂದೆ ಅಂಗೀಕಾರ, ರಾಜ್ಯಸಭೆಯಲ್ಲಿ ಇಂದು ಮಂಡನೆ

ಭಾರತ-ಚೀನಾ ಗಡಿ ಸಮಸ್ಯೆಯನ್ನು ಉಲ್ಲೇಖಿಸಿದ ರಾಯ್‌ಬರೇಲಿ ಸಂಸದ ರಾಹುಲ್ ಗಾಂಧಿ ಬೀಜಿಂಗ್ ಈಗ “ನಮ್ಮ ಪ್ರದೇಶದ 4,000 ಚದರ ಕಿ.ಮೀ.ಗಿಂತ ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿದೆ” ಎಂದು ಹೇಳಿದ್ದಾರೆ.


ಭಾರತೀಯ ರಫ್ತಿನ ಮೇಲೆ ಪರಸ್ಪರ ಸುಂಕಗಳನ್ನು ವಿಧಿಸುವ ಡೊನಾಲ್ಡ್ ಟ್ರಂಪ್ ಅವರ ಕ್ರಮವು “ನಮ್ಮ ಆರ್ಥಿಕತೆಯನ್ನು ಧ್ವಂಸಗೊಳಿಸಲಿದೆ” ಎಂದು ರಾಹುಲ್ ಗಾಂಧಿ ಹೇಳಿದರು. ಬುಧವಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಟೀಕಿಸಿದ ರಾಹುಲ್ ಗಾಂಧಿ, ಇದು ಮುಸ್ಲಿಮರನ್ನು ಅಂಚಿನಲ್ಲಿಡಲು, ಅವರ ವೈಯಕ್ತಿಕ ಕಾನೂನುಗಳು ಮತ್ತು ಆಸ್ತಿ ಹಕ್ಕುಗಳನ್ನು ದುರ್ಬಲಗೊಳಿಸಲು ಒಂದು ಸಾಧನವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Video: ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ

“ಆರ್‌ಎಸ್‌ಎಸ್, ಬಿಜೆಪಿ ಮತ್ತು ಅವರ ಮಿತ್ರಪಕ್ಷಗಳಿಂದ ಸಂವಿಧಾನದ ಮೇಲಿನ ಈ ದಾಳಿ ಇಂದಿನ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿದೆ. ಆದರೆ ಇದು ಭವಿಷ್ಯದಲ್ಲಿ ಇತರ ಸಮುದಾಯಗಳನ್ನು ಗುರಿಯಾಗಿಸಲು ಒಂದು ಪೂರ್ವನಿದರ್ಶನವನ್ನು ಸ್ಥಾಪಿಸುತ್ತದೆ. ಕಾಂಗ್ರೆಸ್ ಪಕ್ಷವು ಈ ಶಾಸನವನ್ನು ಬಲವಾಗಿ ವಿರೋಧಿಸುತ್ತದೆ. ಏಕೆಂದರೆ ಇದು ಭಾರತದ ಕಲ್ಪನೆಯ ಮೇಲೆಯೇ ದಾಳಿ ಮಾಡುತ್ತದೆ. ಆರ್ಟಿಕಲ್ 25, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ.” ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.


12 ಗಂಟೆಗಳ ಚರ್ಚೆಯ ನಂತರ ಲೋಕಸಭೆಯು ತಡರಾತ್ರಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿತು. ವಿರೋಧ ಪಕ್ಷಗಳು ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತಗಳಿಂದ ತಿರಸ್ಕರಿಸಲಾಯಿತು. ಈ ಮಸೂದೆಯನ್ನು 288 ಪರವಾಗಿ ಮತ್ತು 232 ವಿರುದ್ಧ ಮತಗಳ ಬಳಿಕ ಅಂಗೀಕರಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ