ಮದ್ಯ, ಕರ್ಕಶ ಸಂಗೀತ, ಜತೆಗೆ ಈಶ್ವರನ ಚಿತ್ರ: ವಿವಾದ ಹುಟ್ಟುಹಾಕಿದ ಗೋವಾ ಸನ್​ ಬರ್ನ್​ ಫೆಸ್ಟಿವಲ್

ಒಂದೆಡೆ ಮದ್ಯ ಇನ್ನೊಂದೆಡೆ ಕರ್ಕಶವಾದ ಸಂಗೀತ ಅದರ ಮಧ್ಯೆ ಎಲ್​ಇಡಿ ಪರದೆ ಮೇಲೆ ಈಶ್ವರನ ಚಿತ್ರವಿಟ್ಟಿದ್ದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಇದೀಗ ವಿವಾದ ಭುಗಿಲೆದ್ದಿದೆ. ಡಿಸೆಂಬರ್ 28 ರಿಂದ ಗೋವಾದಲ್ಲಿ ಆರಂಭವಾದ ಸನ್​ ಬರ್ನ್​ ಫೆಸ್ಟಿವಲ್(Sunburn Festival)​ ಇಂದು ಕೊನೆಗೊಳ್ಳುತ್ತಿದೆ.

ಮದ್ಯ, ಕರ್ಕಶ ಸಂಗೀತ, ಜತೆಗೆ ಈಶ್ವರನ ಚಿತ್ರ: ವಿವಾದ ಹುಟ್ಟುಹಾಕಿದ ಗೋವಾ ಸನ್​ ಬರ್ನ್​ ಫೆಸ್ಟಿವಲ್
ಸನ್​ ಬರ್ನ್​ ಫೆಸ್ಟಿವಲ್

Updated on: Dec 31, 2023 | 9:07 AM

ಒಂದೆಡೆ ಮದ್ಯ ಇನ್ನೊಂದೆಡೆ ಕರ್ಕಶವಾದ ಸಂಗೀತ ಅದರ ಮಧ್ಯೆ ಎಲ್​ಇಡಿ ಪರದೆ ಮೇಲೆ ಈಶ್ವರನ ಚಿತ್ರವಿಟ್ಟಿದ್ದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಇದೀಗ ವಿವಾದ ಭುಗಿಲೆದ್ದಿದೆ. ಡಿಸೆಂಬರ್ 28 ರಿಂದ ಗೋವಾದಲ್ಲಿ ಆರಂಭವಾದ ಸನ್​ ಬರ್ನ್​ ಫೆಸ್ಟಿವಲ್(Sunburn Festival)​ ಇಂದು ಕೊನೆಗೊಳ್ಳುತ್ತಿದೆ.

ಆಮ್ ಆದ್ಮಿ ಪಕ್ಷದ ಗೋವಾ ಅಧ್ಯಕ್ಷ ಅಮಿತ್ ಪಾಲೇಕರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ಸನ್​ ಬರ್ನ್​ ಫೆಸ್ಟಿವಲ್​ನಲ್ಲಿ ನೃತ್ಯ, ಸಂಗೀತ, ಮದ್ಯದ ಮಧ್ಯೆ ಶಿವನ ಚಿತ್ರವನ್ನು ಇರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸನಾತನ ಧರ್ಮಕ್ಕೆ ಧಕ್ಕೆಯಾದಂತಾಗಿದೆ ಎಂದಿದ್ದಾರೆ.

ಸನಾತನ ಧರ್ಮದ ಸಮಗ್ರತೆಗೆ ಧಕ್ಕೆ ಉಂಟಾಗಿರುವುದರಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಎಪಿ ನಾಯಕ ಒತ್ತಾಯಿಸಿದ್ದಾರೆ.
ಸನ್ ಬರ್ನ್ ಇಡಿಎಂ ಉತ್ಸವದ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಶುಕ್ರವಾರ ರಾತ್ರಿ ಸನ್‌ಬರ್ನ್ ಆಯೋಜಕರ ವಿರುದ್ಧ ಕಾಂಗ್ರೆಸ್ ಮುಖಂಡ ವಿಜಯ್ ಭಿಕೆ ಮಾಪುಸಾದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಭಿಕೆ ದೂರಿನಲ್ಲಿ ತಿಳಿಸಿದ್ದಾರೆ. 25 ಲಕ್ಷ ಮೌಲ್ಯದ ಮೊಬೈಲ್​ ಫೋನ್​ಗಳ ಕಳ್ಳತನವಾಗಿದೆ. ನಿವಾರದಂದು ಗೋವಾ ಪೊಲೀಸರು ಗ್ಯಾಂಗ್‌ನ ಏಳು ಸದಸ್ಯರನ್ನು ಬಂಧಿಸಿದ್ದಾರೆ, ಇವರೆಲ್ಲರೂ ಕದಿಯುವ ದೃಷ್ಟಿಯಿಂದಲೇ ಮುಂಬೈನಿಂದ ಬಂದಿದ್ದರು ಎನ್ನಲಾಗಿದೆ.

ಮತ್ತಷ್ಟು ಓದಿ: ತೆಲಂಗಾಣದಲ್ಲಿ ನಡೆಯಬೇಕಿದ್ದ ಸನ್​ ಬರ್ನ್​ ಫೆಸ್ಟಿವಲ್ ರದ್ದು

ಈ ಸಂದರ್ಭದಲ್ಲಿ ಆರೋಪಿಗಳ ಕದ್ದ 29 ಮೊಬೈಲ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್​ ಉಪ ವರಿಷ್ಠಾಧಿಕಾರಿ ಜಿವ್ಬಾ ದಳವಿ ತಿಳಿಸಿದ್ದಾರೆ.

ಇಂತಹ ಕೃತ್ಯಗಳು ನಡೆಯಬಹುದು ಎಂದು ಪೊಲೀಸರು ಮೊದಲೇ ಸಿದ್ಧತೆ ಮಾಡಿಕೊಂಡಿದ್ದರು. ಹಾಗಾಗಿ ಪೊಲೀಸರು ಸಾಮಾನ್ಯ ಉಡುಪಿನಲ್ಲಿ ತೆರಳಿದ್ದರು. ಅಷ್ಟೇ ಅಲ್ಲದೆ 82 ಲಕ್ಷ ಮೌಲ್ಯದ ಪಾಸ್​ಗಳನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ ಐವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us