ಟೆಸ್ಟೊಸ್ಟಿರೋನ್ ಪ್ರಮಾಣ ಕಡಿಮೆಯಿದ್ದರೆ ಸೋಂಕಿನ ತೀವ್ರತೆ ಜಾಸ್ತಿ ಎಂದು ಜಾಮಾ ಅಧ್ಯಯನ ಹೇಳುತ್ತದೆ

ಟೆಸ್ಟೊಸ್ಟಿರೋನ್ ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನಾಗಿದ್ದು ಪುರುಷರ ವೃಷಣಗಳು ಇದನ್ನು ಉತ್ಪಾದಿಸುತ್ವವೆ. ಈ ಹಾರ್ಮೋನು ಪುರುಷನ ಬಾಹ್ಯ ಚಹರೆ ಮೇಲೆ ಪ್ರಭಾವ ಬೀರುತ್ತದೆ ಮತ್ತು ಅವನಲ್ಲಿ ಲೈಂಗಿಕ ಅಭಿವೃದ್ಧಿಗೆ ನೆರವಾಗುತ್ತದೆ.

ಟೆಸ್ಟೊಸ್ಟಿರೋನ್ ಪ್ರಮಾಣ ಕಡಿಮೆಯಿದ್ದರೆ ಸೋಂಕಿನ ತೀವ್ರತೆ ಜಾಸ್ತಿ ಎಂದು ಜಾಮಾ ಅಧ್ಯಯನ ಹೇಳುತ್ತದೆ
ಕಡಿಮೆ ಟೆಸ್ಟೊಸ್ಟಿರೋನ್ ಪ್ರಮಾಣ ಅಪಾಯಕಾರಿ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on: May 27, 2021 | 10:03 PM

ಕೊವಿಡ್-19 ಸೋಂಕಿಗೆ ಸಂಬಂಧಿಸಿದಂತೆ ಪುರುಷರಿಗಿಂತ ಮಹಿಳೆಯರೇ ಬೇಗ ಚೇತರಿಸಿಕೊಳ್ಳುತ್ತಾರೆ ಎನ್ನುವುದನ್ನು ವೈದ್ಯರು ಕಂಡುಕೊಂಡಿದ್ದಾರೆ. ಒಂದು ವೈದ್ಯಕೀಯ ವಾದದ ಪ್ರಕಾರ ಹಾರ್ಮೋನುಗಳ ವ್ಯತ್ಯಾಸವೇ ಪುರಷರನ್ನು ಸ್ವಲ್ಪ ದುರ್ಬಲರನ್ನಾಗಿ ಮಾಡುತ್ತದೆ. ಪುರುಷರಲ್ಲಿ ಮಹಿಳೆಯರಿಗಿಂತರ ಹೆಚ್ಚು ಟೆಸ್ಟೊಸ್ಟಿರೋನ್ ಇರುವುದರಿಂದ ಕೆಲ ವಿಜ್ಞಾನಿಗಳು ಈ ಹಾರ್ಮೋನು ಹೆಚ್ಚಿನ ಪ್ರಮಾಣದಲ್ಲಿರುವುದೇ ಅವರನ್ನು ತೊಂದರೆಗೀಡು ಮಾಡುತ್ತಿದೆ.

ಟೆಸ್ಟೊಸ್ಟಿರೋನ್ ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನಾಗಿದ್ದು ಪುರುಷರ ವೃಷಣಗಳು ಇದನ್ನು ಉತ್ಪಾದಿಸುತ್ವವೆ. ಈ ಹಾರ್ಮೋನು ಪುರುಷನ ಬಾಹ್ಯ ಚಹರೆ ಮೇಲೆ ಪ್ರಭಾವ ಬೀರುತ್ತದೆ ಮತ್ತು ಅವನಲ್ಲಿ ಲೈಂಗಿಕ ಅಭಿವೃದ್ಧಿಗೆ ನೆರವಾಗುತ್ತದೆ. ಇದು ವೀರ್ಯಾಣುಗಳ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಪುರಷನಲ್ಲಿ ಲೈಂಗಿಕತೆಯನ್ನು ಉತ್ತೇಜಿಸುತ್ತದೆ. ಮಾಂಸಖಂಡ ಮತ್ತು ಮೂಳೆಗಳ ಬೆಳವಣಿಗೆಯನ್ನೂ ಇದು ನೋಡಿಕೊಳ್ಳುತ್ತದೆ.

ಸರಿ ವಿಷಯಕ್ಕೆ ಬರೋಣ. ಜಾಮಾ ನೆಟ್​ವರ್ಕ್​ ಓಪನ್ ನಡೆಸಿರುವ ಒಂದು ಅಧ್ಯಯನದ ಪ್ರಕಾರ ಟೆಸ್ಟೊಸ್ಟಿರೋನ್ ಪ್ರಮಾಣ ಜಾಸ್ತಿಯಿರುವುದರಿಂದಲ್ಲ, ಅದು ಕಡಿಮೆಯಿರುವುದರಿಂದ ರೋಗದ ತೀವ್ರತೆ ಹೆಚ್ಚುತ್ತದೆ. ಆದರೆ ಸದರಿ ಅಧ್ಯಯನದಲ್ಲಿ ಕಡಿಮೆ ಹಂತದ ಟೆಸ್ಟೊಸ್ಟಿರೋನ್ ಕೋವಿಡ್​-19 ಸೋಂಕಿನ ತೀವ್ರತೆಗೆ ಕಾರಣವೆನ್ನುವುದು ದೃಢಪಟ್ಟಿಲ್ಲ. ಕಡಿಮೆ ಪ್ರಮಾಣದ ಟೆಸ್ಟೊಸ್ಟಿರೋನ್ ಬೇರೆ ಕೆಲ ಅಂಶಗಳ ಸೂಚಕವಾಗಿರಬಹುದು.

ಸಂಶೋಧಕರು ಮಿಸ್ಸೋರಿಯ ಸೆಂಟ್​ ಲೂಯಿಯಲ್ಲಿರುವ ಬಾರ್ನ್ಸ್-ಜ್ಯೂಯಿಷ್ ಆಸ್ಪತ್ರೆಗೆ ಕೋವಿಡ್-19 ಚಿಕಿತ್ಸೆಗೆ ಬಂದಿದ್ದ 90 ಪುರುಷರು ಮತ್ತು 62 ಮಹಿಳೆಯರ ರಕ್ತ ನಮೂನೆಯಲ್ಲಿದ್ದ ಹಾರ್ಮೋನುಗಳ ಪ್ರಮಾಣವನ್ನು ಅಳತೆ ಮಾಡಿದ್ದಾರೆ. ಮಹಿಳೆಯರ ಪೈಕಿ ಹಾರ್ಮೋನಿನ ಪ್ರಮಾಣ ಮತ್ತು ಸೋಂಕಿನ ತೀವ್ರತೆ ನಡುವೆ ಯಾವುದೇ ಸಂಬಂಧ ಕಂಡುಬರಲಿಲ್ಲ. ಪುರುಷರಲ್ಲಿ ಕೋವಿಡ್​​-19 ಸೋಂಕಿನ ತೀವ್ರತೆಗೆ ಕೇವಲ ಟೆಸ್ಟೊಸ್ಟಿರೋನ್ ಪ್ರಮಾಣವನ್ನು ಲಿಂಕ್​ ಮಾಡಲಾಗಿತ್ತು.

ಹಾರ್ಮೋನಿನ ಪ್ರಮಾಣ ಕಡಿಮೆಯಿದ್ದಷ್ಟು ಸೋಂಕಿನ ತೀವ್ರತೆ ಜಾಸ್ತಿಯಿತ್ತು ಎನ್ನುವುದು ಅಧ್ಯಯನದಲ್ಲಿ ದೃಢಪಟ್ಟಿತು. ಉದಾಹರಣೆಗೆ, ಟೆಸ್ಟೊಸ್ಟಿರೋನ್ ಪ್ರಮಾಣ ಕಡಿಮೆ ಇರುವವರು ವೆಂಟಿಲೇಟರ್​ಗೆ ಹೋಗುವ ಅಪಾಯ ಜಾಸ್ತಿಯಿತ್ತು. ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಇಲ್ಲವೆ ಸಾವು: ಎರಡೇ ಸಾಧ್ಯತೆಗಳಿದ್ದವು. ಈ ಅಧ್ಯಯನ ನಡೆಯುತ್ತಿದ್ದಾಗ 25 ಪುರುಷರು 37 ರೋಗಿಗಳು ಮರಣ ಹೊಂದಿದರು.

ಇದನ್ನೂ ಓದಿ: Covid Vaccine Guidelines ಕೊವಿಡ್​ನಿಂದ ಚೇತರಿಸಿಕೊಂಡವರು ಮೂರು ತಿಂಗಳ ನಂತರ ಲಸಿಕೆ ತೆಗೆದುಕೊಂಡರೆ ಸಾಕು: ಕೇಂದ್ರ

ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಒಂದೇ ದಿನ 24,214, ಬೆಂಗಳೂರಿನಲ್ಲಿ 5,949 ಜನರಿಗೆ ಕೊವಿಡ್ ಸೋಂಕು ದೃಢ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ